ಶುಕ್ರವಾರ, ಮೇ 20, 2022
23 °C

ಕಾಲುವೆ ಒಡೆದು ಕೆರೆ ನಿರ್ಮಿಸಿದವರ ವಿರುದ್ದ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಕಾಲುವೆ ಒಡೆದು ಅಕ್ರಮವಾಗಿ ಕೆರೆ ನಿರ್ಮಿಸುತ್ತಿದ್ದು ನಿಗಮದ ಎಂಜಿನಿಯರ್‌ಗಳು ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಆರೋಪಿಸಿ  ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್.ಶರಣುರಡ್ಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ಕೆಬಿಜೆಎನ್‌ಎಲ್ ನಿಗಮದ ಉಪ ವಿಭಾಗದ ಕಚೇರಿಯ ಕೂಗಳತೆಯ ದೂರದಲ್ಲಿಯೇ ಕಾಲುವೆ ಒಡೆದು ಕೆರೆ ನಿರ್ಮಿಸಿದ್ದಾರೆ. ಎಂಜಿನಿಯರ್ ಮಾತ್ರ ಯಾವುದೇ ಕ್ರಮ ತೆಗೆದೊಳ್ಳುತ್ತಿಲ್ಲ. ಅದರಲ್ಲಿ ಆಂಧ್ರವಲಸಿಗರು ಇಂತಹ ಅಕ್ರಮ ಕೆರೆಗಳನ್ನು ನಿರ್ಮಿಸಿದ್ದಾರೆ. ಕೆಳಭಾಗದ ರೈತರಿಗೆ ನೀರು ದೊರೆಯುತ್ತಿಲ್ಲವೆಂದು ಅವರು ದೂರಿದ್ದಾರೆ.ಬರುವ ದಿನಗಳಲ್ಲಿ ನೀರಿಗಾಗಿ ರೈತರ ನಡುವೆ ಸಂಘರ್ಷ ನಡೆಯುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಕಾನೂನು ಉಲ್ಲಂಘಿ ಸಿದ ರೈತರ ವಿರುದ್ಧ ಹಾಗೂ ಕೆರೆ ನಿರ್ಮಿಸಲು ಅವಕಾಶ ನೀಡಿದ ಜಮೀನು ಮಾಲಿಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.ದಲಿತ ಮುಖಂಡ ದೇವಿಂದ್ರ ಚಲುವಾದಿ, ಭೀಮರಾಯ ಗಡ್ಡೆಸೂಗೂರ, ವಿರೇಶ ಕೊಳ್ಳೂರ, ರಾಯಪ್ಪ ವಡಿಗೇರಾ, ನಿಂಗಪ್ಪ ಅನಕಸೂಗೂರ ಮತ್ತಿತರರು ಇದ್ದರು.ಸ್ಪಷ್ಟನೆ: ಹತ್ತಿಗುಡೂರ ಗ್ರಾಮದ ಬಳಿ 3 ಕೆರೆ ನಿರ್ಮಿಸಿದ್ದಾರೆ.  ನಿಗಮದ ಸಿಬ್ಬಂದಿಯ ಜೊತೆಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಕಾಲುವೆ ಒಡೆದು ಕೆರೆ ನಿರ್ಮಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ತರಲಾಗಿದೆ.ಅಲ್ಲದೆ ಶಹಾಪುರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರು ನೀಡಲಾಗಿದೆ ಎಂದು ಹತ್ತಿಗುಡೂರ ಉಪ ವಿಭಾಗದ ಸಹಾಯಕ ಎಂಜಿನಿಯರ್ ಕಾಂಬ್ಳೆ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.