ಬುಧವಾರ, ಮೇ 12, 2021
17 °C

ಕಾಳಗದಲ್ಲಿ ಕಾಡಾನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೂಡು ವಲಯದಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ 15 ವರ್ಷದ ಗಂಡಾನೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.



ಮತ್ತಿಗೂಡು ಅರಣ್ಯದ ಸಿಪಿಟಿ 4 ಚೌಳಿಮರ ಎಂಬಲ್ಲಿ ಆನೆಯ ಮೃತದೇಹವು  ಇಲಾಖೆ ಸಿಬ್ಬಂದಿಗೆ ಶುಕ್ರವಾರ ದೊರೆತಿದೆ. ಅರಣ್ಯದೊಳಗೆ ನಾಲ್ಕೈದು ದಿನಗಳ ಹಿಂದೆ ಎರಡು ಆನೆಗಳ ನಡುವೆ ಕಾಳಗ ನಡೆದು ಆ ಸಮಯದಲ್ಲಿ ಈ ಆನೆ ಮೃತಪಟ್ಟಿರಬಹುದು ಎಂದು ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.



ಸಿಬ್ಬಂದಿಯಾದ ಸೋಮು, ಶಿವಶಂಕರ್,  ರಾಜಶೇಖರ್ ಮತ್ತು ಅಣ್ಣಯ್ಯ ಶುಕ್ರವಾರ ಚೌಳಿಮರ ಸಿಪಿಟಿ 4ರಲ್ಲಿ ಗಸ್ತು ತಿರುಗುತ್ತಿದ್ದಾಗ ದುರ್ವಾಸನೆ ಆಧರಿಸಿ ಸ್ಥಳಕ್ಕೆ ತೆರಳಿದಾಗ ಆನೆ ಸತ್ತಿರುವುದು ಖಾತರಿಯಾಗಿದೆ.

ಆನೆಯ ದಂತ 1 ಮೀಟರ್ ಉದ್ದ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.