ಐದು ವರ್ಷಗಳ ಹಿಂದೆ ಮಿರಿಮಿರಿ ಮಿಂಚುವ ಸೀರೆ ತೊಟ್ಟು, ಮೈಮೇಲೆ ಭಾರೀ ಆಭರಣ ತೊಟ್ಟ ನಲವತ್ತು ದಾಟಿದ ಮಹಿಳೆಯರು ಕಿಟ್ಟಿ ಪಾರ್ಟಿಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ಸ್ಥಿತಿವಂತ ಮನೆಯ ಗೃಹಿಣಿಯರೇ ದೊಡ್ಡ ಸಂಖ್ಯೆಯಲ್ಲಿದ್ದ ಇಂಥ ಕಿಟ್ಟಿ ಪಾರ್ಟಿಗಳಲ್ಲಿ ಮೋಜಿನ ಆಟದಲ್ಲೋ ಅಥವಾ ಮತ್ತೊಬ್ಬರ ಮನೆಯ ವಿಷಯ ಕುರಿತು ಹರಟೆಯೇ ಪ್ರಮುಖವಾಗಿತ್ತು. ಮಧ್ಯಾಹ್ನ ಪುಷ್ಕಳ ಭೋಜನ ಸವಿದು, ಆ ತಿಂಗಳ ಕಿಟ್ಟಿಯನ್ನು ಯಾರು ಗೆದ್ದರು ಎಂದು ತಿಳಿದುಕೊಳ್ಳುವುದರ ಮೂಲಕ ಮಾಸಿಕ ಕಿಟ್ಟಿ ಪಾರ್ಟಿ ಕೊನೆಗೊಳ್ಳುತ್ತಿತ್ತು.

ಆದರೆ ಕಾಲ ಬದಲಾದಂತೆ ಕಿಟ್ಟಿ ಪಾರ್ಟಿ ಹಾಗೂ ಸಮೂಹದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ವಿಲಾಸಿ ಪಾರ್ಟಿಗಳು, ಕಾಕ್ಟೇಲ್ನ ಸವಿ, ಪಂಚ ತಾರಾ ಹೋಟೆಲ್ನ ಮೋಜು ಮಸ್ತಿ, ವಾರಾಂತ್ಯದ ಪ್ರವಾಸ, ಆಗೊಮ್ಮೆ ಈಗೊಮ್ಮೆ ವಿದೇಶಕ್ಕೆ ಹೋಗಿ ಬರುವ ವ್ಯವಸ್ಥೆ ಒಂದೆಡೆ. ಮತ್ತೊಂದೆಡೆ ಪರಿಸ್ಪರ ಸಹಕಾರದ ಜತೆಗೆ ಸಮಾಜ ಮುಖಿ ಕಾರ್ಯಗಳತ್ತ, ಅಧ್ಯಾತ್ಮದೆಡೆಗೆ ಮುಖ ಮಾಡಿದ ಕಿಟ್ಟಿ ಗುಂಪುಗಳೂ ನಗರದಲ್ಲಿ ಸಾಕಷ್ಟಿವೆ. ಗೃಹಿಣಿಯರಿಗಷ್ಟೇ ಸೀಮಿತವಾಗಿದ್ದ ಕಿಟ್ಟಿ ಗುಂಪುಗಳನ್ನು ಇಂದು ವೃತ್ತಿಪರರೂ ಕಟ್ಟಿಕೊಂಡಿದ್ದಾರೆ. ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಕಿಟ್ಟಿಗಳಲ್ಲಿ ಇಂದು ಪುರುಷರೂ ಸೇರಿಕೊಂಡ ಉದಾಹರಣೆಗಳೂ ಇವೆ.

ಕೆಲವೇ ನೂರು ರೂಪಾಯಿಗಳಲ್ಲಿ ಮುಗಿಯುತ್ತಿದ್ದ ಕಿಟ್ಟಿ ಪಾರ್ಟಿಗಳು ಇಂದು ಮೂರರಿಂದ ಐದು ಸಾವಿರ ರೂಪಾಯಿ ಖರ್ಚು ಮಾಡುವಷ್ಟರ ಮಟ್ಟಿಗೆ ಇದರ ಪ್ರಾಮುಖ್ಯತೆ ಹೆಚ್ಚಾಗಿದೆ. ಆಯಾಯ ವಯೋಮಾನದವರು ಹಾಗೂ ಸಮಾನ ಮನಸ್ಕರು ಜತೆಗೂಡಿ ಆಚರಿಸುವ ಇಂಥ ಕಿಟ್ಟಿ ಪಾರ್ಟಿಗಳಿಗಾಗಿಯೇ ಸಾಕಷ್ಟು ಹೋಟೆಲ್ಗಳು ಸಭಾಂಗಣವನ್ನು ಸಿದ್ಧಪಡಿಸಿ ನೀಡುವ ಹಾಗೂ ಬಗೆಬಗೆಯ ರುಚಿಕರ ಆಹಾರ ನೀಡುವ ಕ್ಯಾಟರಿಂಗ್ ವ್ಯವಹಾರವೂ ಗರಿಗೆದರಿದೆ.

ಫ್ಯಾಷನ್, ಆರೋಗ್ಯವೇ ವಿಷಯ
ಎಲ್ಲಾ ಕಿಟ್ಟಿ ಪಾರ್ಟಿಗಳಂತೆಯೇ ನಮ್ಮದೂ. ಆದರೆ ನಮ್ಮ ಅಗತ್ಯ ಹಾಗೂ ಅನುಕೂಲಕ್ಕೆ ತಕ್ಕಂತೆ ಅದನ್ನು ವಿನ್ಯಾಸಗೊಳಿಸಿದ್ದೇವೆ ಎಂದೆನ್ನುತ್ತಾರೆ ಕಳೆದ 20 ವರ್ಷಗಳಿಂದ ಕಿಟ್ಟಿ ಪಾರ್ಟಿ ನಡೆಸಿಕೊಂಡು ಬರುತ್ತಿರುವ ಉದಯಾ ರೆಡ್ಡಿ. ಇವರ ಕಿಟ್ಟಿ ಸಮೂಹದಲ್ಲಿ ಮೂವತ್ತು ಮಹಿಳೆಯರಿದ್ದಾರಂತೆ. ‘ಪ್ರತಿ ಕಿಟ್ಟಿ ಪಾರ್ಟಿಯನ್ನು ಗುಂಪಿನ ಮೂವರು ವಹಿಸಿಕೊಳ್ಳುತ್ತಿದ್ದಾರೆ. ಅವರವರ ಅಭಿರುಚಿ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಊಟೋಪಚಾರಗಳು ನಡೆಯುತ್ತವೆ. ಉಳಿದಂತೆ ಮಧ್ಯ ವಯಸ್ಸಿನವರೇ ಹೆಚ್ಚಾಗಿರುವುದರಿಂದ ದೇಹ ಹಾಗೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರ ಕುರಿತು ಹೆಚ್ಚು ಮಾತುಗಳು ಕೇಳಿಬರುತ್ತವೆ. ಉಳಿದಂತೆ ಮಕ್ಕಳು, ಪ್ರಸಕ್ತ ವಿದ್ಯಮಾನ ಹಾಗೂ ಫ್ಯಾಷನ್ ಕುರಿತು ಹೆಚ್ಚಾಗಿ ಹರಟೆ ಹೊಡೆಯುತ್ತೇವೆ. ನೆನಪಿನ ಶಕ್ತಿ ವೃದ್ಧಿಸುವ ಹಾಗೂ ಮೆದುಳಿಗೆ ಕಸರತ್ತು ನೀಡುವ ಆಟಗಳನ್ನು ಆಡುತ್ತೇವೆ. ಜತೆಗೆ ಅಗತ್ಯಬಿದ್ದಾಗ ಪರಸ್ಪರ ನೆರವಾಗುತ್ತೇವೆ. ಕಿಟ್ಟಿ ಗುಂಪಿಯನಲ್ಲಿರುವ ಹಲವರ ಪೋಷಕರು ಪರಸ್ಪರ ಪರಿಚಯವಿರುವುದರಿಂದ ಕೆಲವೊಮ್ಮೆ ಅವರೂ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಇದರಿಂದ ಅವರಿಗೂ ಒಂದು ಬದಲಾವಣೆ ಸಿಗುತ್ತದೆ’ ಎನ್ನುವುದು ಉದಯಾ ರೆಡ್ಡಿ ಅವರ ಮಾತು.

ವ್ಯಾಪಾರ ಕೇಂದ್ರವಾದ ಕಿಟ್ಟಿ
ಕಿಟ್ಟಿ ಪಾರ್ಟಿಗಳು ಇಂದು ಕೇವಲ ಟೈಂಪಾಸ್ಗಷ್ಟೇ ಸಿಮಿತವಾಗಿಲ್ಲ. ಬದಲಿಗೆ ಹಲವರಿಗೆ ಅದು ಒಂದು ವ್ಯಾಪಾರ ಕೇಂದ್ರವೂ ಹೌದು. ಮನೆಯಲ್ಲೇ ಕುಳಿತು ಸೀರೆ, ಸಲ್ವಾರ್, ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವವರು ಕಿಟ್ಟಿ ಪಾರ್ಟಿಗಳ ಮೂಲಕ ತಮ್ಮ ವಹಿವಾಟನ್ನು ವಿಸ್ತರಿಸಿಕೊಂಡಿದ್ದೂ ಇದೆ. ಇಂಥವರಲ್ಲಿ ಕಿರಿಯರೇ ಹೆಚ್ಚು. ಟಪ್ಪರ್ವೇರ್, ಮೋದಿಕೇರ್, ಆ್ಯಮ್ವೇ ಮುಂತಾದ ಕಂಪೆನಿಗಳ ಮಾರಾಟ ಮಾಡುವ ಕೇಂದ್ರವಾಗಿಯೂ ಕಿಟ್ಟಿ ಪಾರ್ಟಿಗಳು ಪರಿವರ್ತನೆಗೊಂಡಿವೆ. ಪಾರ್ಟಿಯ ಜತೆಗೆ ಸ್ವಂತದ ವ್ಯಾಪಾರವನ್ನೂ ವೃದ್ಧಿಸಿಕೊಳ್ಳುವ ತಂತ್ರ ಹಲವರದ್ದು. ಹೀಗಾಗಿ ಒಂದಕ್ಕಿಂತ ಹೆಚ್ಚಿನ ಕಿಟ್ಟಿ ಗುಂಪುಗಳೊಂದಿಗೆ ಹಲವರು ಗುರುತಿಸಿಕೊಂಡಿರುವುದೂ ಇದೆ.

ಬದಲಾದ ಫ್ಯಾಷನ್ ಮಂತ್ರ
ಜರತಾರಿ ಸೀರೆ ತೊಟ್ಟು, ಸಾಕಷ್ಟು ಆಭರಣ ತೊಟ್ಟ ಮಹಿಳೆಯರಿಂದಲೇ ತುಂಬಿರುತ್ತಿದ್ದ ಕಿಟ್ಟಿಗಳ ಕಾಲ ಮರೆಯಾಗಿದೆ. ಈಗಿನ ಕಿಟ್ಟಿ ಪಾರ್ಟಿಗಳಲ್ಲಿ ಆಧುನಿಕ ವಸ್ತ್ರಗಳದ್ದೇ ಕಾರುಬಾರು. ಸಲ್ವಾರ್ ಜತೆಗೆ, ಜೀನ್ಸ್, ಡೆನಿಮ್ಸ್, ಉದ್ದನೆಯ ಗೌನ್, ಮಿಡಿಗಳು ಇಂದಿನ ಕಿಟ್ಟಿ ಸದಸ್ಯರು ತೊಡುವ ವಸ್ತ್ರಗಳು.

ಸಾಮಾಜಿಕ ತಾಣ
ತಮ್ಮ ಸಾಮಾಜಿಕ ವ್ಯಾಪ್ತಿ ಹೆಚ್ಚಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗುಂಪಿನ ಚಟುವಟಿಕೆಗಳ ಕುರಿತು ಹಂಚಿಕೊಳ್ಳುವ ತವಕ ಎಲ್ಲರಲ್ಲೂ. ಹೀಗಾಗಿ ಕಿಟ್ಟಿ ಪಾರ್ಟಿಗಳ ಚಿತ್ರಗಳನ್ನು ಫೇಸ್ಬುಕ್ಗಳಲ್ಲಿ ಪೋಸ್ಟ್ ಮಾಡುವುದು. ವಾಟ್ಸ್ಆ್ಯಪ್ ಮೂಲಕ ಪರಸ್ಪರ ಹಂಚಿಕೊಳ್ಳುವುದೂ ಸಹ ಇಂದು ಸಾಮಾನ್ಯವಾಗಿದೆ. ಇದಕ್ಕೆ ಲೈಕ್ಗಳು, ಕಾಮೆಂಟ್ಗಳ ಪಟ್ಟಿಯೂ ದೊಡ್ಡದಾಗಿರುತ್ತದೆ.

ಹರಟೆ, ಆಟ ಮತ್ತು ಊಟ
ವಾರದ ದಿನಗಳಲ್ಲೇ ಹೆಚ್ಚಾಗಿ ನಡೆಯುವ ಕಿಟ್ಟಿ ಪಾರ್ಟಿಗಳಿಗಾಗಿ ಹೋಟೆಲ್ಗಳ ಲೌಂಜ್ಗಳನ್ನು ಕಾಯ್ದಿರಿಸುವುದುಂಟು. ಸಮಾನ್ಯವಾಗಿ 25 ಸದಸ್ಯರನ್ನು ಮೀರದ ಮಹಿಳೆಯರ ತಂಡಗಳು ಅವರವರ ಅಗತ್ಯಕ್ಕನುಗುಣವಾಗಿ ಹೋಟೆಲ್ ಕಾಯ್ದಿರಿಸುತ್ತಾರೆ. ಕೆಲವರು ಮೂರು ಕೋರ್ಸ್ಗಳ ಊಟ ಕೇಳುತ್ತಾರೆ. ಇನ್ನೂ ಕೆಲವರು ಪಾನೀಯಗಳ ಜತೆ ಸ್ನ್ಯಾಕ್ಸ್ ಹಾಗೂ ಊಟ ಕೇಳುವುದೂ ಉಂಟು. ಪಾರ್ಟಿಯ ಬಹುಪಾಲು ಮಾತು ತುಂಬಿರುವುದರಿಂದ ಹಿನ್ನೆಲೆ ಸಂಗೀತವಾಗಲೀ ಅಥವಾ ಇನ್ಯಾವುದೇ ಮನರಂಜನಾ ಕಾರ್ಯಕ್ರಮಗಳಿಗೆ ಬೇಡಿಕೆ ಇಲ್ಲ’ ಎಂದು ಹೇಳುತ್ತಾರೆ ಎಂ.ಜಿ. ರಸ್ತೆಯ ಬ್ಲಿಮೇ ರೆಸ್ಟೋರೆಂಟ್ನ ಶಿವಂತ್ ನಿಷ್ಕಂ.

ಮ್ಯಾಂಗೋ ಟ್ರೀ ರೆಸ್ಟೋರೆಂಟ್ನ ನಿರ್ಮಲಾ ಬಾಲಕೃಷ್ಣನ್ ಅವರ ಪ್ರಕಾರ ‘ಕಿಟ್ಟಿ ಆಯೋಜಿಸುವ ತಂಡದ ಸದಸ್ಯರೇ ಅಂದಿನ ಪಾರ್ಟಿ ಹೇಗಿರಬೇಕೆಂದು ನಿರ್ಧರಿಸಿರುತ್ತಾರೆ. ಇದಕ್ಕಾಗಿ ಕೆಲವರು ಕಾರ್ಡ್ಸ್, ತಂಬೋಲಾ ಅಥವಾ ಇನ್ನಿತರ ಕ್ರೀಡಾ ಸಾಮಾಗ್ರಿಗಳನ್ನು ತರುತ್ತಾರೆ. ಸಾಮಾನ್ಯವಾಗಿ ಮಧ್ಯಾಹ್ನ 12ರಿಂದ 4ರವರೆಗೆ ನಡೆಯುವ ಕಿಟ್ಟಿ ಪಾರ್ಟಿಯ ಊಟ ತಡವಾಗಿ ನಡೆಯುತ್ತದೆ. ಇಂಥ ಪಾರ್ಟಿಗಳನ್ನು ಆಯೋಜಿಸುವ ಗುಂಪುಗಳಲ್ಲಿ ಹೆಚ್ಚಾಗಿ 28ರಿಂದ 35 ಹಾಗೂ 35ರಿಂದ 55ರ ವಯೋಮಾನದವರೇ ಹೆಚ್ಚು.

ಕಿಟ್ಟಿ ಪಾರ್ಟಿಗೊಂದು ಉದ್ದೇಶ
‘ಮಕ್ಕಳು ತಮ್ಮದೇ ಕೆಲಸದಲ್ಲಿ ಮುಳುಗಿರುವ ಈ ಕಾಲದಲ್ಲಿ ನಮಗೂ ಜನರೊಂದಿಗೆ ಬೆರೆಯುವ ಅವಶ್ಯಕತೆ ಇರುತ್ತದೆ. ಕಿಟ್ಟಿ ಪಾರ್ಟಿ

ಅಂಥದ್ದೊಂದು ಸಂಗತಿಗೆ ಕಾರಣವಷ್ಟೇ. ಕಿಟ್ಟಿ ಎಂದಾಕ್ಷಣ ಮೋಜು, ನೆರೆಮನೆಯ ಮಾತು ಎಂದೇ ಕೆಲವರು ಅಂದುಕೊಂಡಿರುತ್ತಾರೆ. ಆದರೆ ಅದಕ್ಕಿಂತ ಹೊರತಾಗಿದೆ ನಮ್ಮ ಕಿಟ್ಟಿ ಸಮೂಹ. ಕೇವಲ 8 ವರ್ಷಗಳ ಹಿಂದೆಯಷ್ಟೇ ಆರಂಭವಾದ ನಮ್ಮ ಗುಂಪಿನಲ್ಲಿರುವುದು 15 ಮಂದಿ. ಇವರೆಲ್ಲರೂ 50ರಿಂದ 70ರ ವಯೋಮಾನದವರು. ಬಹುತೇಕರ ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಉಳಿದವರ ಮಕ್ಕಳು ತಮ್ಮದೇ ವೃತ್ತಿಯಲ್ಲಿ ಸಮಯವಿಲ್ಲದಷ್ಟು ಬಿಸಿಯಾಗಿದ್ದಾರೆ. ಹೀಗಾಗಿ ನಮ್ಮದೇ ವಯೋಮಾನದವರೊಂದಿಗೆ ಆಗಾಗ ಒಂದಷ್ಟು ಹೊತ್ತು ಕಳೆಯುತ್ತಾ ನಮ್ಮನ್ನು ನಾವು ಸಂತೋಷವಾಗಿಟ್ಟುಕೊಳ್ಳುವತ್ತ ಗಮನ ಕೇಂದ್ರೀಕರಿಸಿದ್ದೇವೆ. ಇಲ್ಲಿ ಪರರ ಮನೆ ವಿಷಯಗಳಿಗೆ ಆಸ್ಪದವಿಲ್ಲ’ ಎಂದೆನ್ನುತ್ತಾರೆ ಹಿರಿಯ ಗಾಯಕಿ ಇಂದೂ ವಿಶ್ವನಾಥ್.

ಗಿರಿನಗರದಲ್ಲಿರುವ ಇಂದೂ ವಿಶ್ವನಾಥ್ ಅವರ ಕಿಟ್ಟಿ ಸ್ನೇಹಿತೆಯರು ಜೆ.ಪಿ. ನಗರ, ಜಯನಗರ ಹೀಗೆ ಬೇರೆ ಬೇರೆ ಬಡಾವಣೆಗಳಲ್ಲಿದ್ದಾರಂತೆ. ತಿಂಗಳಿಗೊಮ್ಮೆ ಒಬ್ಬರ ಮನೆಯಲ್ಲಿ ಸೇರುವ ಇವರು ಸಭೆಯ ಉದ್ದೇಶವನ್ನು ನಿರ್ಧರಿಸುತ್ತಾರಂತೆ.

‘ಆರಂಭದ ಮೂರುನಾಲ್ಕು ವರ್ಷ ಮೋಜಿನಲ್ಲಿ ಕಳೆದೆವು. ಆದರೆ ಈಗ ನಮ್ಮ ಸಭೆಗೊಂದು ಉದ್ದೇಶ ಇರಬೇಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ ಕಿಟ್ಟಿ ಗುಂಪಿನ ಸದಸ್ಯರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದೇವೆ. ಮುಂದಿನ ಸಭೆಯಲ್ಲಿ ನಮ್ಮ ದೇಹವನ್ನೂ ದಾನ ಮಾಡುವ ಉದ್ದೇಶ ಹೊಂದಿದ್ದೇವೆ. ಆಸ್ಪತ್ರೆಯಲ್ಲಿರುವ ಅಶಕ್ತರಿಗೆ ನೆರವಾಗುವುದು. ಪರೀಕ್ಷೆ ಬರೆಯುವ ಅಂಧರಿಗೆ ಸಹಾಯ ಮಾಡುವ ಹಾಗೂ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಪ್ರತಿ ತಿಂಗಳು ಸಂಗ್ರಹವಾಗುವ ಮೊತ್ತವನ್ನು ಯಾರು ಬೇಕಾದರೂ ತಮ್ಮ ಅಗತ್ಯಕ್ಕನುಗುಣವಾಗಿ ಪಡೆಯಬಹುದು. ಉಳಿದಂತೆ ಯಾರ ಮನೆಯಲ್ಲಿ ಸೇರುತ್ತೇವೋ ಅಲ್ಲೇ ಊಟ. ಕೆಲವೊಂದು ತಿನಿಸುಗಳು ಅವರ ಮನೆಯಲ್ಲಿ ಸಾಧ್ಯವಾಗದಿದ್ದಲ್ಲಿ ಮತ್ತೊಬ್ಬರು ಸಿದ್ಧಪಡಿಸಿ ತರುತ್ತೇವೆ. ಆರು ತಿಂಗಳಿಗೊಮ್ಮೆ ಪ್ರವಾಸವಂತೂ ಇದ್ದೇ ಇರುತ್ತದೆ’ ಎಂದು ತಮ್ಮ ಕಿಟ್ಟಿ ಗುಂಪಿನ ಕಾರ್ಯಚಟುವಟಿಕೆಗಳನ್ನು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.