ಶನಿವಾರ, ಜೂನ್ 19, 2021
28 °C

ಕಿಡ್ನಿ ದಿನ: ನಾಳೆ ಉಚಿತ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿಕ್ರಂ ಆಸ್ಪತ್ರೆಯು ಮಾ. 13ರಂದು ವಿಶ್ವ ಕಿಡ್ನಿ ದಿನದ ಅಂಗವಾಗಿ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ. ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲೂ ನಿರ್ಧರಿಸಿದೆ.



ಪತ್ರಿಕಾ ಗೋಷ್ಠಿಯಲ್ಲಿ ಮಂಗಳ­ವಾರ ವಿಕ್ರಂ ಆಸ್ಪತ್ರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧೀರ್‌ ಪೈ ಹಾಗೂ ಉಪ ವೈದ್ಯಕೀಯ ಅಧೀಕ್ಷಕ ಡಾ. ರವೀಶ್‌ ಈ ಮಾಹಿತಿ ನೀಡಿದರು. ‘ಮಕ್ಕ­ಳಿಂದ ಮುದುಕರವರೆಗೆ ಎಲ್ಲ ವಯೋ­ಮಾನದವರ ಮೂತ್ರ­ರೋಗ ಹಾಗೂ ಮೂತ್ರಪಿಂಡ ಸಮ­ಸ್ಯೆ­ಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಪರಿಹಾರ ಲಭ್ಯವಿದೆ’ ಎಂದು ಹೇಳಿದರು.



‘ದಿನದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸೇವನೆ ಮಾಡಿದರೆ ಮೂತ್ರಪಿಂಡದಲ್ಲಿ ಹರಳುಗಳಾಗುವ (ಕಿಡ್ನಿ ಸ್ಟೋನ್‌) ಸಾಧ್ಯತೆ ತುಂಬಾ ಕಡಿಮೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.