ಬುಧವಾರ, ಮೇ 12, 2021
18 °C

ಕಿರೀಟ ವಾಪಸ್ ಇಲ್ಲ: ಟಿಟಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಪತಿ (ಪಿಟಿಐ): ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು 2 ವರ್ಷಗಳ ಹಿಂದೆ ತಿರುಪತಿ ವೆಂಕಟೇಶ್ವರನಿಗೆ ಕಾಣಿಕೆ ನೀಡಿರುವ 45 ಕೋಟಿ ಮೌಲ್ಯದ ವಜ್ರ ಖಚಿತ ಚಿನ್ನದ ಕಿರೀಟವನ್ನು ಹಿಂದಿರುಗಿಸುವುದಿಲ್ಲ ಎಂದು ದೇವಾಲಯದ ಟ್ರಸ್ಟ್ ಶನಿವಾರ ಹೇಳಿದೆ.ಕೆಲವು ಭಕ್ತರು ಹಾಗೂ ರಾಜಕೀಯ ಪಕ್ಷಗಳು `ಕಳಂಕಿತ~ ರೆಡ್ಡಿ ನೀಡಿರುವ ಕಿರೀಟವನ್ನು ವಾಪಸ್ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ದೇವಾಲಯದ ನಿರ್ವಹಣೆ ಮಾಡುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ವಿ ಸುಬ್ರಹ್ಮಣ್ಯಂ ಅವರು ಶನಿವಾರ ಹೇಳಿಕೆ ನೀಡಿದ್ದು, `ಭಕ್ತರು ನೀಡಿದ ಯಾವುದೇ ಕಾಣಿಕೆಯನ್ನು ಯಾವುದೇ ಪರಿಸ್ಥಿತಿಯಲ್ಲಿ  ವಾಪಸ್ ನೀಡುವುದಿಲ್ಲ. ಜನಾರ್ದನ ರೆಡ್ಡಿ ವಿಷಯದಲ್ಲೂ ಇದೇ ಅನ್ವಯವಾಗುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.ರೆಡ್ಡಿ ಅವರು 2009ರ ಜೂನ್ 11ರಂದು 2.5 ಅಡಿ ಎತ್ತರದ ಒಟ್ಟು 30 ಕೆ.ಜಿ ತೂಕದ ಕಿರೀಟವನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದರು.ಅಕ್ರಮ ಗಣಿಕಾರಿಕೆ ನಡೆಸಿದ ಆರೋಪದಲ್ಲಿ ಜನಾರ್ದನ ರೆಡ್ಡಿ ಅವರನ್ನು  ಸಿಬಿಐ ಸೆಪ್ಟೆಂಬರ್ 5ರಂದು ಬಂಧಿಸಿತ್ತು. ಈಗ ಅವರು ಹೈದರಾಬಾದ್‌ನ ಜೈಲಿನಲ್ಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.