ಶನಿವಾರ, ಮೇ 15, 2021
26 °C

ಕಿವಿ ಕೇಳದ ಬಾಲೆಗೆ ಶೇ 80 ಅಂಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಈ ವಿದ್ಯಾರ್ಥಿನಿಯ ಹೆಸರು ಜಿ.ಎನ್. ರಮ್ಯಾ. ಅತ್ಯಂತ ಚುರುಕಿನ ಹುಡುಗಿ. ಚಿತ್ರಹಳ್ಳಿಯ ಶರಣ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ. ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ಪ್ರತಿಭಾವಂತೆ. ತರಗತಿಯಲ್ಲಿ ಎಲ್ಲರಿಗಿಂತ ಮುಂದೆ ಇರಬೇಕು ಎನ್ನುವ ಆಸೆ.

ಶಿಕ್ಷಕ-ಶಿಕ್ಷಕಿಯರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. 9ನೇ ತರಗತಿ ಮುಗಿಯುವವರೆಗೂ ಚೆನ್ನಾಗಿಯೇ ಇದ್ದಳು. ಆದರೆ ಎಸ್ಸೆಸ್ಸೆಲ್ಸಿಗೆ ಪ್ರವೇಶ ಪಡೆಯುತ್ತಿದ್ದಂತೆ ಅವಳ ಜೀವನದಲ್ಲಿ ಬರಸಿಡಿಲೊಂದು ಎರಗಿತ್ತು. ಇದ್ದಕ್ಕಿದ್ದಂತೆ  ಅವಳ ಕಿವಿಗಳು ಕೇಳದಂತಾದವು.

ಶಿಕ್ಷಕರು ಮಾಡಿದ ಪಾಠ ಕೇಳದಂತಾಯಿತು. ಬರೀ ಮುಖ ನೋಡುವ ಪರಿಸ್ಥಿತಿ ಬಂದೊದಗಿತು. ಚುರುಕಾಗಿದ್ದ ಹುಡುಗಿಗೆ ಇದ್ದಕ್ಕಿದ್ದಂತೆ ಈ ಪರಿಸ್ಥಿತಿ ಬಂದಿದ್ದನ್ನು ಕಂಡ ಶಿಕ್ಷಕರೂ ಮರುಗಿದರು. ಆದರೂ ಛಲ ಬಿಡದೆ ಓದಿದ ರಮ್ಯಾ ಇಡೀ ಶಾಲೆಗೆ ಅತಿಹೆಚ್ಚು ಶೇ 80 ಅಂಕ ಪಡೆದಳು.ತಾಲ್ಲೂಕಿನ  ಚಿತ್ರಹಳ್ಳಿಯ  ನಿಂಗಪ್ಪ-ಮಂಜುಳಾ ದಂಪತಿಯ ಹಿರಿಯ ಮಗಳು ಈ ರಮ್ಯಾ. ಆಕೆ ಕಿವುಡಿಯಾಗಿರುವುದರಿಂದ ಇಡೀ ಕುಟುಂಬ ತಲೆಮೇಲೆ ಕೈ ಹೊತ್ತು ಕುಳಿತಿದೆ. ಮಣಿಪಾಲ, ಮೈಸೂರು  ಆಸ್ಪತ್ರೆಗಳಲ್ಲಿ ಪರೀಕ್ಷಿಸಿದಾಗ `ಕಿವಿಯ ನರಗಳು ದುರ್ಬಲಗೊಂಡಿವೆ. ಮುಂದೆ ಎಂದೂ ಅವಳಿಗೆ ಕಿವಿ ಕೇಳಿಸುವುದಿಲ್ಲ' ಎಂದು ವೈದ್ಯರು ಹೇಳಿದ್ದಾರೆ.ಎರಡನೇ ಪುತ್ರ ಜಿ.ಎನ್. ರಘು 8ನೇ ತರಗತಿಯಲ್ಲಿ ಓದುತ್ತಿದ್ದು, ಇವನಿಗೂ ಎರಡು ವರ್ಷಗಳ ಹಿಂದೆ ಕಿವಿಗಳು ಕೇಳದಂತಾಗಿವೆ. ಮೂರನೇ ಮಗಳು ಪ್ರಿಯಾಂಕಾ 6ನೇ ತರಗತಿಯಲ್ಲಿ ಓದುತ್ತಿದ್ದು, ಸದ್ಯ ಕಿವಿ ಕೇಳುತ್ತಿವೆ. ದೊಡ್ಡ ಮಕ್ಕಳ ಸ್ಥಿತಿ ಕಂಡು ಹೆದರಿರುವ ಪೋಷಕರು ಅವಳೂ ಮುಂದೆ ಕಿವುಡಿಯಾಗುವ ಆತಂಕದಲ್ಲಿ ಇದ್ದಾರೆ.`ಸ್ವಾಮಿ ನಮಗೆ ಹೊಲ ಇಲ್ಲ. ಚಿಕ್ಕದೊಂದು ಮನೆ ಇದೆ. ಕೂಲಿ-ನಾಲಿ ಮಾಡಿ ಬದುಕುತ್ತಿದ್ದೇವೆ. ನನಗೂ ಒಂದು ಕಣ್ಣು ಕಾಣುತ್ತಿಲ್ಲವಾದ್ದರಿಂದ ಕೆಲಸ ಮಾಡಲು ಆಗುತ್ತಿಲ್ಲ.  ಪತ್ನಿ ಅಡಿಕೆ ಸುಲಿಯುವ ಕೂಲಿ ಮಾಡುತ್ತಿದ್ದು, ಅದರಿಂದಲೇ ಜೀವನ ನಡೆಯುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.