ಶನಿವಾರ, ಜನವರಿ 25, 2020
19 °C
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಒಂದು ವರ್ಷ

ಕುಕೃತ್ಯಕ್ಕೆ ಪಶ್ಚಾತ್ತಾಪಪಡದ ಬಾಲಾರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್ಎಸ್‌): ದೆಹಲಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಬಾಲಾಪರಾಧಿಗೆ ತನ್ನ ಕೃತ್ಯದ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ ಉಂಟಾಗಿಲ್ಲ.ಇದೇ ಡಿಸೆಂಬರ್‌ 16ಕ್ಕೆ ಈ ಬರ್ಬರ ಕೃತ್ಯ ಸಂಭವಿಸಿ ಒಂದು ವರ್ಷ ಆಗಲಿದೆ. ಘಟನೆ ನಡೆದಾಗ ಇನ್ನೂ 18 ವರ್ಷ ತುಂಬಿರದ ಬಾಲಾರೋಪಿಯನ್ನು ಬಾಲಾ ನ್ಯಾಯ ಮಂಡಲಿ ಮೂರು ವರ್ಷ ಕಾಲ ವಿಶೇಷ ಸುಧಾರಣಾ ಗೃಹದಲ್ಲಿರಿಸಲು ಆದೇಶಿಸಿತ್ತು.‘ಬಾಲಾರೋಪಿ ಆರಂಭದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಾನು ಪಾಲ್ಗೊಂಡಿರುವುದಾಗಿ ಒಪ್ಪಿ­ಕೊಂಡಿದ್ದ. ಆದರೆ, ನಂತರದ ದಿನಗಳಲ್ಲಿ ಆತನಲ್ಲಿ ಮಹತ್ತರ ಬದಲಾವಣೆ­ಗಳಾಗಿದ್ದು, ಆತ ತಿದ್ದಲಾರದಷ್ಟು ಮೊಂಡಾ­ಗಿದ್ದಾನೆ. ಅತ್ಯಾಚಾರ ಎಸಗಿ­ರುವ ಕುರಿತು ಆತನಲ್ಲಿ ಸ್ವಲ್ಪವೂ ತಪ್ಪಿ­ತಸ್ಥ ಭಾವನೆ ಇಲ್ಲ. ಈ ಬಗ್ಗೆ ಆತನಿಗೆ ಪಶ್ಚಾತ್ತಾಪವೂ ಇಲ್ಲ.  ದಿನದಲ್ಲಿ ಬಹು­ತೇಕ ಸಮಯ ಅವನು ಮೌನಿಯಾಗಿರು­ತ್ತಾನೆ. ಆದರೆ, ನ್ಯಾಯ ಮಂಡಳಿ ನೀಡಿದ ತೀರ್ಪಿನ ನಂತರ ಅವನ ವರ್ತನೆಯಲ್ಲಿ ಬದಲಾವಣೆಯಾಗಿದೆ’.  ಎಂದು ಬಾಲಕನ ಕುರಿತು ನಿಗಾ ವಹಿಸಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಸುಧಾರಣಾ ಗೃಹದ ಸಿಬ್ಬಂದಿಗೆ ಬಾಲಕ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಇರುತ್ತಾನೆ. ಇಲ್ಲಿ ಯಾರೂ ತನ್ನ ಮೇಲೆ ಏನೂ ಮಾಡಲಾಗದು ಎಂಬುದನ್ನು ಆತ ಅರಿತಿದ್ದು,  ಅವನ ಬೇಡಿಕೆಯ ಕುರಿತು ಗಮನ ಹರಿಸದಿದ್ದಲ್ಲಿ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾನೆ. ಅಷ್ಟೇ ಅಲ್ಲ, ಮ್ಯಾಜಿಸ್ಟ್ರೇಟ್ ಬಳಿ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿಯೂ ಬೆದರಿಸುತ್ತಾನೆ’ ಎಂದು ಅಧಿಕಾರಿ ಹೇಳುತ್ತಾರೆ.‘ಬಾಲಕನ ಮನಃ ಪರಿವರ್ತನೆಗಾಗಿ ನಿಯಮಿತವಾಗಿ ಆತನೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ತನ್ನ ತಪ್ಪು ಒಪ್ಪಿಕೊಂಡು ಪಶ್ಚಾತ್ತಾಪ ಹೊಂದಲು ಆತನಿಗೆ ಸಹಕರಿಸುತ್ತಿದ್ದೇವೆ. ಆದರೆ, ಬಾಲಾಪರಾಧಿ ಇದಾವುದಕ್ಕೂ ಸ್ಪಂದಿಸದೇ, ಒರಟಾಗಿ ವರ್ತಿಸುತ್ತಿದ್ದಾನೆ. ಆತನಲ್ಲಿ ಪಶ್ಚಾತ್ತಾಪ ಎಂಬುದೇ ಇಲ್ಲ’ ಎಂದು ವಿಷಾದಿಸುತ್ತಾರೆ ಅವರು.‘ಆರೋಪಿ 18ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿರುವುದರಿಂದ ಆತನಿಗೆ 8x8 ಅಡಿ ಅಳತೆಯ ವಿಶೇಷ ಕೊಠಡಿ­ಯಲ್ಲಿರಿಸಲಾಗಿದೆ. 24 ಗಂಟೆಯೂ ಆತನ ಮೇಲೆ ತೀವ್ರ ನಿಗಾ ವಹಿಸ­ಲಾಗಿದೆ. ಆರೋಪಿಯ ಸುರಕ್ಷತೆಯ ದೃಷ್ಟಿಯಿಂದ ಇತರ ಬಾಲಾರೋಪಿ­ಗಳಿಂದ ಆತನನ್ನು ಪ್ರತ್ಯೇಕವಾಗಿರಿಸ­ಲಾಗಿದೆ.ಮನೋವೈದ್ಯರು ನಡೆಸಿರುವ ಸಂಭಾಷ­ಣೆಯ ವರದಿಯನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಲಾಗುವುದು. ಪರಿವರ್ತನಾ ಗೃಹದಲ್ಲಿರುವವರು ಪ್ರತಿ­ದಿನ ಮಧ್ಯಾಹ್ನ 12.30ರಿಂದ 2 ಗಂಟೆ ತನಕ ಆತನಿಗೆ ಪಾಠ ಹೇಳಿ­ಕೊಡುತ್ತಿದ್ದಾರೆ.  ತನಗೆ ನೀಡಿರುವ ಕೊಠಡಿಯಲ್ಲಿ ಪ್ರತ್ಯೇಕವಾಗಿ ಓದುತ್ತಾನೆ. ಅವನು ಓದಲಿ, ಬರೆಯಲಿ ಎಂಬುದೇ ನಮ್ಮ ಅಪೇಕ್ಷೆ.ಮೂರನೇ ತರಗತಿವರೆಗೆ ಓದಿರುವ ಆತ, ಈಗ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಹಿ ಮಾಡುವುದನ್ನೂ ಕಲಿತಿದ್ದಾನೆ. ನಿಧಾನ­ವಾಗಿಯಾದರೂ ಆತನಲ್ಲಿ ಬದಲಾವಣೆ ಆಗಬಹುದು ಎಂಬ ಭರವಸೆ ನಮಗಿದೆ. ಇದಕ್ಕೆ ಕಾಲವೇ ಉತ್ತರ ನೀಡಬಹುದು’ ಎಂದು ಆಶಯ ವ್ಯಕ್ತಪಡಿಸುತ್ತಾರೆ ಸುಧಾರಣಾ ಗೃಹದ ಸಿಬ್ಬಂದಿ.ಸಾಮೂಹಿಕ ಅತ್ಯಾಚಾರ ಪ್ರಕರಣ­ದಲ್ಲಿ ಆರೋಪಿಯಾಗಿದ್ದ ಬಾಲಕನನ್ನು ಡಿ. 22ರಂದು ಪೊಲೀಸರು ಬಂಧಿ­ಸಿದ್ದರು.ಡಿ. 16ರ ಘಟನೆ ಸಂದರ್ಭ­ದಲ್ಲಿ ಬಾಲಕನಿಗೆ 18 ವರ್ಷ ತುಂಬಲು ಇನ್ನೂ ಆರು ತಿಂಗಳು ಬಾಕಿ ಇತ್ತು. ಹಾಗಾಗಿ, ಬಾಲಾಪರಾಧಿಗಳ ನ್ಯಾಯ ಮಂಡಳಿ 2013ರ ಸೆಪ್ಟೆಂಬರ್ 1ರಂದು ಬಾಲಕನನ್ನು ಮೂರು ವರ್ಷ ಕಾಲ ಬಾಲಾಪರಾಧಿ ಪರಿವರ್ತನಾ ಗೃಹದಲ್ಲಿ­ರಿ­ಸಲು ಆದೇಶಿಸಿತ್ತು. ಬಾಲಾಪರಾಧಿ 2015 ಡಿಸೆಂಬರ್ ನಲ್ಲಿ ಬಿಡುಗಡೆ­ಯಾಗಲಿದ್ದಾನೆ.

ಪ್ರತಿಕ್ರಿಯಿಸಿ (+)