ಕುಕ್ಕೆ ಸುಬ್ರಹ್ಮಣ್ಯ: ರಷ್ಯಾ ಮಹಿಳೆಯಿಂದ ಗೋಪೂಜೆ
ಸುಬ್ರಹ್ಮಣ್ಯ: ಸಂತಾನ ಪ್ರಾಪ್ತಿಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭಿಸಿರುವ ರಷ್ಯಾದ ವೈದ್ಯೆ ಅನೆಕ್ಸೀನ್ ತೈಸೀಬ್ ಶನಿವಾರ ಪ್ರಾತ:ಕಾಲ ಗೋಪೂಜೆ ಮತ್ತು ಗೋದಾನ ನೆರವೇರಿಸಿದರು.
ಸರ್ಪಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ ಅವರು ಹಣೆಗೆ ತಿಲಕವನ್ನಿಟ್ಟು, ಬ್ರಹ್ಮಚಾರಿ ಆರಾಧನೆ ಹಾಗೂ ಇತರ ಕ್ರಿಯೆಗಳನ್ನು ಯಾಗಶಾಲೆಯಲ್ಲಿ ನೆರವೇರಿಸಿದರು.
ದೇವಳದಲ್ಲಿ ನಾಗಪ್ರತಿಷ್ಠೆ, ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ದೇವರ ದರ್ಶನ ಪಡೆದು ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಸುಬ್ರಹ್ಮಣ್ಯದ ರಾಘವೇಂದ್ರ ರಷ್ಯನ್ ಭಾಷೆಯಲ್ಲಿ ವಿಧಿ ವಿಧಾನ ತಿಳಿಸಲು ಸಹಕರಿಸಿದರು. ಪುರೋಹಿತರಾದ ನಂದಕಿಶೋರ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.