ಗುರುವಾರ , ಸೆಪ್ಟೆಂಬರ್ 19, 2019
29 °C

ಕುಡಿತದ ಅಮಲಿನಲ್ಲಿ ಚಾಕುವಿನಿಂದ ಇರಿತ

Published:
Updated:

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿದ್ದ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಚಾಕುವಿನಿಂದ ಇರಿದ ಘಟನೆ ಕುಮಾರಸ್ವಾಮಿ ಲೇಔಟ್‌ನ ಕದಿರೇನಹಳ್ಳಿ ಕ್ರಾಸ್‌ನ ಬಾರ್ ಒಂದರ ಬಳಿ ನಡೆದಿದೆ.ವಿಜಿ ಮತ್ತು ಆತನ ಐದಾರು ಮಂದಿ ಸಹಚರರು ಬಾರ್‌ನಲ್ಲಿ ಕುಳಿತು ಜೋರಾಗಿ ದೂರವಾಣಿಯಲ್ಲಿ ಅವರು ಮಾತನಾಡುತ್ತಿದ್ದರು. ಇದನ್ನು ಆಕ್ಷೇಪಿಸಿದ ಸುನಿಲ್ ಹಾಗೂ ವಿಜಿ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಬಾರ್‌ನಿಂದ ಹೊರ ಬಂದ ನಂತರ ವಿಜಿ ಸುನಿಲ್‌ನ ಸೊಂಟಕ್ಕೆ ಚಾಕುವಿನಿಂದ ಬಲವಾಗಿ ಇರಿದ ಎಂದು ಪೊಲೀಸರು ತಿಳಿಸಿದ್ದಾರೆ.ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Post Comments (+)