ಬುಧವಾರ, ಮೇ 12, 2021
24 °C

ಕುಡಿಯುವ ನೀರಿಗೆ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮನೆಗೆಲಸ, ಮಕ್ಕಳು, ಹಿರಿಯರನ್ನು ಬಿಟ್ಟು ರಸ್ತೆಯಲ್ಲಿ ಈ ಬಿಸಿಲಿನಲ್ಲಿ ನಿಂತು ನೀರಿಗಾಗಿ ಕಾಯುವುದು ಇದ್ಯಾವ ಕರ್ಮ? ಬಿಸಿಲಿನಲ್ಲಿ ನಿಲ್ಲೋ ದರ ಜೊತೆಗೆ ನೂಕುನುಗ್ಗಲಿನಲ್ಲಿ ನಿಂತು ಇತರ ರೊಡನೆ ಜಗಳ ಕಾಯುವುದೂ ಅನಿವಾರ್ಯ ವಾಗಿಬಿಟ್ಟಿದೆ. ಇಷ್ಟಾಗಿ ನಾಲ್ಕೈದು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರು ಸಾಕೂಸಾಲದಂತೆ ಸಿಗುತ್ತದೆ...-ನಗರದ ಕಾರಂಜಿಕಟ್ಟೆ 2ನೇ ತಿರುವಿನ ಬಳಿ ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಬಿಸಿಲಿನಲ್ಲೆ ಟ್ಯಾಂಕರ್ ನೀರಿಗಾಗಿ ಬಿಂದಿಗೆಗಳ ಸಾಲಿನೊಂದಿಗೆ ನಿಂತಿದ್ದ ಮಹಿಳೆಯರು ಅಸಮಾ ಧಾನದಿಂದ ಹೇಳಿದ ಮಾತುಗಳಿವು.ರಸ್ತೆಯ ಅಂಚಿನಲ್ಲಿ ನಿಲ್ಲಿಸಿದ್ದ ನಗರಸಭೆಯ ಉಚಿತ ನೀರಿನ ಟ್ಯಾಂಕರ್‌ನ ಮುಂದೆ ನೂರಾರು ಬಿಂದಿಗೆಗಳಿದ್ದವು. ಸಾಲಿನ ನಿರ್ದಿಷ್ಟ ಗುಣಗಳನ್ನು ಮೀರಿ ಬಿಂದಿಗೆಗಳ ಹಲವು ಸಾಲುಗಳಿದ್ದವು. ಬಿಂದಿ ಗೆಗಳ ರಾಶಿಯೇ ಅಸ್ತವ್ಯಸ್ತವಾಗಿ ಹರಡಿಕೊಂಡಿತ್ತು ಎನ್ನಬಹುದು.ಕೆಲವೇ ಸಣ್ಣ ಮರಗಳ ನೆರಳಿನಲ್ಲಿ ಕೆಲವರು ಆಶ್ರಯಪಡೆದಿದ್ದರೆ, ಹಲವು ಮಹಿಳೆ ಯರು ಬಿಸಿಲಿನಲ್ಲೆ ನಿಂತು ನೀರಿಗಾಗಿ ಕಾಯುತ್ತಿದ್ದರು. ಬಡಾವಣೆಯ ಒಳ ರಸ್ತೆಗಳಲ್ಲಿ ನಿಲ್ಲಿಸಿ ನೀರು ಪೂರೈಸಿದ್ದರೆ, ಮುಖ್ಯರಸ್ತೆಯ ಅಂಗಡಿಗಳ ಮುಂದೆ ನೀರಿಗೆ ನಿಲ್ಲುವ ಮುಜುಗರವನ್ನು ತಪ್ಪಿಸಬಹುದಾಗಿತ್ತು ಎಂಬ ಅಭಿಪ್ರಾಯವನ್ನೂ ಮಹಿಳೆಯರು ವ್ಯಕ್ತ ಪಡಿಸಿದರು.ಬಾಡಿಗೆ ಟ್ಯಾಂಕರ್:  ನಗರದ ಬಹುತೇಕ ವಾರ್ಡ್‌ಗಳಲ್ಲಿ ನಗರಸಭೆಯು ನೀರಿನ ಸಮಸ್ಯೆಯನ್ನು ನಿರ್ವಹಿಸುವ ಸಲುವಾಗಿ ಬಾಡಿಗೆ ಟ್ಯಾಂಕರ್‌ಗಳ ಮೂಲಕ ನಿಭಾಯಿಸುತ್ತಿದೆ. ಹತ್ತಾರು ದಿನಗಳಿಂದ ಉಚಿತ ಟ್ಯಾಂಕರ್ ನೀರು ಪೂರೈಸುವ ವ್ಯವಸ್ಥೆ ಚಾಲನೆಯಲ್ಲಿದೆ. ಆದರೆ ನೀರು ಪೂರೈಸಲು ನಗರಸಭೆಯು ರೂಪಿಸಿದ ನಿಯಮ ಮತ್ತು ಸಮಯ ಪಾಲನೆಯ ವಿಚಾರದಲ್ಲಿ ಮಾತ್ರ ಬಾಡಿಗೆ ಟ್ಯಾಂಕರ್‌ಗಳು ನಿಷ್ಠೆಯನ್ನು ಪಾಲಿಸುತ್ತಿಲ್ಲ ಎಂಬುದು ಜನರ ದೂರು.ನಗರಸಭೆಯ ಪ್ರಕಾರ ಬೆಳಿಗ್ಗೆ 5.30ರಿಂದ 9.30ವರೆಗೆ , ಸಂಜೆ 5ರಿಂದ 8 ಗಂಟೆಯವರೆಗೆ ನೀರನ್ನು ಪೂರೈಸಬೇಕು. ಜನ ತಮ್ಮ ಕೆಲಸಕ್ಕೆ ಹೋಗುವ ಮುನ್ನ ಮತ್ತು ಕೆಲಸದಿಂದ ಹಿಂತಿರುಗಿದ ಬಳಿಕ ನೀರು ಸಂಗ್ರಹಿಸಲು ಅನು ಕೂಲವಾಗಲಿ ಎಂಬ ಉದ್ದೇಶದಿಂದ ಈ ವೇಳಾಪಟ್ಟಿಯನ್ನು ರೂಪಿಸಲಾಗಿದೆ. ಆದರೆ ಬಹುತೇಕ ಸ್ಥಳಗಳಲ್ಲಿ ಈ ವೇಳಾಪಟ್ಟಿಯಂತೆ ನೀರ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ.ಟ್ಯಾಂಕರ್ ಮಾಲಿಕರು, ಚಾಲಕರು ತಮಗೆ ಇಷ್ಟ ಬಂದ ಹೊತ್ತಿಗೆ ನೀರು ಪೂರೈಸಲು ಸ್ಥಳಕ್ಕೆ ಬರುತ್ತಾರೆ. ಕೆಲವೆಡೆ ನಿಗದಿತ ಸ್ಥಳಗಳಿಗೆ ಬರುವುದೇ ಇಲ್ಲ. ತಮಗೆ ಬೇಕಾದವರು ಇದ್ದ ಕಡೆ ಹೆಚ್ಚು ಹೊತ್ತು ನೀರು ಪೂರೈಸುವ ತಾರತಮ್ಯ ಚಟುವಟಿಕೆಯೂ ನಡೆಯುತ್ತಿದೆ. ಆದರೆ ಇದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕಾದ ನಗರಸಭೆ ಸುಮ್ಮನಿದೆ ಎಂಬುದು ನಿವಾಸಿಗಳ ಸದ್ಯದ ತಕ ರಾರು.ಬೆಳಿಗ್ಗೆ ಹೊತ್ತು ಬಂದು ನೀರು ಪೂರೈಸಬೇಕಾದ ಟ್ಯಾಂಕರ್‌ನವರು ಮಧ್ಯಾಹ್ನ ಬಂದು ವಾಹನ ನಿಲ್ಲಿಸಿದ್ದಾರೆ. ಇನ್ನಷ್ಟು ಮಂದಿ ಬಂದ ಬಳಿಕವೇ ನೀರು ಪೂರೈಸಲಾಗುವುದು ಎಂದಿದ್ದಾರೆ,. ಈಗಾಗಲೇ 12.30 ಆಗಿದೆ. ಮಧ್ಯಾಹ್ನದ ಅಡುಗೆಯ ಕೆಲಸವನ್ನೂ ಅರ್ಧಕ್ಕೆ ಬಿಟ್ಟು ಬಂದಿದ್ದೇವೆ. ನೀರು ಸಂಗ್ರಹಿಸುವುದು ಯಾವಾಗ? ಅಡುಗೆ ಮಾಡುವುದು ಯಾವಾಗ ? ಎಂದು ಮಹಿಳೆ ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮುಖ್ಯರಸ್ತೆಯಲ್ಲಿ ಬಿಸಿಲಿನ ಜೊತೆಗೆ ಧೂಳೂ ಹೆಚ್ಚಿದೆ. ಇಲ್ಲಿ ನೀರನ್ನು ಸಂಗ್ರಹಿಸಿದ ಕೂಡಲೇ ಬಿಂದಿಗೆಗಳನ್ನು ಮನೆಗೆ ಸಾಗಿಸುವುದು ಸಾಧ್ಯವಿಲ್ಲ. ಹೀಗಾಗಿ ಟ್ಯಾಂಕರ್‌ನಿಂದ ಬರುವ ಶುದ್ಧ ನೀರು ಮಲಿನಗೊಳ್ಳುತ್ತಿದೆ.ಟ್ಯಾಂಕರ್‌ನ ದೊಡ್ಡಪೈಪ್‌ಗೆ ಉದ್ದದ ಸಣ್ಣ ಪೈಪ್‌ಗಳನ್ನು ಅಳವಡಿಸಿದರೆ ಏಕಕಾಲಕ್ಕೆ ಹಲವರು ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಜಗಳವೂ ನಿಲ್ಲುತ್ತದೆ ಎಂಬುದು ಅವರ ಸಲಹೆ. ಆದರೆ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಟ್ಯಾಂಕರ್‌ನವರೂ ಇರಲಿಲ್ಲ.ಜನರ ನೀರಿನ ಸಮಸ್ಯೆ ನೀಗಿಸಲು ನಗರಸಭೆಯು ಬಾಡಿಗೆ ಟ್ಯಾಂಕರ್ ಅನ್ನು ನೆಚ್ಚಿಕೊಂಡಿದೆ. ಆದರೆ ಅದು ಸಮಯಕ್ಕೆ ಸರಿಯಾಗಿ, ಜನರಿಗೆ ತೊಂದರೆ ಇಲ್ಲದೆ ದೊರಕುವಂತಾಗಬೇಕು. ನಗರಸಭೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಹಲವು ಮಹಿಳೆಯರ ಒತ್ತಾಸೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.