ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ 21ನೇ ವಾರ್ಡ್ಗೆ ಕಳೆದ ಮೂರು ತಿಂಗಳಿಂದ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಪುರಸಭೆ ಎಂಜಿನಿಯರ್ ಅನ್ನು ಉಪ ವಿಭಾಗಾಧಿಕಾರಿ ಆಡಳಿತಾಧಿಕಾರಿಯೂ ಆದ ಪಿ. ಸುನೀಲ್ಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಜರುಗಿತು.

ವಾರ್ಡ್ಗೆ ಉಪ ವಿಭಾಗಾಧಿಕಾರಿಗಳು ಭೇಟಿ ನೀಡಿದಾಗ ಜನತೆ ಪುರಸಭೆ ಎಂಜಿನಿಯರ್ ಮತ್ತು ಅಧಿಕಾರಿಗಳ ವಿರುದ್ಧ ಆರೋಪಿಸಿದರು. ತಮಗೆ ನೀರು ಸರಬರಾಜು ಆಗದೇ ಇರುವುದಕ್ಕೆ ಸ್ಥಳೀಯ ರಾಮದೇವರ ದೇವಸ್ಥಾನ ಮತ್ತು ಮುಕಿ್ತನಾಥೇಶ್ವರ ದೇವಸ್ಥಾನ ಆಡಳಿತ ಮಂಡಳಿ ಕಾರಣ ಎಂದು ದೂರಿದರು.

ವಿನಾಯಕನಗರ ಪಂಪ್ ಕೊಠಡಿಯಿಂದ ವಾರ್ಡ್ನ ಏಳು ಕಿರು ನೀರು ಪೂರೈಕೆ ಟ್ಯಾಂಕ್ಗಳಿಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಈ ದೇವಸ್ಥಾನಕ್ಕೆ ಸಂಬಂಧಪಟ್ಟರುವ ಮೂರು ಇಂಚಿನ ಮುಖ್ಯ ಪೈಪ್ನಿಂದ ಅದೇ ಅಳತೆಯ ಪೈಪ್ ಜೋಡಿಸಿ ನೇರವಾಗಿ ಬೃಹತ್ ಕೆಳ ತೊಟ್ಟಿಗಳಲ್ಲಿ ನೀರು ಸಂಗ್ರಹ ಮಾಡುತ್ತಿರುವುದರಿಂದ ವಾರ್ಡ್ನ ಸಾವಿರಾರು ಜನರು ಮತ್ತು 195 ಶಾಲಾ ಮಕ್ಕಳು ಕುಡಿಯುವ ನೀರಿಲ್ಲದೆ ಬವಣೆ ಪಡುವಂತಾಗಿದೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ಫೆ.2 ರಂದು ಮನವಿ ನೀಡಿದ್ದರೂ ಕಡೆಗಣಿಸಿದ್ದಾರೆ ಎಂದು ವಾರ್ಡ್ನ ಜನತೆ ಮತ್ತು ಎಸ್ಡಿಎಂಸಿ ಅಧ್ಯಕ್ಷ ಎಂ. ಮೆಹಮೂದ್ ಮತ್ತು ಸದಸ್ಯರು, ವಾರ್ಡ್ ಸದಸ್ಯೆ ಲಕ್ಷ್ಮಿದೇವಿ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದರು.

ಜನತೆ ದೂರು ಆಲಿಸಿದ ಆಡಳಿತಾಧಿಕಾರಿಗಳು ಸ್ಥಳದಲ್ಲಿಯೇ ಇದ್ದ ಪುರಸಭೆ ಎಂಜಿನಿಯರ್ ಗೋಪಾಲ್ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದವರು ವಾಣಿಜ್ಯ ಬಳಕೆಗೆ ನೀರು ಉಪಯೋಗಿಸುತ್ತಿದ್ದರೂ ಗಮನಹರಿಸದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ಪೈಪ್ನಿಂದ ನೇರವಾಗಿ ದೊಡ್ಡ ವ್ಯಾಸದ ಪೈಪ್ಗಳನ್ನು ಅಳವಡಿಸಿ ಸಂಪರ್ಕ ಪಡೆದಿರುವುದನ್ನು ತಕ್ಷಣ ತೆಗೆದು ಹಾಕಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಮತ್ತು ಕನಿಷ್ಠ ಒಂದು ಗಂಟೆಗೂ ಹೆಚ್ಚು ಸಮಯ ನೀರು ಪೂರೈಕೆಗೆ ಆದೇಶಿಸಿದರು.

ಪಟ್ಟಣದ ಬೀದಿ ದೀಪಗಳ ಅವ್ಯವಸೆ್ಥ ಕುರಿತು ಗಮನಸೆಳೆದಾಗ ಇನ್ನು ಮೂರು ದಿನಗಳಲ್ಲಿ ಬೀದಿ ದೀಪ ವ್ಯವಸೆ್ಥ ಸರಿಪಡಿಸುವುದಾಗಿ ಸ್ಪಷ್ಟಪಡಿಸಿದರು.

ಪಟ್ಟಣದ ಕುಡಿಯುವ ನೀರು ವ್ಯವಸ್ಥೆ ಬಗ್ಗೆ ನೀವೂ ಗಮನಹರಿಸುವಂತೆ ಉಪ ತಹಶೀಲ್ದಾರ ಬಾಲಪ್ಪ ಅವರಿಗೆ ಸೂಚಿಸಿದರು. ಕಂದಾಯ ಅಧಿಕಾರಿ ಎಸ್.ಆರ್. ಫಣಿರಾಜ್, ವಾರ್ಡ್ ನಾಗರಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.