ಕುಣಿಗಲ್: ಪುರಸಭೆ ಪಟ್ಟಣದ ವಿವಿಧ ವಾರ್ಡ್ಗಳಿಗೆ ಗುರುವಾರ ಕುಡಿಯಲು ವಾಸನೆಯಿಂದ ಕೂಡಿದ ಮಲೀನ ನೀರು ಪೂರೈಸಿದ ಕಾರಣ ಆಕ್ರೋಶಗೊಂಡ ಗೖಹಿಣಿಯರು ಪುರಸಭೆ ಕಾರ್ಯವೈಖರಿ ಖಂಡಿಸಿ ಶುದ್ಧ ನೀರು ಪೂರೈಸುವಂತೆ ಆಗ್ರಹಿಸಿದರು.

ಪಟ್ಟಣದ 9, 3, 4ನೇ ವಾರ್ಡ್ ಪ್ರದೇಶಕ್ಕೆ ಎರಡು ವಾರಗಳಿಂದ ನೀರು ಪೂರೈಸದ ಪುರಸಭೆ ಆಡಳಿತ ಗುರುವಾರ ಮಧ್ಯಾಹ್ನ ನೀರು ಪೂರೈಸಿತು. ನೀರು ಸಂಗ್ರಹಿಸಲು ಗೃಹಿಣಿಯರು ಮುಂದಾದಾಗ ಕೊಳಾಯಿಯಲ್ಲಿ ಕುಡಿಯುವ ನೀರಿನ ಬದಲು ಚರಂಡಿ ನೀರು ಬಂದಿದೆ.

ಕೆಲ ಮನೆಗಳಲ್ಲಿನ ಸಂಪ್ಗೂ ಚರಂಡಿ ನೀರು ಬೆರೆತು ಇಡೀ ವಾತಾವರಣವೇ ಅಸಹ್ಯ ಮೂಡಿಸಿದೆ. ಸಂಪ್ನ ನೀರು ಹಾಳಾಗಿದ್ದರಿಂದ ನಾಗರಿಕರು ವಾಲ್ವ್ಮನ್ ವಿಚಾರಿಸಿದ್ದಾರೆ. ಆದರೆ ಆತ ಸೂಕ್ತವಾಗಿ ಉತ್ತರಿಸಿಲ್ಲ.

ಇದರಿಂದ ಆಕ್ರೋಶಗೊಂಡ ವಿಜಿಯಮ್ಮ, ರೇಣುಕಮ್ಮ, ಭಾಗ್ಯಮ್ಮ, ನಾಗಮ್ಮ, ಯಶೋಧಮ್ಮ, ಮುಖಂಡ ರಾಜು ಇತರರು ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ರಸ್ತೆ ಉಬ್ಬು: ಗ್ರಾಮಸ್ಥರ ಧರಣಿ
ಕುಣಿಗಲ್: -ಅವೈಜ್ಞಾನಿಕ ರಸ್ತೆ ಉಬ್ಬು ಖಂಡಿಸಿ ಬಿದನಗೆರೆ ಗ್ರಾಮಸ್ಥರು ಗುರುವಾರ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪುರಸಭೆಯ ಒಂದನೇ ವಾರ್ಡ್ ಪ್ರದೇಶದಲ್ಲಿನ ಬಿದನಗೆರೆಯ ಬಳಿ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೇಮಾವತಿ ನಾಲಾ ಕಾಲುವೆ ನಿರ್ಮಾಣ ಕಾಮಗಾರಿಗಾಗಿ ರಸ್ತೆ ಉಬ್ಬು ಹಾಕಲಾಗಿದೆ. ಈ ಕುರಿತು ಯಾವುದೇ ಸೂಚನೆ ಫಲಕ, ಎಚ್ಚರಿಕೆ ಸಂಕೇತ ಹಾಕಿಲ್ಲ. ಇದರಿಂದ ಹಲ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ಮಗು ಸಮೇತ ಬೈಕ್ ಸವಾರ ಕೆಳಗೆ ಬಿದ್ದು ಗಾಯಗೊಂಡರು. ಈ ಘಟನೆಯಿಂದ ಕೆರಳಿದ ಗ್ರಾಮಸ್ಥರು ಮುಖಂಡರಾದ ಶಿವಕುಮಾರ, ಸೀನಪ್ಪ ನೇತೃತ್ವದಲ್ಲಿ ರಸ್ತೆತಡೆ ನಡೆಸಿ, ಪ್ರತಿಭಟನೆ ನಡೆಸಿದರು. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಗ್ರಾಮಸ್ಥರನ್ನು ಸಮಾಧಾನಗೊಳಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಅತಿಕ್ರಮ ಪ್ರವೇಶ: ದಂಡ
ಕುಣಿಗಲ್: ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಮಾಲೀಕನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಗೋಡೆಗೆ ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ.

ಅಮೖತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದಲ್ಲಿ ಕೖಷ್ಣಾಚಾರ್ ಎಂಬುವರ ಮನೆಗೆ 11–-1–-2010ರಲ್ಲಿ ಚಿಕ್ಕತಾಯಮ್ಮ, ಸ್ವಾಮಿ, ಲಕ್ಷ್ಮಮ್ಮ ಎಂಬುವರು ಮನೆಗೆ ನುಗ್ಗಿ, ಗೋಡೆಗೆ ಹಾನಿ ಮಾಡಿ, ಕೃಷ್ಣಾಚಾರ್ ಪತ್ನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿದ್ದರು ಎಂದು ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್.ಶಾರದ ಆರೋಪಿಗಳಿಗೆ ತಲಾ ಎರಡು ಸಾವಿರ ದಂಡ, ದಂಡ ಪಾವತಿಸಲು ವಿಫಲರಾದಲ್ಲಿ 45 ದಿನ ಸಾದ ಸಜೆ ವಿಧಿಸಿ, ಗೋಡೆ ಹಾನಿ ಮಾಡಿದ್ದಕ್ಕೆ, ಕೃಷ್ಣಾಚಾರ್ಗೆ ₨ ಮೂರು ಸಾವಿರ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಎಪಿಪಿ ಸುರೇಖಾ ಹಿರೇಮಠ ಸರ್ಕಾರದ ಪರವಾಗಿ ವಾದಿಸಿದ್ದರು.

ನಿಯಮ ಉಲ್ಲಂಘನೆ: ಎಚ್ಚರಿಕೆ
ಕುಣಿಗಲ್: ಸಾರಿಗೆ ನಿಗಮದ ಕೆಲ ಬಸ್ಗಳು ನಿಯಮ ಉಲ್ಲಂಘಿಸಿ, ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. 15 ದಿನದೊಳಗೆ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಕರವೇ ವತಿಯಿಂದ ಬೈಪಾಸ್ ರಸ್ತೆಯಲ್ಲಿ ಸಾಗುವ ಬಸ್ಗಳನ್ನು ತಡೆದು, ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಪಟ್ಟಣದ ಸಾರಿಗೆ ಘಟಕಕ್ಕೆ ಗುರುವಾರ ಭೇಟಿ ನೀಡಿದ್ದ ತುಮಕೂರು ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ದಿನೇಶ್, ಕಿರಣ್ ಕುಮಾರ, ಅವಿನಾಶ್, ಅನಿಲ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.