ಕುಮಸಗಿ: ಇಲ್ಲಿನ ಜನರು ನಿತ್ಯ ಬೆಳಗಾಯಿತೆಂದರೆ ತರಾತುರಿಯಿಂದ ವಾಯುವಿಹಾರಕ್ಕೆ ಹೊರಡಲು ತಯಾರಾಗುತ್ತಾರೆ. ಇಲ್ಲಿಂದ ಎರಡು ಕಿಮೀ ದೂರದಲ್ಲಿ ಇರುವ ಗಂಗಪ್ಪ ತಳವಾರ ಅವರ ತೋಟದ ವರೆಗೂ ಜನ ಸವಾರಿ ಮಾಡುತ್ತಾರೆ. ಕೆಲವರು ಬೈಸಿಕಲ್ ಮೇಲೆ, ಇನ್ನು ಕೆಲವರು ಬೈಕ್ ಮೇಲೆ ಕೊಡಗಳನ್ನು ಜೋಡಿಸಿಕೊಂಡು ಸವಾರಿ ಮಾಡುತ್ತಾರೆ!

3500ಕ್ಕೂ ಹೆಚ್ಚು ಜನ ವಸತಿ ಇರುವ ಈ ಗ್ರಾಮದ ಜನರು ಸಿಹಿ ನೀರನ್ನು ಅವಲಂಬಿಸಿರುವ ಏಕೈಕ ತೋಟವಿದು. ಈ ಗ್ರಾಮದಲ್ಲಿ ಎರಡು ಬಾವಿಗಳಿವೆ. ಒಂದೇ ಬೋರ್ವೆಲ್ ಬಾವಿ ಇದೆ, ಇಲ್ಲಿ ಕನಿಷ್ಠ ಏಳೆಂಟು ಕೊಳವೆಬಾವಿಗಳು ಅವಶ್ಯ ಇದ್ದರೂ, ಅತ್ತ ಯಾರೂ ಗಮನ ಹರಿಸಿಲ್ಲ ಎಂದು ಸಂಜೀವಕುಮಾರ ತಳವಾರ, ರವಿಕುಮಾರ ಸಿಂಗೆ ಹೇಳುತ್ತಾರೆ.

ಗ್ರಾಮದಲ್ಲಿ ನಲ್ಲಿ ನೀರು ಹರಿದು ಬರುವದೇ ದುಸ್ತರ. ಬೇಸಿಗೆ ಬಂತೆಂದರೆ ಸಿಹಿ ನೀರಿಗಾಗಿ ನಿತ್ಯ ಎರಡು ಕಿಮೀ ಹೋಗ ಬೇಕು ಎಂದು ಶಿವಶರಣ ಪಂತೋಜಿ, ಸದಾಶಿವ ಬೆಣ್ಣೆಶಿರೂರ, ಜಗದೀಶ ಯಂಕಂಚಿ, ಜೀತೇಂದ್ರ ತಳವಾರ ಮೊದಲಾದವರು ಹೇಳಿದರು.

ಗ್ರಾಮದಲ್ಲಿ 6 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಈ ಗ್ರಾಮವು ದೇವರ ನಾವದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಅವರು ಇಲ್ಲಿನ ನೀರಿನ ತೊಂದರೆಯನ್ನು ಆಲಿಸುತ್ತಿಲ್ಲ ಎಂದು ಜನರು ಪ್ರಜಾವಾಣಿ ಎದುರು ಅಳಲು ತೋಡಿಕೊಂಡರು.

ನೀರಿದೆ; ನಿರ್ವಹಣೆಯಿಲ್ಲ: ಆಲಮೇಲದಿಂದ 6 ಕಿಮೀ ದೂರದ ಕುರುಬತಹಳ್ಳಿ ಗ್ರಾಮದಲ್ಲಿ ಎರಡು ಸಾವಿರ ಜನಸಂಖ್ಯೆ ಇದ್ದು, ಇಲ್ಲಿನ ಜನರಿಗೆ ಕೊಳವೆ ಬಾವಿಗಳೇ ಆಸರೆ. ಕುಡಿಯುವ ನೀರಿಗಾಗಿ ಎರಡು ಕಡೆ ಕೊಳವೆ ಬಾವಿ ಕೊರೆಯಲಾಗಿದ್ದು ನೀರು ಸಾಕಷ್ಟು ಇದೆ. ಕೊಳವೆ ಬಾವಿಯಲ್ಲಿ ಮೋಟಾರು ಅಳವಡಿಸಿ ಗ್ರಾಮದವರೆಗೂ ಪೈಪ್ಲೈನ್ ಅಳವಡಿಸಲಾಗಿದೆ. ಅದು ಕೆಟ್ಟು 2 ವರ್ಷಗಳಾದರೂ ದುರಸ್ತಿ ಆಗಿಲ್ಲ.

ಜನರ ಸಮಸ್ಯೆಯನ್ನು ಅರಿತ ಗ್ರಾ.ಪ. ಸದಸ್ಯ ಎಂ.ಡಿ.ಪಾಟೀಲ ಸ್ವಂತ ಖರ್ಚಿನಲ್ಲಿ 30 ಸಾವಿರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿಯನ್ನು ಕೊರೆಸಿ ಮೋಟಾರು ಅಳವಡಿಸಿ ಜನರಿಗೆ ನಿತ್ಯ ನೀರು ಉಣಿಸುತ್ತಿದ್ದಾರೆ ಎಂದು ಯೂಸೂಫ್ ಮಾರ್ಸನಳ್ಳಿ, ಶರಣಪ್ಪ ದೇಸಾಯಿ, ಲಕ್ಕಪ್ಪ ಚುಂಚೂರ, ಬಾಷಾ ವಸ್ತಾರ ಕೊಂಡಾಡಿದರು.

ನೀರಿನ ಯೋಜನೆಗಾಗಿ ಎರಡು ಕೊಳವೆಬಾವಿಗಳು ಕೊರೆಯ ಲಾಗಿದ್ದರೂ ಅದರ ಉಪಯೋಗ ಈ ಗ್ರಾಮದ ಜನತೆಗೆ ಆಗಿಲ್ಲ. ಹೀಗಿದ್ದರೂ ಇಲ್ಲಿ ಒಬ್ಬ ವಾಟರ್ಮನ್ ಇದ್ದಾರೆ. ಅವರಿಗೆ ಮಾಸಿಕ ಗೌರವನ ನೀಡಲಾಗುತ್ತಿದೆ. ವಿಪರ್ಯಾಸವೆಂದರೆ ಈ ಗ್ರಾಮಕ್ಕೆ ಕುಡಿಯಲು ನಲ್ಲಿಗೆ ನೀರು ಬಿಡುವದಿಲ್ಲ. ಅದು ಕೆಟ್ಟು ಎರಡು ವರ್ಷಗಳ ಮೇಲಾಯಿತು. ಅತಿ ಕಡಿಮೆ ಖರ್ಚು ಮಾಡಿ ಸುಟ್ಟು ಹೋಗಿರುವ ಮೋಟಾರು ದುರಸ್ತಿ ಮಾಡಿದರೆ ಸಾಕು ನೀರು ಬಿಡಲು ಸಾಧ್ಯ. ಕೆಲಸವಿಲ್ಲದೆ ಗೌರವಧನವು ಪಡೆಯಲು ಇಲ್ಲಿನ ವಾಟರ್ಮನ್ಗೆ ಮನಸ್ಸು ಒಪ್ಪುತ್ತಿಲ್ಲ ಎಂದು ಅವನೇ ಹೇಳುತ್ತಾನೆ!

ಈ ಗ್ರಾಮದಲ್ಲಿ ನೀರಿದ್ದರೂ ಅದರ ನಿರ್ವಹಣೆಯಿಂದಾಗಿ ಜನರಿಗೆ ನಲ್ಲಿ ಮೂಲಕ ನೀರು ತಲುಪುತ್ತಿಲ್ಲ. ಆದರೆ ಬೋರ್ವೆಲ್ ಆಸರೆಯಿಂದಾಗಿ ಜನರು ತೊಂದರೆಯಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.