ಭಾನುವಾರ, ಏಪ್ರಿಲ್ 11, 2021
22 °C

ಕುರ್ಚಿ ಅಲ್ಲಾಡಿಸುವುದನ್ನು ಬಿಡುವವರೆಗೆ ಆಪರೇಷನ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ‘ಆಪರೇಷನ್ ಕಮಲ’ ಎಲ್ಲಿಯವರೆಗೆ ನಡೆಯುತ್ತದೆ ಎಂಬ ವಿರೋಧ ಪಕ್ಷಗಳ ಪ್ರಶ್ನೆಗೆ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಂಗಳವಾರ ಉತ್ತರ ನೀಡಿದ್ದಾರೆ!ಪ್ರೇರಣಾ ಶೈಕ್ಷಣಿಕ ಟ್ರಸ್ಟ್‌ಗೆ ಬಂದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆ ಕುರಿತು ಪರಿಷತ್ತಿನಲ್ಲಿ ನಿಯಮ 68ರ ಅಡಿ ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ ಚರ್ಚೆ ಆರಂಭಿಸಿದಾಗ ಬಿಜೆಪಿಯ ಭಾರತಿ ಶೆಟ್ಟಿ ಮತ್ತು ಇತರ ಸದಸ್ಯರು ಮುಖ್ಯಮಂತ್ರಿಗಳ ಪರವಾಗಿ ವಾದಿಸಿದರು.‘ಮುಖ್ಯಮಂತ್ರಿಗಳು ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಘೋಷಿಸಿರುವುದರಿಂದ ಇಷ್ಟೊಂದು ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರು ಅವರನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದಾರೆ’ ಎಂದು ಸುದರ್ಶನ್ ಆಡಳಿತ ಪಕ್ಷದ ಸದಸ್ಯರನ್ನು ಛೇಡಿಸಿದರು. ಮಧ್ಯಪ್ರವೇಶಿಸಿದ ಜೆಡಿಎಸ್‌ನ ಎಂ.ಸಿ. ನಾಣಯ್ಯ, ‘ಮುಖ್ಯಮಂತ್ರಿಗಳು ಸದ್ಯಕ್ಕಂತೂ ಸಂಪುಟ ವಿಸ್ತರಣೆ ಮಾಡಲ್ಲ, ಉಪಚುನಾವಣೆಗಳು ಮುಗಿಯಲಿ ಎಂದು ದಿನ ದೂಡುತ್ತಾರೆ’ ಎಂದು ವ್ಯಂಗ್ಯವಾಡಿದರು.  ಆಗ ಸುದರ್ಶನ್, ‘ಈ ಆಪರೇಷನ್ ಕಮಲ, ಉಪಚುನಾವಣೆಗಳು ಎಷ್ಟು ದಿನ’ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ಶೆಟ್ಟಿ, ‘ನೀವು ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡಿಸುವುದನ್ನು ಬಿಡುವವರೆಗೆ’ ಎಂದು ಹೇಳಿದಾಗ ಪರಿಷತ್ತಿನ ಸದಸ್ಯರೆಲ್ಲ ಅರೆಕ್ಷಣ ಪಕ್ಷಬೇಧ   ಮರೆತು ನಕ್ಕರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.