ನಿರ್ಮಾಪಕ: ಮಂಜುನಾಥ ಬಾಬು
ನಿರ್ದೇಶಕ: ಆರ್. ಚಂದ್ರು
ತಾರಾಗಣ: ಉಪೇಂದ್ರ. ಪ್ರಣೀತಾ, ರಂಗಾಯಣ ರಘು, ಶಯ್ಯಾಜಿ ಶಿಂಧೆ, ಸಾಧುಕೋಕಿಲ, ನಾಜರ್, ಸೋನು ಸೂದ್, ಬುಲೆಟ್ ಪ್ರಕಾಶ್, ರಾಹುಲ್ ದೇವ್ ಮತ್ತಿತರರು.

>ಭಾರತದಲ್ಲಿ ವ್ಯಕ್ತಿಯೊಬ್ಬನಿಗೆ ವಂಚಿಸಿ ಮಲೇಷ್ಯಾಕ್ಕೆ ಹಾರುವ ನಾಯಕ, ಅಲ್ಲಿ ತನ್ನ ವೈರಿಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಓಡಿಸಿ ಕೊಚ್ಚಿಹಾಕುತ್ತಾನೆ. ಆದರೂ ಪೊಲೀಸರು ಆತನನ್ನು ಹಿಡಿಯುವ ಮನಸು ಮಾಡುವುದಿಲ್ಲ. ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳುವ ನಾಯಕ ತನ್ನ ಕೊಂದು ದೋಚುವ ವೃತ್ತಿಯನ್ನು ಸಲೀಸಾಗಿ ಮುಂದುವರಿಸುತ್ತಾನೆ. ಅಂಥ ದೊಡ್ಡ ಕೊಲೆಗಾರ ಕೈಗೆ ಸಿಗುತ್ತಿಲ್ಲ ಎಂದು ಪೊಲೀಸ್ ಕಮೀಷನರ್ ಅರಚಾಡಿದರೆ, ಇತ್ತ ಸರ್ಕಾರ ಉಳಿಸಿಕೊಳ್ಳುವ ಸಂಕಷ್ಟದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಆತನ ಭೇಟಿಗೆ ಅಪಾಯಿಂಟ್ಮೆಂಟ್ ಪಡೆದುಕೊಂಡು ಅಧಿಕಾರ ಉಳಿಸುವಂತೆ ಕಾಲಿಗೆ ಬಿದ್ದು ಅಳುತ್ತಾರೆ! ಇಷ್ಟೆಲ್ಲಾ ಅವಸ್ಥೆಗಳನ್ನು ಕಂಡ ಪ್ರೇಕ್ಷಕ ಅಂತ್ಯದಲ್ಲಿ ಮತ್ತಷ್ಟು ದಿಗಿಲುಗೊಳ್ಳುತ್ತಾನೆ. ಡಾನ್ನಂತೆ ಮೆರೆಯುವ ನಾಯಕ ರಾಬಿನ್ಹುಡ್ನ ಅವತಾರ ಎತ್ತಿದವನಂತೆ ಕಂಡು, ಬೆಚ್ಚಿಬೀಳಿಸುತ್ತಾನೆ.

ಅತಾರ್ಕಿಕ ಸಂಗತಿಗಳನ್ನು ಪೇರಿಸುವುದರಲ್ಲಿ ನಿರ್ದೇಶಕ ಆರ್. ಚಂದ್ರು ಅವರು ಒಂದು ಹೆಜ್ಜೆ ಮುಂದೆ. ಅವರ ‘ಮೈಲಾರಿ’ ಸಿನಿಮಾದಲ್ಲಿ ಇಂಥ ಬಾಲಿಶ ದೃಶ್ಯಗಳು ಹೇರಳವಾಗಿದ್ದವು. ಹಿಂದಿನ ಸಿನಿಮಾ ‘ಚಾರ್ಮಿನಾರ್’ನಲ್ಲಿ ಅವರ ದೃಷ್ಟಿ ಕಥೆಯ ಮೇಲೆ ನೆಟ್ಟಿದ್ದರಿಂದಲೋ ಏನೋ ಅದು ಸಹನೀಯವಾಗಿ ಮೂಡಿಬಂದಿತ್ತು. ಆದರೆ ‘ಬ್ರಹ್ಮ’ದಲ್ಲಿ ಮತ್ತೆ ಹಳೆಯ ಕುದುರೆ ಬೆನ್ನುಹತ್ತಿದ್ದಾರೆ ಚಂದ್ರು. ಅದು ಅವರ ಕಲ್ಪನೆಯಲ್ಲಿ ಓಡುವ ಕುದುರೆ. ಅವರು ಉಪೇಂದ್ರರ ‘ಸೂಪರ್’, ‘ಟೋಪಿವಾಲ’ ಸಿನಿಮಾಗಳನ್ನು ನೋಡಿರಬಹುದು. ನೋಡಿಯೂ ‘ಬ್ರಹ್ಮ’ನನ್ನು ಸೃಷ್ಟಿಸಿದ್ದರೆ ಅದು ಅವರ ಭಂಡತನಕ್ಕೆ ಸಾಕ್ಷಿ. ಪ್ರೇಕ್ಷಕ ತಾನು ಕೊಟ್ಟದ್ದನ್ನೆಲ್ಲಾ ಸ್ವೀಕರಿಸುತ್ತಾನೆ ಎನ್ನುವ ಹುಂಬತನವೂ ಅವರ ಹೆಗಲ ಮೇಲಿರಬಹುದು. ಹೀಗಾಗಿ ಸಾಮಾನ್ಯ ಜ್ಞಾನ ಮತ್ತು ಪ್ರಜ್ಞೆ ಅವರನ್ನು ಕಾಡಿಸಿಲ್ಲ.

ನಾಯಕ ಅಪರಾಧಿ ಎಂದು ತೀರ್ಮಾನಿಸುವ ನ್ಯಾಯಾಧೀಶರು, ‘ಸೆಕ್ಷನ್ 302ರ ಪ್ರಕಾರ...’ ಎನ್ನುತ್ತಿದ್ದಂತೆ ‘ಯುವರ್ ‘ಹಾ’ನರ್’ ಎಂದು ನಾಯಕನ ತಂದೆ ಕೋರ್ಟಿನೊಳಗೆ ಪ್ರವೇಶಿಸುತ್ತಾನೆ. ‘ನೀನು ಕೊಲೆಗಾರನಲ್ಲ, ಲೋಕೋದ್ಧಾರ ಕೆಲಸ ಮಾಡಿದ್ದೀಯ’ ಎಂದು ಭಾಷಣ ಮಾಡುತ್ತಾನೆ. ಮರುಕ್ಷಣವೇ ನ್ಯಾಯಾಧೀಶರ ತೀರ್ಪು ಬದಲಾಗುತ್ತದೆ. ನಾಯಕನ ಶಿಕ್ಷೆ ಪ್ರಮಾಣ ಎರಡು ವರ್ಷಕ್ಕೆ ಇಳಿಯುತ್ತದೆ.

ಅಂತಿಮ ದೃಶ್ಯ: ನಾಯಕ ಈಗ ಕೇಂದ್ರ ಕಾರ್ಮಿಕ ಸಚಿವ. ಜೈಲಿನಿಂದ ಬಿಡುಗಡೆಯಾದ ಪರೋಪಕಾರಿ ಬ್ರಹ್ಮನನ್ನು ಜನರೇ ಹಣ ಹಾಕಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಾರೆ. ಲಯ ನೆಚ್ಚಿಕೊಂಡ ಬ್ರಹ್ಮ , ವಿಷ್ಣುವಾಗಿ ಪರಿವರ್ತಿತನಾಗುತ್ತಾನೆ! ಚಂದ್ರು ಅವರ ಅಜ್ಞಾನದ ಪರಮಾವಧಿಗೆ ಕೊನೆಯ ಎರಡು ದೃಶ್ಯಗಳು ಉದಾಹರಣೆ. ಬಲವಂತವಾಗಿ ಸಾಮಾಜಿಕ ಸಂದೇಶ ತುರುಕುವ ಸಾಹಸವೂ ಇದೆ.

ಬ್ರಹ್ಮನ ಸೃಷ್ಟಿ ಕಾರ್ಯ ನೋಡಿ ಬೇಸತ್ತಿರುವ ಚಂದ್ರು, ಆತನ ವೃತ್ತಿಯನ್ನು ಬದಲಿಸಿ ಲಯದ ಹೊಣೆಗಾರಿಕೆ ವಹಿಸಿದ್ದಾರೆ. ಆ ಬ್ರಹ್ಮನ ವಂಶಾವಳಿಯ ಕಥನ ಮತ್ತೊಂದು ಅಚ್ಚರಿ. ದಾನವೇ ಧರ್ಮದ ಮೂಲ ಎಂದು ನಂಬಿರುವ ರಾಜವಂಶದಲ್ಲಿ ಜನಿಸಿದ ಆಧುನಿಕ ಬ್ರಹ್ಮ ‘ಟೋಪಿವಾಲ’ನ ಕುಲಾಂತರಿ ತಳಿ. ಆತನ ರಕ್ತಪಾತಕೃತ್ಯದ ಹಿಂದೆ ಸಾಮಾಜಿಕ ಕೈಂಕರ್ಯದ ನೆಪವಿದೆ.

ತಮಿಳಿನ ‘ವಿಲನ್’, ತೆಲುಗಿನ ‘ಕಿಕ್’ ಸಿನಿಮಾಗಳಲ್ಲಿ ಇಂಥದ್ದೇ ಎಳೆಯಿತ್ತು. ತೆಲುಗು ಸಿನಿಮಾಗಳಿಂದ ತೀವ್ರವಾಗಿ ಪ್ರಭಾವಿತರಾಗಿರುವ ನಿರ್ದೇಶಕರು, ಆ ಛಾಯೆಯನ್ನು ಕನ್ನಡ ಸಿನಿಮಾದಲ್ಲಿ ಬಿತ್ತಲು ಸಾಕಷ್ಟು ಶ್ರಮವಹಿಸಿದ್ದಾರೆ. ಇಷ್ಟೆಲ್ಲಾ ರಾದ್ಧಾಂತಗಳನ್ನು ಉಪೇಂದ್ರ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಅವರದೇ ಹಳೆಯ ಚಿತ್ರಗಳ ಮುಂದುವರಿದ ಭಾಗದಂತಿರುವ ‘ಬ್ರಹ್ಮ’ ಅವರಿಗೆ ಸವಾಲೇನೂ ಹಾಕಿಲ್ಲ. ನಾಯಕಿ ಪ್ರಣೀತಾ ಹಾಡುಗಳಿಗೆ ಸೀಮಿತ.

ನಗಿಸುವ ಸಲುವಾಗಿಯೇ ರಂಗಾಯಣ ರಘು, ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಇದ್ದಾರೆ. ಇವರೆಲ್ಲರಿಗಿಂತಲೂ ನಗಿಸುವುದು ಖಡಕ್ ಪೊಲೀಸ್ ಅಧಿಕಾರಿ ಶಯ್ಯಾಜಿ ರಾವ್. ಆ ಪಾತ್ರವನ್ನು ಶಕ್ತಿಮೀರಿ ಹಾಸ್ಯಾಸ್ಪದವಾಗಿಸಿದ್ದಾರೆ ಚಂದ್ರು. ಸ್ವಂತಿಕೆಯಿಲ್ಲದ ಗುರುಕಿರಣ್ ಸಂಗೀತ ಅಬ್ಬರಿಸುತ್ತದೆ. ಸಿನಿಮಾ ಮುಗಿದ ಬಳಿಕವೂ ಮನಸಿನಲ್ಲಿ ಉಳಿಯುವುದು ರಂಗಾಯಣ ರಘು ಪಾತ್ರ ಮತ್ತು ಶೇಖರ್ ಚಂದ್ರ ಅವರ ಅದ್ಭುತ ಛಾಯಾಗ್ರಹಣ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.