ಬುಧವಾರ, ಮೇ 18, 2022
23 °C

ಕುಸ್ತಿ: ಆನಂದ, ರಮ್ಯಾಗೆ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕರ್ನಾಟಕದ ಎಸ್.ಎಚ್. ಆನಂದ ಮತ್ತು ಎಂ.ಆರ್. ರಮ್ಯ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ ಕುಸ್ತಿ ಪಂದ್ಯಾವಳಿಯಲ್ಲಿ ಭಾನುವಾರ ಕ್ರಮವಾಗಿ ಪುರುಷರ 96ಕೆಜಿ ಮತ್ತು ಮಹಿಳೆಯರ 63 ಕೆಜಿ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.ಪುರುಷರ 96 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಆನಂದ ಅವರು ಬೆಳಗಾವಿಯ ಎಂಎಲ್‌ಐಆರ್‌ಸಿಯ ಪ್ರವೀಣ ಶೆವಳೆಯವರನ್ನು ಪರಾಭವಗೊಳಿಸಿದರು.ಫಲಿತಾಂಶ: ಪುರುಷರ ವಿಭಾಗ: 96ಕೆಜಿ: ಎಸ್.ಎಚ್. ಆನಂದ (ಕರ್ನಾಟಕ)-1, ಪ್ರವೀಣ ಶೇವಳೆ (ಎಂಎಲ್‌ಐಆರ್‌ಸಿ ಬೆಳಗಾವಿ) -2, ಪುಂಡಲೀಕ ಘಾರೆ (ಸೇನಾ ಬೆಂಗಳೂರು)-3, ಎಸ್.ಆರ್. ಯಳಶೆಟ್ಟಿ (ಕರ್ನಾಟಕ ರಾಜ್ಯ ಪೊಲೀಸ್)-3; 84ಕೆಜಿ: ಭಗವಂತ ಎ. ಬೀಳಗಿ (ಕರ್ನಾಟಕ ರಾಜ್ಯ ಪೊಲೀಸ್)-1, ವಿಠ್ಠಲ್ ಕೆಂಪಣ್ಣವರ (ಎಂಎಲ್‌ಐಆರ್‌ಸಿ ಬೆಳಗಾವಿ)-2, ರಾಜೇಂದ್ರ (ಕುರುಕ್ಷೇತ್ರ)-3, ಕೆಂಚಪ್ಪ (ಕರ್ನಾಟಕ ರಾಜ್ಯ ಪೊಲೀಸ್)-3;   74ಕೆಜಿ: ಎಲ್.ಎಂ. ಯೆಲಶೆಟ್ಟಿ (ಕರ್ನಾಟಕ ರಾಜ್ಯ ಪೊಲೀಸ್)-1,ಕೃಷ್ಣಾ ಸಾವಂತ್ (ಎಂಎಲ್‌ಐಆರ್‌ಸಿ ಬೆಳಗಾವಿ)-2, ಎಲ್. ಆನಂದ (ಕರ್ನಾಟಕ)-3, ಪಾಂಡುರಂಗ ಕುಂಬಾರ (ಕರ್ನಾಟಕ)-3; 66: ಕೆಜಿ: ಕೆ. ಗೋಪಿ (ಡಿವೈಎಸ್‌ಎಸ್ ದಾವಣಗೆರೆ)-1, ಹನುಮಂತ ಚನ್ನಾಳ (ಕರ್ನಾಟಕ)-2, ನಿಶಾಂತ್ ಪಾಟೀಲ (ಕರ್ನಾಟಕ)-3, ಅನುರತ್ ದೇಬೆಕರ್ (ಎಂಎಲ್‌ಐಆರ್‌ಸಿ ಬೆಳಗಾವಿ)-3; 55 ಕೆಜಿ: ಶಿವಾಜಿ ಪಾಟೀಲ (ಎಂಎಲ್‌ಆರ್‌ಸಿ ಬೆಳಗಾವಿ)-1, ಕೆಂಚಪ್ಪ (ಡಿವೈಎಸ್‌ಎಸ್ ದಾವಣಗೆರೆ)-2, ಜ್ಯೋತಿರಾಮ್ ಪಾಟೀಲ (ಕರ್ನಾಟಕ)-3, ವಿನಾಯಕ ವಿ. ಗುರವ್ (ಕರ್ನಾಟಕ)-3;ಮಹಿಳೆಯರ ವಿಭಾಗ: 72ಕೆಜಿ: ಅಕ್ತಾ (ಕುರುಕ್ಷೇತ್ರ)-1, ದೀಕ್ಷಾ(ಮಧ್ಯಪ್ರದೇಶ)-2, ನೇಹಾ (ದೆಹಲಿ)-3, ಭವ್ಯಾ (ಮೈಸೂರು)-4;63ಕೆಜಿ: ಎಂ.ಆರ್. ರಮ್ಯಾ (ಕರ್ನಾಟಕ)-1, ಭಾತೇರಿ (ಹರಿಯಾಣ)-2, ನಮಿತಾ (ಕರ್ನಾಟಕ)-3, ಶಿವಾನಿ ಚೌಧರಿ (ಕುರುಕ್ಷೇತ್ರ)-3;  55ಕೆಜಿ: ಧನಶ್ರೀ ಪಾಟೀಲ (ಕರ್ನಾಟಕ)-1, ಪ್ರಿಯಾಂಕಾ (ಮಹಾರಾಷ್ಟ್ರ)-2, ಸೋನು (ದೆಹಲಿ)-3, ಮೀನು ಸಾಹು (ದೆಹಲಿ)-3; 51ಕೆಜಿ: ಆರತಿ ಪಾಟೀಲ (ಕರ್ನಾಟಕ)-1, ಶಾಹೀದಾ (ಕರ್ನಾಟಕ)-2, ಅರ್ಪಣಾ ಬಿಷ್ಣಯ್ (ಮಧ್ಯಪ್ರದೇಶ)-3, ಹರ್ಷದಾ (ಮಹಾರಾಷ್ಟ್ರ)-3; 48ಕೆಜಿ: ಪ್ರೇಮಾ ಹುಚ್ಚಣ್ಣವರ (ಕರ್ನಾಟಕ)-1, ರೇಖಾ ಮಸ್ಕೆ (ಮಹಾರಾಷ್ಟ್ರ)-2, ಬಶೀರಾ ವಕ್ರದ್ (ಕರ್ನಾಟಕ)-3, ಅಮೃತಾ ಬಿಷ್ಣೋಯ್ (ಮಧ್ಯಪ್ರದೇಶ)-3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.