ಶುಕ್ರವಾರ, ಮೇ 27, 2022
22 °C

ಕೂಡ್ಲಿಗಿ ಶಾಸಕ ನಾಗೇಂದ್ರ ಮನೆ ಮೇಲೆ ಸಿಬಿಐ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 

ಬಳ್ಳಾರಿ (ಪಿಟಿಐ): ರೆಡ್ಡಿ ಅನುಯಾಯಿ ಎಂದೇ ಬಿಂಬಿತವಾಗಿರುವ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರ ಮನೆ ಸೇರಿದಂತೆ ಬಂಧಿತರಾಗಿರುವ ಜನರ್ದನ ರೆಡ್ಡಿಗೆ ಸೇರಿದ ಕೆಲವು ಕಡೆ ಸಿಬಿಐ ದಾಳಿ ನಡೆಸಿದೆ.

ಜಿ.ಜನಾರ್ಧನ ರೆಡ್ಡಿ ಅವರ ಪತ್ನಿ ಒಡೆತನದ ಒಂದು ಕಂಪೆನಿ ಸೇರಿದಂತೆ ಒಟ್ಟು ಎರಡು ಕಂಪೆನಿಗಳ ಮೇಲೂ ಧಾಳಿ ನಡೆದಿದೆ. ಕರ್ನಾಟಕ ವೃತ್ತದ ಸಿಬಿಐ ವರಿಷ್ಠಾಧಿಕಾರಿ ಸುಬ್ರಹ್ಮಣ್ಯ ರಾವ್ ಅವರ ನೇತೃತ್ವದಲ್ಲಿ 25 ಅಧಿಕಾರಗಳ ತಂಡವು ಅರುಣಾ ಲಕ್ಷ್ಮಿ ಒಡೆತನದ ಎಎಂಸಿ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಮಾರ್ಚ್ 2010ರಲ್ಲಿ ಎಎಂಸಿ ಯಿಂದ 51 ಲಕ್ಷ ಟನ್ ಉಕ್ಕು ಪಡೆದ ಹಿನ್ನಲೆಯಲ್ಲಿ ಜಿಂದಾಲ್ ಸ್ಟೀಲ್ ವರ್ಕ್ಸ್ ನ ಮಾನವ ಸಂಪನ್ಮೂಲ ಕಚೇರಿಯನ್ನು ಸಿಬಿಐ ಶೋಧಿಸಿತು ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.