ಹರಪನಹಳ್ಳಿ: ಮನುಕುಲದ ಕಲ್ಯಾಣಕ್ಕಾಗಿ ಆಚಾರ-ವಿಚಾರ, ಸಂಸ್ಕೃತಿ ಹಾಗೂ ನೀತಿ-ನಿಯಮಗಳ ಪರಿಕಲ್ಪನೆಯಲ್ಲಿ ಧರ್ಮಜಾಗೃತಿ ಮೂಡಿಸಿದ ಪವಾಡ ಪುರುಷ ಕೂಲಹಳ್ಳಿಯ ಗೋಣಿಬಸವೇಶ್ವರ ರಥೋತ್ಸವ ಮಾರ್ಚ್ 16ರಂದು ಬುಧವಾರ ಸಂಜೆ 4.30ಕ್ಕೆ ಜರುಗಲಿದೆ.12ನೇ ಶತಮಾನದಲ್ಲಿ ಆರಂಭವಾದ ಶರಣ ಚಳವಳಿ ಕರ್ನಾಟಕದಲ್ಲಿ ಹೊಸ ಪರಂಪರೆಯ ಸಂಚಲನಕ್ಕೆ ನಾಂದಿ ಹಾಡಿತು. ಶೋಷಿತ ವರ್ಗಗಳ, ಅನಿಷ್ಟ ಜಾತಿಪದ್ಧತಿ, ವರ್ಗ-ವರ್ಣ ವ್ಯವಸ್ಥೆ ವಿರುದ್ಧ ಹಾಗೂ ಕಾಯಕ ಸಂಸ್ಕೃತಿಯ ದ್ಯೋತಕವಾಗಿದ್ದ ಈ ಚಳವಳಿ ನಂತರದ ದಿನಗಳಲ್ಲಿ ಸಾಂಸ್ಥಿಕ ರೂಪ ಪಡೆಯುತ್ತ, ಶರಣ ಚಳವಳಿಯ ಕ್ರಾಂತಿಗೆ ಕಾರಣವಾಗಿದ್ದ ದುಡಿಯುವ ವರ್ಗ ಕ್ರಮೇಣ ಧರ್ಮದ ಅಲೆಯಿಂದ ದೂರ ಸರಿಯುತ್ತ ಸಾಗಿತು.

ಶರಣರ ಆದರ್ಶ ಗಳನ್ನು ಪುನರ್ಸ್ಥಾಪಿಸಲು ಅನೇಕ ಪವಾಡ ಪುರುಷರು ಜನ್ಮತಾಳಿದರು. ಅವರ ಪೈಕಿ ಮಧ್ಯಕರ್ನಾಟಕದ ಪಂಚಗಣಾಧೀಶ್ವರ ಪಂಥ ಪ್ರಮುಖವಾದುದು.
ಪರಶಿವನ ಆಜ್ಞೆಯಂತೆ ಪಂಚಗಣಾಧೀಶ್ವರರಾದ ಕೊಟ್ಟೂರಿನಲ್ಲಿ ಗುರು ಕೊಟ್ಟೂರೇಶ್ವರ, ಹರಪನಹಳ್ಳಿಯಲ್ಲಿ ಕೆಂಪೇಶ್ವರ, ಅರಸೀಕೆರೆಯಲ್ಲಿ ಕೋಲಶಾಂತೇಶ್ವರ, ನಾಯಕನಹಟ್ಟಿಯಲ್ಲಿ ತಿಪ್ಪೇರುದ್ರೇಶ್ವರ ಹಾಗೂ ಕೂಲಹಳ್ಳಿಯಲ್ಲಿ ಮದ್ದಾನೇಶ್ವರ ನೆಲಸಿದರು ಎಂಬ ಐತಿಹವಿದೆ. ಪಂಚಗಣಾಧೀಶ್ವರರಲ್ಲಿ ಕೋಲಶಾಂತೇಶ್ವರ, ಕೆಂಪೇಶ್ವರ ಹಾಗೂ ಮದ್ದಾನೇಶ್ವರ ಪಂಚಗಣಾಧೀಶ್ವರರು ತಾಲ್ಲೂಕಿನಲ್ಲಿಯೇ ನೆಲೆಯೂರಿರುವುದು ಇನ್ನೊಂದು ವಿಶೇಷ.

ಈ ಪಂಚಗಣಾಧೀಶ್ವರ ಪೈಕಿ ಮದ್ದಾನೇಶ್ವರು ಮಾತ್ರ ಶರಣೆ ಕನಕಾಂಬಿಕಾರನ್ನು ವಿವಾಹವಾಗುವ ಮೂಲಕ ಸಾಂಸಾರಿಕ ಬದುಕಿಗೆ ನಾಂದಿ ಹಾಡುತ್ತಾರೆ. ಮದ್ದಾನೇಶ್ವರ ಹಾಗೂ ಕನಕಾಂಬಿಕಾರ ಉದರದಲ್ಲಿ ಜನಿಸಿದ ಗೋಣಿಬಸವೇಶ್ವರ ಲೋಕ ಕಲ್ಯಾಣಕ್ಕೆ 14-15ನೇ ಶತಮಾನದ ಮಧ್ಯಭಾಗ ದಲ್ಲಿ ಧರ್ಮದ ಬೀಜವನ್ನು ಬಿತ್ತಿ ಬೆಳೆದವರಾಗಿದ್ದು, ಕೂಲಹಳ್ಳಿಯಲ್ಲಿಯೇ ಐಕ್ಯರಾಗಿದ್ದಾರೆ ಎನ್ನುತ್ತಾರೆ ಗೋಣಿಬಸವೇಶ್ವರ ಸಂಸ್ಥಾನದ 8ನೇ ಪಟ್ಟಾಧಿಪತಿ ಚಿನ್ನಯ ಸ್ವಾಮೀಜಿ.

ಗೋಣಿಬಸವೇಶ್ವರರು ನಡೆಸಿದರು ಎನ್ನಲಾದ ಪವಾಡಗಳು ಹತ್ತು ಹಲವು. ತನ್ನ ನೆಲೆಬೀಡಿನ ಪಕ್ಕದಲ್ಲಿರುವ ಚಿಕ್ಕಹಳ್ಳಿಯಲ್ಲಿ ವ್ಯವಸಾಯ ನಿರತನಾಗಿದ್ದ ಸಂದರ್ಭದಲ್ಲಿ ಆಕಸ್ಮಿಕ ವಾಗಿ ಬಂದ ಜೋಡಿ ಹುಲಿಗಳನ್ನೆ ತನ್ನ ವ್ಯವಸಾಯ ಚಟುವಟಿಕೆಗೆ ಬಳಸಿಕೊಂಡಿದ್ದಾರೆ ಎನ್ನುವುದು. ಅಳಿಲು ಚರ್ಮವನ್ನೇ ತೆಪ್ಪಮಾಡಿಕೊಂಡು, ಕೈಯಲ್ಲಿನ ಬೆತ್ತವನ್ನೇ ಹರಿಗೋಲು ಮಾಡಿಕೊಂಡು ರಭಸದಿಂದ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು ದಾಟಿ, ಮುಂಡರಗಿ ತಾಲ್ಲೂಕಿನ ಗುಮ್ಮಗೋಳ ತಲುಪಿದ ಹಾಗೂ ಗೋಣಿಬಸವೇಶ್ವರ ಜನಪ್ರಿಯತೆಯನ್ನು ಸಹಿಸದ ಚಿಗಟೇರಿಯ ಶಿವನಯ್ಯ ಎಂಬ ದೊರೆ ಗೋಣಿಬಸವೇಶ್ವರನನ್ನು ಸುಣ್ಣದ ಗೋಣಿಚೀಲದಲ್ಲಿ ಸುತ್ತಿ ಹರಪನಹಳ್ಳಿಯ ಪಕ್ಕದಲ್ಲಿರುವ ಅಯ್ಯನಕೆರೆಗೆ ಎಸೆಯುವಂತೆ ಸೂಚಿಸಿದ. ಹೀಗೆ ಕೆರೆಯಲ್ಲಿ ಎಸೆಯಲಾಗಿ ಸುಣ್ಣದ ಚೀಲವನ್ನು ಬಗೆದು ಅವತಾರ ಪುರುಷನಾಗಿ ಮತ್ತೆ ಎದ್ದು ಬಂದಿರುವ ಹಿನ್ನೆಲೆಯಲ್ಲಿ ಗೋಣಿಬಸವೇಶ್ವರ ಎಂದು ಜನಮನದಾಳದಲ್ಲಿ ನೆಲಸಿದರು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ಯಾವುದೇ ಒಂದು ಜಾತಿ, ಪಂಥ ಹಾಗೂ ವರ್ಗಕ್ಕೆ ಸೀಮಿತಗೊಳ್ಳದ ಗೋಣಿಬಸವೇಶ್ವರ ಸಕಲ ಜಾತಿ, ಧರ್ಮಕ್ಕೂ ಬೇಕಾದ ಹಾಗೂ ಕೃಷಿ ಸಂಸ್ಕೃತಿಯ ಆರಾಧ್ಯ ದೈವ. ಹಾಗಾಗಿಯೇ ಜಾತ್ರೆಯಲ್ಲಿ ಸಕಲ ಧರ್ಮದವರು ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.