ಭಾನುವಾರ, ಮೇ 29, 2022
21 °C

ಕೃತಿ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಪ್ರಿಯ ನೃತ್ಯಶಾಲೆ: ಶುಕ್ರವಾರ ಕೃತಿ ಭರತನಾಟ್ಯ ರಂಗಪ್ರವೇಶ (ನಟುವಾಂಗ ಮತ್ತು ಸಂಗೀತ: ಡಾ. ಸಂಜಯ್ ಶಾಂತಾರಾಮ್. ಮೃದಂಗ: ಜಿ. ಗುರುಮೂರ್ತಿ. ವಯಲಿನ್: ನಟರಾಜ ಮೂರ್ತಿ. ಕೊಳಲು: ವಿದ್ವಾನ್ ಗಣೇಶ. ರಿದಂ ಪ್ಯಾಡ್: ಕಾರ್ತಿಕ್ ದಾತಾರ್).ಆರರ ಎಳವೆಯಲ್ಲೇ ಶಿವಪ್ರಿಯ ನೃತ್ಯಶಾಲೆಯ ಡಾ. ಸಂಜಯ್ ಶಾಂತಾರಾಮ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಮೊದಲ ಹೆಜ್ಜೆ ಇಟ್ಟ ಕೃತಿ ಈಗ ಉದಯೋನ್ಮುಖ ಕಲಾವಿದೆ. ಒಂಬತ್ತು ವರ್ಷಗಳಿಂದ ಶ್ರದ್ಧೆಯಿಂದ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾಳೆ.ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಉತ್ತೀರ್ಣಳಾಗಿದ್ದಾಳೆ. ಹಲವು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾಳೆ. ಪ್ರಸ್ತುತ ಸಿಂಧಿ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಕೃತಿ ತನ್ನ ಪಾಲಕರು ಮತ್ತು ಗುರುಗಳ ಮಾರ್ಗದರ್ಶನದಿಂದ ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡುವ ಆಕಾಂಕ್ಷೆ ಹೊಂದಿದ್ದಾಳೆ.ಡಾ. ಸಂಜಯ್ ಶಾಂತಾರಾಮ್ ನೃತ್ಯ ಕ್ಷೇತ್ರದಲ್ಲಿ ಖ್ಯಾತನಾಮರು. ಗುರು ಜಿ. ಎಸ್. ರಾಜಲಕ್ಷ್ಮಿ ಮತ್ತು ಗುರು ನರ್ಮದಾ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿರುವ ಅವರು ಸುನಂದಾ ದೇವಿ ಅವರ ಬಳಿ ಕೂಚಿಪುಡಿ ಕಲಿತರು.ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಮೊದಲ ರ‌್ಯಾಂಕ್ ಪಡೆದು ಉತ್ತೀರ್ಣರಾದವರು.ನೃತ್ಯದ ಜತೆ ಸುಮಧುರ ಕಂಠಸಿರಿಗಾಗಿಯೂ ಪ್ರಸಿದ್ಧಿ ಪಡೆದಿರುವ ಅವರು, ನೃತ್ಯ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಹಾಡುತ್ತಾರೆ. ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.  ಸಂಜೆ 6.15  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.