ಬುಧವಾರ, ಆಗಸ್ಟ್ 4, 2021
24 °C
35 ವಿದ್ಯಾರ್ಥಿಗಳಿಗೆ ಅವಕಾಶ: ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆ

ಕೃಷಿ ಮಹಾವಿದ್ಯಾಲಯದಲ್ಲಿ ಡಿಪ್ಲೊಮಾ ವೃತ್ತಿಪರ ಕೋರ್ಸ್

ಪ್ರಜಾವಾಣಿ ವಾರ್ತೆ/ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಶಹಾಪುರ:  ಎಸ್ಸೆಸ್ಸೆಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪಿಯುಸಿ ಬದಲಾಗಿ ವೃತ್ತಿ ಶಿಕ್ಷಣವಾದ ಡಿಪ್ಲೊಮಾ (ಕೃಷಿ) ಪ್ರವೇಶ ಪಡೆಯಲು ಅವಕಾಶವಿದೆ.ಹೈದರಾಬಾದ್‌ ಕರ್ನಾಟಕ ಕೃಷಿ ಕ್ಷೇತ್ರದ ಹೆಬ್ಬಾಗಲಿನಂತೆ  ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾ ಲಯವು ಕೃಷಿ, ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯ ಉದ್ದೇಶಗಳನ್ನು ಇಟ್ಟುಕೊಂಡು 2001 ರಲ್ಲಿ ಸ್ಥಾಪನೆ ಗೊಂಡಿದೆ. ನೀರಾವರಿ ಪ್ರದೇಶವಾಗಿದ್ದ ರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯಲು ಕೃಷಿಯ ನೂತನ ತಂತ್ರಜ್ಞಾನ ಗಳನ್ನು ಅಳವಡಿ ಸಿಕೊಂಡು ರೈತರು ಆರ್ಥಿಕವಾಗಿ ಸಬಲ ರಾಗಲಿ ಎನ್ನುವ ಹಿರಿದಾದ ಆಸೆ ಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕೃಷಿ ಪದವಿಯನ್ನು ಪಡೆದುಕೊಂಡು ಹಲ ವಾರು ವಿದ್ಯಾರ್ಥಿಗಳು ಹೊರ ಬಂದಿದ್ದಾರೆ.ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ 2011–12ನೇ ಶೈಕ್ಷಣಿಕ ವರ್ಷದಿಂದಲೇ ಡಿಪ್ಲೊಮಾ ಕೋರ್ಸ್ (ಕೃಷಿ) ಆರಂಭಿಸಲಾಗಿದೆ.  ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಕ್ಷೇತ್ರದ ರೈತರ ಮಕ್ಕಳಿಗೆ ಉಪಯುಕ್ತವಾದ ಕೋರ್ಸ್ ಇದಾಗಿದೆ. ಮುಂದೆ ಸಾಕಷ್ಟು ಅವಕಾಶ ಗಳಿದ್ದು ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿದೆ.ಡಿಪ್ಲೊಮಾ (ಕೃಷಿ) ಎರಡು ವರ್ಷದ ಕೋರ್ಸ್ ಇದಾಗಿದೆ. ನಾಲ್ಕು ಸೆಮಿಸ್ಟರ್‌ ಗಳನ್ನು ಒಳಗೊಂಡಿದೆ.  ಬೋಧನೆ ಕನ್ನಡ ಮಾಧ್ಯಮದಲ್ಲಿ ಇರುತ್ತದೆ. ಇದ ರಿಂದ ಗ್ರಾಮೀಣ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗುತ್ತದೆ.ಡಿಪ್ಲೊಮಾ ಕೋರ್ಸ್ (ಕೃಷಿ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹1ಸಾವಿರ ವಿದ್ಯಾರ್ಥಿ ವೇತನ  ನೀಡಲಾಗುತ್ತದೆ. ವಿದ್ಯಾರ್ಥಿ ವೇತನ ಗರಿಷ್ಠ ನಾಲ್ಕು ಸೆಮಿಸ್ಟರ್‌ಗೆ ಸೀಮಿತ ವಾಗಿದೆ. ಅಲ್ಲದೆ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿ ವೇತನವನ್ನು ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿ ಗಳಿಗೆ ನೀಡಲಾಗುತ್ತದೆ.ಮೀಸಲಾತಿ: ಹೈದರಾಬಾದ್‌ ಕರ್ನಾಟ ಕದ ಆರು ಜಿಲ್ಲೆಯ ವಿದ್ಯಾರ್ಥಿಗಳಿಗೆ 371 (ಜೆ) ಕಲಂ ಅನ್ವಯ ಶೇ 70ರಷ್ಟು ಸ್ಥಾನ ಲಭ್ಯವಾಗಲಿವೆ. ಅಲ್ಲದೆ ರೈತರ ಮಕ್ಕಳು ಆಗಿದ್ದರೆ ಶೇ 40ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ  ವಿಶ್ವವಿದ್ಯಾಲಯದ ವೆಬ್‌ಸೈಟ್(www.uasraichur.edu.in) ನಲ್ಲಿ ಪಡೆಯಬಹುದಾಗಿದೆ.ಮುಖ್ಯಾಂಶಗಳು

*  ಎಸ್ಸೆಸ್ಸೆಲ್ಸಿ ನಂತರ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾವಕಾಶ

* ಕನ್ನಡ ಮಾಧ್ಯಮದಲ್ಲಿ ಬೋಧನೆ

* ರೈತರ ಮಕ್ಕಳಿಗೆ ಶೇ 40ರಷ್ಟು ಸ್ಥಾನ ಲಭ್ಯಹೈ.ಕ.ಜಿಲ್ಲೆಗಳ ವಿದ್ಯಾರ್ಥಿಗಳಿಗೆ  ಶೇ 70 ರಷ್ಟು ಸ್ಥಾನಗಳ ಮೀಸಲಾತಿ ನೀಡ ಲಾಗಿದೆ. ನೀರಾವರಿ ಭಾಗದ ವಿದ್ಯಾ ರ್ಥಿಗಳಿಗೆ ಕೋರ್ಸ್ ಹೆಚ್ಚು ಉಪಯುಕ್ತ

ಡಾ.ಸುರೇಶ ಎಸ್‌.ಪಾಟೀಲ್ ಡೀನ್, ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.