ಗುರುವಾರ , ಏಪ್ರಿಲ್ 22, 2021
28 °C

ಕೃಷಿ ಮಹಿಳೆಗೆ ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಆಲಮಟ್ಟಿ ಜಲಾಶಯದಿಂದ ಅಧಿಕ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಟ್ಟ ಪರಿಣಾಮ ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಮೈತುಂಬಿ ಹರಿಯುತ್ತಿವೆ. ಕೃಷ್ಣಾ ಹಾಗೂ ಮಲ್ಲಪ್ರಭೆಯ ಸಂಗಮ ಸ್ಥಳವಾದ ಕೂಡಲಸಂಗಮದಲ್ಲಿ  ಸೋಮವಾರ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಾಗಿನ ಅರ್ಪಿಸಿ ದರು.ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದ ಶ್ರೀಗಳು ನದಿಯ ದಡದಲ್ಲಿ ವಚನಗಳ ಮೂಲಕ ಕೃಷ್ಣೆಗೆ ಭಕ್ತಿಪೂರ್ವಕ ಗೌರವ ಸಲ್ಲಿಸಿದರು. ನದಿಗೆ ಬಾಗಿನ ಸಮರ್ಪಿಸುವ ಸಂಪ್ರದಾಯಕ್ಕೆ ಬದಲಾಗಿ ಬಾಗಿನಕ್ಕೆ ಬಳಸುವ ಸೀರೆ, ಅಕ್ಕಿ, ತಟ್ಟೆ ಮುಂತಾದ ಪದಾರ್ಥ ಗಳನ್ನು ನದಿಯ ದಡದಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಮಹಿಳೆಯರಿಗೆ ಅರ್ಪಿಸಿ ವೈಚಾರಿಕತೆಯನ್ನು ತೋರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ ಜಲಾಶಯಗಳು ತುಂಬುತ್ತಿವೆ. ಇಂತಹ ಸಂದರ್ಭದಲ್ಲಿ ಬಾಗಿನ ಅರ್ಪಿಸುವುದು ರೈತರ ಸಂಪ್ರದಾಯ ಆದರೆ ರಾಜಕಾರಣಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಬೆಲೆ ಬಾಳುವ ಸೀರೆ, ದವಸ ದಾನ್ಯ ನದಿಗೆ ಎಸೆದು ವ್ಯರ್ಥ ಮಾಡುವುದನ್ನು ನಡೆದು ಬಂದಿದೆ. ಅದರ ಬದಲಿಗೆ ರೈತರಿಗೆ ಕೊಡುವಂತಹ ಸಂಪ್ರದಾಯವನ್ನು ಮುಖ್ಯಮಂತ್ರಿಗಳು, ಸಚಿವರು, ಸಂಘ ಸಂಸ್ಥೆಗಳ ಮುಖಂಡರು ರೂಡಿಸಿಕೊಳ್ಳಬೇಕು ಎಂದು ಸಲಹೆ ಹೇಳಿದರು.ಕೃಷ್ಣೆಗೆ ಗೌರವಾರ್ಪಣೆ ಹಾಗೂ ಕೃಷಿ ಮಹಿಳೆಗೆ ಬಾಗಿನ ಸಮರ್ಪಣೆ ಸಮಾರಂಭದಲ್ಲಿ ಕೂಡಲ ಸಂಗಮ ಪಶು ಇಲಾಖೆಯ ಮುತ್ತು ಪಾಟೀಲ, ಪಂಚ ಸೈನದ ಶಂಭು ಗೌಡರ, ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ಬಿ.ಎಸ್.ಕಳ್ಳಿ, ಕಪ್ಪಯ್ಯ ಯಡಹಳ್ಳಿಮಠ, ಮಹಾಂತೇಶ ಭದ್ರಶೆಟ್ಟಿ, ಕೂಡಲಸಂಗಮ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ಅಶೋಕ ವಾಲಿಕಾರ, ಸೋಮಶೇಖರ, ತುರಡಗಿಯ ಹಿರಿಯ ಮುಖಂಡ ದಂಡನಗೌಡ ಗೌಡರ ಉಪಸ್ಥಿತರಿದ್ದರು.ನಂತರ ಶ್ರೀಗಳು ಕೃಷ್ಣ ಮಲಪ್ರಭೆ ನದಿಯಲ್ಲಿ ದೋಣಿ ಸಂಚಾರ ಮಾಡಿದರು.ಕಾರಜೋಳರ ಅಭಿನಂದನಾ ಸಮಾರಂಭ ಇಂದು

ಮುಧೋಳ:
ನಿಜ ಶರಣ ಅಂಬಿಗರ ಚೌಡಯ್ಯನವರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಣೆಗೆ ತಂದಿರುವ ಸಚಿವ ಗೋವಿಂದ ಕಾರಜೋಳರ  ಅಭಿನಂದನಾ ಸಮಾರಂಭವನ್ನು ಇದೇ 7 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಹೇಮರಡ್ಡಿ ಮಲ್ಲಮ್ಮ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಸಂಘಟನಾ ಕಾರ್ಯದರ್ಶಿ ನಾಗಪ್ಪ ಅಂಬಿ, ಕಾರ್ಯದರ್ಶಿ ಭೀಮಶಿ ಹುನ್ನೂರ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.