ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಸ್ವಲ್ಪ ಮಳೆ ಕಡಿಮೆ ಯಾಗಿದೆ. ಆದರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದೆ.

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದರೆ ಜಿಲ್ಲೆ ಯಲ್ಲಿ ಮಳೆ ಹೆಚ್ಚಿದ ಪರಿಣಾಮ ಮಲಪ್ರಭಾ ಹಾಗೂ ಹಿರಣ್ಯ ಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ.

ಜಿಲ್ಲೆಯ 13 ಸೇತುವೆಗಳು ನೀರಿನಲ್ಲಿ ಮುಳುಗಡೆ ಯಾ ಗಿದ್ದು, ಚಿಕ್ಕೋಡಿ ತಾಲ್ಲೂಕಿನ ಎಂಟು, ಹುಕ್ಕೇರಿ ಮತ್ತು ಖಾನಾ ಪುರ ತಾಲ್ಲೂಕಿನ ತಲಾ ಎರಡು, ರಾಯಬಾಗ ತಾಲ್ಲೂಕಿನ ಒಂದು ಸೇತುವೆ ನೀರಿನಲ್ಲಿ ಮುಳುಗಿವೆ.

ಖಾನಾಪುರ ತಾಲ್ಲೂಕಿನ ಅಸೋಗಾ ಹಾಗೂ ಖಾನಾಪುರ ಪಟ್ಟಣದ ಬಳಿಯ ಹಳೆ ಸೇತುವೆ ನೀರಿನಲ್ಲಿ ಮುಳುಗಿದ್ದು, ಮಳೆಯ ಆರ್ಭಟ ಜೋರಾಗಿಯೇ ಇದೆ. ನಗರದಲ್ಲಿಯೂ ಮಳೆ ಬಿಟ್ಟು-ಬಿಟ್ಟು ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ವಾರ್ತಾ ಇಲಾಖೆಯ ಉಪನಿರ್ದೇಶಕರ ಕಚೇರಿ ಸತತ ಮಳೆಯಿಂದಾಗಿ ಸಂಪೂರ್ಣವಾಗಿ ಸೋರುತ್ತಿದೆ. ತಟ, ತಟ ಬೀಳುವ ಹನಿಗಳ ಮಧ್ಯೆಯೇ ಕೆಲಸ ಮಾಡಬೇಕಾದ ಸ್ಥಿತಿ ಅಲ್ಲಿನ ಸಿಬ್ಬಂದಿಯದ್ದಾಗಿದೆ. ಸೋರುತ್ತಿರುವ ಕುರಿತು ತಿಂಗಳ ಹಿಂದೆಯೇ ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರೂ, ಅಲ್ಲಿನ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ.

ಚಿಕ್ಕೋಡಿ ವರದಿ: ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿ ವಿನಲ್ಲಿ ಇಳಿಮುಖವಾಗಿದೆ. ಶುಕ್ರವಾರ ಮಹಾರಾಷ್ಟ್ರದ ರಾಜಾ ಪುರ ಬ್ಯಾರೇಜಿನಿಂದ ರಾಜ್ಯಕ್ಕೆ 1.14 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ಮತ್ತು ಉಪನದಿಗಳಾದ ದೂಧ ಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಹರಿವಿನ್ಲ್ಲಲಿಯೂ ನಿಧಾನಗತಿಯ ಇಳಿಕೆ ಕಂಡು ಬರುತ್ತಿದೆ.

ತಾಲ್ಲೂಕಿನ ಕಲ್ಲೋಳ-ಯಡೂರ, ಅಂಕಲಿ-ಮಾಂಜರಿ (ಹಳೇ ಸೇತುವೆ), ಅಂಕಲಿ-ಬಾವಾನಸವದತ್ತಿ, ಜತ್ರಾಟ- ಭೀವಶಿ, ಸಿದ್ನಾಳ-ಅಕ್ಕೋಳ, ಮಲಿಕವಾಡ-ದಾನವಾಡ, ಸದಲಗಾ-ಜನವಾಡ ಹಾಗೂ ಕಾರದಗಾ-ಭೋಜ ಸೇತುವೆ ಗಳು ನೀರಿನಲ್ಲಿ ಮುಳುಗಿವೆ.

ಮಳೆ ವಿವರ: ಚಿಕ್ಕೋಡಿ 8.7 ಮಿ.ಮೀ. ಸದಲಗಾ-10.0 ಮಿ.ಮೀ. ನಿಪ್ಪಾಣಿ (ಎಆರ್ಎಸ್)-12 ಮಿ.ಮೀ. ಮಹಾರಾ ಷ್ಟ್ರದ ಕೊಯ್ನಾ-62 ಮಿ.ಮೀ. ಮಹಾಬಳೇಶ್ವರ-117 ಮಿ.ಮೀ. ನವಜಾ-84 ಮಿ,ಮೀ. ವಾರಣಾ-52 ಮಿ.ಮೀ. ಬಿದ್ದಿದೆ.

ರಾಯಬಾಗ ವರದಿ: ಕೃಷ್ಣಾ ನದಿ ನೀರಿನಲ್ಲಿ ಇಳಿಕೆಯಾದ ಪರಿ ಣಾಮ ತಾಲ್ಲೂಕಿನ ಕುಡಚಿ ಸೇತುವೆ ಮೇಲಿನ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ.

ಕೃಷ್ಣಾ ನದಿಯಲ್ಲಿ ಮುಳುಗಿದ್ದ ಚಿಂಚಲಿ ಬಳಿಯ ಹಾಲಹಳ್ಳ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ನಾಳೆ ಬೆಳಿಗ್ಗೆ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಹುಕ್ಕೇರಿ ವರದಿ: ತಾಲ್ಲೂಕಿನಲ್ಲಿ ಹರಿಯುತ್ತಿರುವ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ವಾಗಿದೆ. ಘಟಪ್ರಭಾ ಜಲಾಶಯದಿಂದ 23 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ.

ತಾಲ್ಲೂಕಿನ ಸುಲ್ತಾನಪುರ ಹಾಗೂ ಗೋಟೂರ ಸೇತುವೆ ಗಳು ನೀರಿನಲ್ಲಿ ಮುಳುಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ತಾಲ್ಲೂಕಿನಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿದ್ದರೂ, ತಾಲ್ಲೂ ಕಿನ ಕೆಲವೆಡೆ ಸಮರ್ಪಕ ಮಳೆಯಾಗದ್ದರಿಂದ ಬೆಳೆಗೆ ನೀರಿಲ್ಲ ದಂತಾಗಿರುವುದು ವಿಪರ್ಯಾಸದ ಸಂಗತಿ.

ಮಲಪ್ರಭೆಯ ಮಡಿಲು ಭರ್ತಿ
ಸವದತ್ತಿ: ತಾಲ್ಲೂಕಿನ ಸಮಸ್ತ ಜನರ ಜೀವನದಿ ಮಲಪ್ರ ಭೆಯ ಮಡಿಲು ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಇಲ್ಲಿನ ನವೀಲುತೀರ್ಥದ ಅಧಿಕ್ಷಕ ಎಂಜಿನಿಯರ್ ಬಿ.ಆರ್. ನರಸನ್ನ ವರ ಎಚ್ಚರಿಸಿದ್ದಾರೆ.

ಇಲ್ಲಿನ ರೇಣುಕಾ ಸಾಗರಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಒಟ್ಟು ಒಳ ಹರಿವು 14911 ಕ್ಯೂಸೆಕ್ ಇದ್ದು, ಕಳೆದ ಶುಕ್ರವಾರದಂದು ಮಲಪ್ರಭೆಯ ಜಲಾಶಯ ನೀರಿನ ಮಟ್ಟ 2075.72 ಅಡಿ ಇದ್ದು, ಮಲಪ್ರಭೆಯ ಮಡಿಲು ಭರ್ತಿಗೆ ಅರ್ಧ ಅಡಿ ಬಾಕಿ ಇದೆ.

ಆದರೆ ಒಳ ಹರಿವು ಇದೇ ಪ್ರಮಾಣದಲ್ಲಿ ಮುಂದು ವರಿದಲ್ಲಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಸಾಧ್ಯತೆಗಳಿದ್ದು, ಆಣೆಕಟ್ಟಿನ ಗೇಟಿನ ಮೂಲಕ ಹೆಚ್ಚಿನ ನೀರನ್ನು ನದಿಗೆ ಹರಿಬಿಡಲಾಗುವುದು. ನದಿಪಾತ್ರದ ಜನರು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಿ ಕೊ ಳ್ಳಲು ಕೊರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.