ಗುರುವಾರ , ಮೇ 13, 2021
24 °C

ಕೃಷ್ಣೆ ತಟದಲ್ಲಿ ಅಕ್ಷರ ಜಾತ್ರೆ ಇಂದು

ಪ್ರಜಾವಾಣಿ ವಾರ್ತೆ/ ಚಂದ್ರಶೇಖರ ಕೊಳೇಕರ Updated:

ಅಕ್ಷರ ಗಾತ್ರ : | |

ನಿಡಗುಂದಿ:(ಆಲಮಟ್ಟಿ): 30 ಸಹಸ್ರ ಜನಸಂಖ್ಯೆ ಹೊಂದಿರುವ ನಿಡಗುಂದಿ ಪಟ್ಟಣ ನೇಕಾರಿಕೆಗೆ ಹೆಸರುವಾಸಿ. ವಿಜಯನಗರ ಅರಸರ ಕಾಲದಲ್ಲಿ ಪ್ರಾಂತವಾಗಿದ್ದ ನಿಡಗುಂದಿ ಪಟ್ಟಣದಲ್ಲಿ ದೇಸಾಯಿ ಒಡೆತನದಲ್ಲಿತ್ತು. ಅದರ ಪ್ರತೀಕವಾಗಿ ಪಟ್ಟಣದ ಹೊರ ಬದಿಯಲ್ಲಿ ಪಾಳು ಬಿದ್ದಿರುವ ಕೋಟೆಯ ಗೋಡೆಯೇ ಸಾಕ್ಷಿ.ಇಡೀ ಊರಿಗೆ ನೀರು ಪೂರೈಸುತ್ತಿದ್ದ ಪುರಾತನ ಮೋತಿಸಾಬ ಬಾವಿ, ಐತಿಹಾಸಿಕ ಗೌರೀಶ್ವರ ದೇವಸ್ಥಾನ, ಧರ್ಮದ ಪ್ರತೀಕ ರುದ್ರೇಶ್ವರ ಮಠ, ಬನಶಂಕರಿ ದೇವಸ್ಥಾನ, ಇತ್ತೀಚಿಗಷ್ಟೇ ಸೇರ್ಪಡೆಗೊಂಡಿರುವ ಏಳು ಪುನರ್ವಸತಿ ಕೇಂದ್ರಗಳು ನಿಡಗುಂದಿಯ ಆಕರ್ಷಣೆಗಳು.ವಿರೂಪಾಕ್ಷಪ್ಪ ಮುಚ್ಚಂಡಿ, ರುದ್ರಪ್ಪಣ್ಣ ಕಾಜಗಾರ, ಬಿ.ಬಿ. ಹೆಂಡಿ, ಗುರುಸಿದ್ದಪ್ಪ ನಾಗಠಾಣ, ಬಸಪ್ಪ ಶೇಡಗಟ್ಟಿ ಪಟ್ಟಣದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಾಲ್ಲೂಕು ಕೇಂದ್ರವಾಗಬೇಕೆನ್ನುವುದು ಪಟ್ಟಣದ ಜನತೆಯ ಪ್ರಮುಖ ಬೇಡಿಕೆ. ಇಂತಹ ಐತಿಹಾಸಿಕ ನಿಡಗುಂದಿ ಪಟ್ಟಣದಲ್ಲಿ ಬಸವನಬಾಗೇವಾಡಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಈಗ ಮನೆ ಮಾಡಿದೆ.ಅಕ್ಷರ ಜಾತ್ರೆಗೆ 1500 ಜನ ಕುಳಿತು ವೀಕ್ಷಿಸಲು ಜಿವಿವಿಎಸ್‌ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ 200 ಅಡಿ ಉದ್ದ , 60 ಅಡಿ ಅಗಲದ ಪೆಂಡಾಲ್ ಹಾಕಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಜಿ.ವಿ.ವಿ.ಎಸ್ ಸಂಘದ ಅಧ್ಯಕ್ಷ ಸಿದ್ದಣ್ಣ ನಾಗಠಾಣ ಮಾಡಿದ್ದಾರೆ. ತಾಲ್ಲೂಕಿನ ಎಲ್ಲ ಚಿತ್ರಕಲಾ  ವಿದ್ಯಾಲಯದಿಂದ ವಿದ್ಯಾರ್ಥಿ ಗಳು  ಚಿತ್ರಕಲೆಯನ್ನು ಪ್ರದರ್ಶಿಸಲಿದ್ದಾರೆ.ಪರಿಶೀಲನೆ: ಬುಧವಾರ ನಡೆಯಲಿರುವ ಸಾಹಿತ್ಯ ಸಮ್ಮೇಳನ ಸ್ಥಳವನ್ನು ವಿವಿಧ ಗಣ್ಯರು, ಪೊಲೀಸ್ ಅಧಿಕಾರಿಗಳು ಮಂಗಳವಾರ ಪರಿಶೀಲಿಸಿದರು. ಹೆಚ್ಚುವರಿ ಎಸ್.ಪಿ ಚೇತನ, ಸಿಪಿಐ ಸುನೀಲ ನಾಯಕ, ಪಿಎಸ್‌ಐ ರಮೇಶ ಕಾಂಬಳೆ, ಸಿದ್ದಣ್ಣ ನಾಗಠಾಣ, ಶಿವಾನಂದ ಅವಟಿ, ಎನ್.ಎಚ್. ನಾಗೂರ, ಬಸವರಾಜ ಸಾಲಿಮಠ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬಮ್ಮನಹಳ್ಳಿ, ಸಂಗಮೇಶ ಬಳಿಗಾರ, ಬಿ.ಟಿ. ಗೌಡರ, ಪರಶುರಾಮ ಕಾರಿ, ಶೇಖರ ರೂಡಗಿ, ಅರ್ಜುನ ವಾಲಿಕಾರ, ಆರ್.ಎ. ನದಾಫ, ಎಂ.ಎಂ. ಮುಲ್ಲಾ, ನಜೀರ ಗುಳೇದ, ಮೌಲಾಸಾಬ ಅತ್ತಾರ  ಮೊದಲಾದವರು ವೇದಿಕೆ, ಪೆಂಡಾಲ್ ವೀಕ್ಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.