ಗುರುವಾರ , ಮೇ 13, 2021
40 °C

ಕೆ.ಎ.ನೆಟ್ಟಕಲ್ಲಪ್ಪ ರಸ್ತೆ ಓಟದ ಸ್ಪರ್ಧೆಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಜಾವಾಣಿ' `ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪು ಪ್ರಾಯೋಜಿತ, ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ವಾರ್ಷಿಕ ರಸ್ತೆ ಓಟದ ಸ್ಪರ್ಧೆಗಳು ಈ ಸಲ ಕಾರವಾರ ಮತ್ತು ರಾಯಚೂರು ನಗರಗಳಲ್ಲಿ ನಡೆಯಲಿವೆ.

ಕಾರವಾರದಲ್ಲಿ 16-6-2013ರಂದು ಮತ್ತು ರಾಯಚೂರಿನಲ್ಲಿ 30-6-2013ರಂದು ಈ ಕೂಟ ನಡೆಯಲಿದೆ ಎಂದು ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸ್ಪರ್ಧೆಗಳು ನಾಲ್ಕು ವಿಭಾಗಗಳಲ್ಲಿ ನಡೆಯಲಿವೆ. ಪುರುಷರ ವಿಭಾಗದ 12ಕಿ.ಮೀ. ಓಟ ಮತ್ತು ಮಹಿಳಾ ವಿಭಾಗದ 6ಕಿ.ಮೀ. ಓಟದ ಸ್ಪರ್ಧೆಗಳು, ಹದಿನಾರು ವರ್ಷದೊಳಗಿನ ಬಾಲಕ, ಬಾಲಕಿಯರ 2.5ಕಿ.ಮೀ. ಓಟದ ಸ್ಪರ್ಧೆಗಳು ನಡೆಯಲಿವೆ.  ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಕಾರವಾರ ಮತ್ತು ರಾಯಚೂರು ನಗರಗಳಲ್ಲಿ ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು.ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಒಟ್ಟು 56,600 ರೂಪಾಯಿಗಳ ನಗದು ಬಹುಮಾನಗಳನ್ನು ನೀಡಲಾಗುವುದು.

ಕಾರವಾರದಲ್ಲಿ ಸ್ಪರ್ಧಿಸುವವರು ಜೂನ್ 15ರಂದು ಮಧ್ಯಾಹ್ನ 3ಗಂಟೆಗೆ ಮಾಲಾದೇವಿ ಮೈದಾನದಲ್ಲಿ ಮತ್ತು ರಾಯಚೂರಿನಲ್ಲಿ ಸ್ಪರ್ಧಿಸುವವರು ಜೂನ್ 29ರಂದು ಜಿಲ್ಲಾ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಮಧ್ಯಾಹ್ನ 3ಗಂಟೆಗೆ ಹಾಜರಿದ್ದು ಚೆಸ್ಟ್ ನಂಬರ್‌ಗಳನ್ನು ಪಡೆಯತಕ್ಕದ್ದು.ಆಸಕ್ತರು ಮಾಹಿತಿಗೆ ದೂರವಾಣಿ ಸಂಖ್ಯೆ- 080-22275656 ರಲ್ಲಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಕಾರ್ಯದರ್ಶಿ ಅನಂತರಾಜ್ ಅವರನ್ನು ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.