ಗುಲ್ಬರ್ಗ: ರಾಯಚೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯ ಅಂತರ ಜಿಲ್ಲಾ 25 ವಯೋಮಿತಿ ಒಳಗಿನ ಕ್ರಿಕೆಟ್ಟೂರ್ನಿಯಲ್ಲಿ ಗುಲ್ಬರ್ಗ ಜಿಲ್ಲಾ ತಂಡವು ಮಿಶ್ರಫಲ ಅನುಭವಿಸಿದೆ. ರಾಯಚೂರು ವಿರುದ್ಧ 65 ರನ್ಗಳಿಗೆ ಸೋತ ಗುಲ್ಬರ್ಗ ಜಿಲ್ಲಾ ತಂಡವು ವಿಜಾಪುರ ತಂಡದ ವಿರುದ್ಧ ಐದು ವಿಕೆಟ್ಗಳ ಗೆಲುವು ಸಾಧಿಸಿದೆ.

ಮೊದಲ ಪಂದ್ಯದಲ್ಲಿ ಗುಲ್ಬರ್ಗ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ರಾಯಚೂರು ತಂಡವು 291 ಪೇರಿಸಿತು. ಚಂದ್ರಕಾಂತ 73, ಹರೀಶ್ ಪತಂಗೆ 45 ಹಾಗೂ ಹರೀಶ್ ಯಾದವ್ 42 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನತ್ತಿದ್ದ ಗುಲ್ಬರ್ಗ 46 ಓವರ್ಗಳಲ್ಲಿ 226 ರನ್ಗಳಿಗೆ ಸರ್ವಪತನ ಕಂಡಿತು. ಮುನೀರ್ 64, ರಾಜ್ಕುಮಾರ್ 52 ರನ್ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಜಾಪುರ ತಂಡವು 9 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ವಿಜಾಪುರ ಪರ ಪ್ರಶಾಂತ್ ಸಾಲಿಯಾನ್ 91 ಮತ್ತು ಪೀರಪ್ಪ ಮದಾರ್ 32 ಹಾಗೂ ಗಿರೀಶ್ 28 ರನ್ ಗಳಿಸಿದರು. ಗುಲ್ಬರ್ಗ ಪರ 4ಕ್ಕೆ 47 ಮತ್ತು 2ಕ್ಕೆ 20 ವಿಕೆಟ್ ಪಡೆದರು. ಈ ಮೊತ್ತವನ್ನು ಬೆನ್ನತ್ತಿದ್ದ ಗುಲ್ಬರ್ಗವು ವಿಜಯ್ ಆಕರ್ಷಕ ಶತಕ (108), ನಾಗರಾಜ 47 ಮತ್ತು ಅಬೀದುಲ್ಲಾ 40 ರನ್ಗಳ ಸಹಾಯದಿಂದ ಗೆಲುವಿನ ದಡ ಸೇರಿತು. ಐದು ವಿಕೆಟ್ಗಳ ಜಯ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.