ವಿರಾಜಪೇಟೆ: ಕಡಂಗ ಗ್ರಾಮದ ಬ್ಲೂಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅರಪಟ್ಟು ಗ್ರಾಮದ ಪೊದ್ದಮಾನಿ ಗದ್ದೆಯಲ್ಲಿ ನಡೆದ ಎರಡು ದಿನಗಳ ಕೆಸರುಗದ್ದೆ ಕ್ರೀಡಾಕೂಟದ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಪ್ಯಾಲೇಸ್ ಕುಂಜಿಲ ತಂಡ 3-2 ಗೋಲುಗಳಿಂದ ರಾಕ್ ಬಾಯ್ಸ ಕುಂಜಿಲ ತಂಡವನ್ನು ಸೋಲಿಸಿ ನಗದು ಪ್ರಶಸ್ತಿ ಹಾಗೂ ಟ್ರೋಫಿ ಪಡೆಯಿತು.

ಕೆಸರುಗದ್ದೆ ಕ್ರೀಡಾಕೂಟದ ಅಂತಿಮ ಪಂದ್ಯ ಹಾಗೂ ಕ್ರೀಡಾಕೂಟದ ಸಮಾರೋಪ ಭಾನುವಾರ ಮಧ್ಯಾಹ್ನ ಪೊದ್ದಮಾನಿಯ ಗದ್ದೆಯ ಬದಿಯಲ್ಲಿ ನಡೆಯಿತು. ಫುಟ್ಬಾಲ್ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಎರಡು ತಂಡಗಳು ಸಮಬಲದಲ್ಲಿ ಹೋರಾಡುತ್ತ್ದ್ದಿದವು. ಪಂದ್ಯದ ಅವಧಿ ಮುಕ್ತಾಯವಾದ ತಕ್ಷಣ ತೀರ್ಪುಗಾರರು ಎರಡು ತಂಡಗಳಿಗೂ ಟೈ ಬ್ರೇಕರ್ಗೆ ಅವಕಾಶ ನೀಡಿದರು.

ಕಾಡಾ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ್ ವಿಜೇತರಿಗೆ ಟ್ರೋಫಿ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಬಿದ್ದಂಡ ಉಷಾ ದೇವಮ್ಮ, ಮಡಿಕೇರಿ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಸುರೇಶ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪ್ರಧಾನ ವ್ಯವಸ್ಥಾಪಕ ನೆಲ್ಲಚಂಡ ಕುಶಾಲಪ್ಪ, ಕ್ಲಬ್ನ ಅಧ್ಯಕ್ಷ ಐತಿಚಂಡ ಮಧು ಮಾದಯ್ಯ ಮಾತನಾಡಿದರು.

ಬೆಂಗಳೂರಿನ ಉದ್ಯಮಿಗಳಾದ ನಾಗೇಶ್ ಕಲ್ಕೆರೆ, ಬೈರಪ್ಪ, ರಮೇಶ್ ಗೌಡ, ಕೆ.ಮಾದೇಶ್, ಚೇತನ್, ಹರೀಶ್, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಅನ್ನಂಬಿರ ಡಾಲು ಅಪ್ಪಚ್ಚು ಉಪಸ್ಥಿತರಿದ್ದರು. ಕೆಸರುಗದ್ದೆ ಕ್ರೀಡಾಕೂಟದ ಅಂಗವಾಗಿ ಶನಿವಾರದಿಂದಲೇ ಸಾರ್ವಜನಿಕರು, ಪುರುಷರು, ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 100 ಹಾಗೂ 200 ಮೀಟರ್ ಓಟದ ಸ್ಪರ್ಧೆ, ಮ್ಯಾರಥಾನ್, ಮಿನಿ ಮ್ಯಾರಥಾನ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿನೋದ್ ನಾಣಯ್ಯ ಕಾರ್ಯಕ್ರಮ ನಿರೂಪಿಸಿದರು. ಎನ್.ಬ್ರಿಜೇಶ್, ರಂಷೀದ್ ಸೇರಿದಂತೆ ನಾಲ್ವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.