ಮೈಸೂರು: `ಸಂಸತ್ಗಿಂತ ಅಣ್ಣಾ ಹಜಾರೆ ದೊಡ್ಡವರೆಂದು ಕೇಜ್ರಿವಾಲ್ ಹೇಳಿಕೆ ನೀಡಿ ರು ವುದು ಮೂರ್ಖತನದ ಪರಮಾ ವಧಿ~ ಎಂದು ಮೈಸೂರು ಜಿಲ್ಲಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ದೇವಗಳ್ಳಿ ಸೋಮಶೇಖರ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, `ದೇಶದ ಸಂಸತ್ ಮತ್ತು ಸಂವಿಧಾನದ ಬಗ್ಗೆ ಅರಿವಿಲ್ಲದ ಅಣ್ಣಾ ಹಜಾರೆಯವರ ಚೇಲ ಅರವಿಂದ ಕೇಜ್ರಿವಾಲ್ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆ ಖಂಡನೀಯ~ ಎಂದಿದ್ದಾರೆ.

`ಕೇಜ್ರಿವಾಲ್ ಅಣ್ಣಾ ಹಜಾರೆ ಅವರ ಜತೆ ಕಾಣಿಸಿಕೊಳ್ಳುತ್ತಿದ್ದು ಹದ್ದು ಮೀರಿ ನಡೆಯುತ್ತಿದ್ದಾರೆ. ಇವರ ಕುಚೋದ್ಯ ಹೇಳಿಕೆಗಳನ್ನು ನೋಡಿದರೆ ಉದ್ದೇಶ ಪೂರ್ವಕವಾಗಿ ಹಜಾರೆಯವರ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಇವರನ್ನು ಅಣ್ಣಾ ದೂರ ಇಡದೇ ಹೋದರೆ ಕೆಟ್ಟ ಹೆಸರು ಬರುವುದು ಖಚಿತ~ ಎಂದು ಹೇಳಿದ್ದಾರೆ.

`ರಾಷ್ಟ್ರದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿ ್ದದಾರೆ ಎನ್ನುವ ಕಾರಣಕ್ಕಾಗಿ ಎಲ್ಲರೂ ಕೈ ಜೋಡಿಸಿದರು. ಆದರೆ ಅಣ್ಣಾ ಮತ್ತು ತಂಡದ ಹೋರಾಟದಲ್ಲಿ ರಾಜಕೀಯ ಉದ್ದೇಶವಿದೆ ಎನ್ನುವುದು ಗೊತ್ತಿ ್ದದರೆ ಜನರು ಹೆಚ್ಚಾಗಿ ಬೆಂಬಲಿ ಸುತ್ತಿರಲಿಲ್ಲ. ಅಣ್ಣಾ ಮತ್ತು ತಂಡ ಹಿಸ್ಸಾರ್ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ, ಬಿಜೆಪಿ ಪರವಾಗಿ ಪ್ರಚಾರ ನಡೆಸುತ್ತಿದೆ~ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.