ಯಾಂತ್ರಿಕತೆಯ ತೋಳಲ್ಲಿ ಕೈಮಗ್ಗದಂತಹ ವಿಶಿಷ್ಟ ಸಂಸ್ಕೃತಿ ಇತಿಹಾಸ ಸೇರುತ್ತಿದೆಯೇನೋ ಎಂದು ಕಾತರಿಸುವ ಮಂದಿಗೆ ನಾಲ್ಕಾರು ಗೆಳೆಯರ ತಂಡ ಕೈಮಗ್ಗಕ್ಕೆ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೈಮಗ್ಗದಿಂದ ತಯಾರಾದ ವಸ್ತ್ರಗಳು ಹಳೆಯ ಜಮಾನದ್ದು. ಈ ಕಾಲದಲ್ಲಿ ಅಂಥ ಬಟ್ಟೆ ತೊಟ್ಟುಕೊಂಡರೆ ಹಳ್ಳಿಗುಗ್ಗು ಎನ್ನಬಹುದು ಎಂಬ ಆತಂಕವನ್ನು `ಟ್ರಾನ್ಸ್ಲೇಟ್~ ಮೂಲಕ ಸಂಪೂರ್ಣ ದೂರವಾಗಿಸಲು ಮುಂದಾಗಿದ್ದಾರೆ ವಿನೀತಾ ಹಾಗೂ ವಿಕಾಸ್ ದಂಪತಿ.

ಹೈದರಾಬಾದ್ ಮೂಲದ ಇವರು ಅಲ್ಲಿಯ ಸ್ಥಳೀಯ ಇಕ್ಕತ್ ಕರಕುಶಲಕಾರರ ಸಹಕಾರ ಪಡೆದಿದ್ದಾರೆ. ಟ್ರಾನ್ಸ್ಲೇಟ್ ಹಾಗೂ ಕೈಮಗ್ಗ ಕಾರ್ಮಿಕರ ಮಧ್ಯೆ ಯಾವುದೇ ಮಧ್ಯವರ್ತಿಗಳಿಲ್ಲದ ಕಾರಣ ಹೆಚ್ಚಿನ ಲಾಭ ಕಾರ್ಮಿಕರ ಪಾಲಾಗುತ್ತದೆ. ಅಲ್ಲದೆ ಅಳಿವಿನಂಚಿನಲ್ಲಿದ್ದ ತಮ್ಮ ಇಕ್ಕತ್ ಸಂಪ್ರದಾಯಕ್ಕೆ ನೂತನ ಮೌಲ್ಯ ದೊರೆತಿದ್ದು ಎಲ್ಲಾ ಕೆಲಸಗಾರರಿಗೆ ಸಂತಸ ತಂದಿದೆ. ಸಾಂಪ್ರದಾಯಿಕ ಇಕ್ಕತ್ ಕೈಮಗ್ಗಕ್ಕೆ ಆಧುನಿಕತೆಯ ರೂಪ ಕೊಟ್ಟು ಹೊಸ ಜೀವಂತಿಕೆ ನೀಡುವ ಧ್ಯೇಯವನ್ನು `ಟ್ರಾನ್ಸ್ಲೇಟ್~ ಹೊಂದಿದೆ.

ಕೇವಲ ಸಾಂಪ್ರದಾಯಿಕ ಸೀರೆ, ಕುರ್ತಾಗಳಷ್ಟೇ ಅಲ್ಲದೆ ಪುರುಷರು ಹಾಗೂ ಮಕ್ಕಳ ಉಡುಗೆ-ತೊಡುಗೆಗಳನ್ನೂ ಟ್ರಾನ್ಸ್ಲೇಟ್ ತಯಾರಿಸುತ್ತದೆ. ಫ್ಯಾಶನ್ ಟ್ರೆಂಡ್ಗೆ ಸರಿ ಹೊಂದುವಂತಹ ಹಾಗೂ ನಾಜೂಕು ವಿನ್ಯಾಸದ ಆರಾಮದಾಯಕ ವಸ್ತ್ರಗಳನ್ನು ಸಿದ್ಧಪಡಿಸುವುದರ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ. ಟ್ಯೂನಿಕ್ಸ್ (ಜುಬ್ಬ), ನಿಲುವಂಗಿ, ವಿವಿಧ ಬಗೆಯ ಡ್ರೆಸ್ಗಳು, ಪುರುಷರು ಬಯಸುವ ಟೀಶರ್ಟ್, ಕುರ್ತಾ, ಹಾಗೂ ಮಕ್ಕಳಿಗೂ ಬೇಕಾದಂಥ ವಿವಿಧ ಬಗೆಯ ವಸ್ತ್ರಗಳು ಈ ಸಂಗ್ರಹದಲ್ಲಿವೆ. ಇಂಡಿಗೊ, ಕಪ್ಪು, ಬಿಳಿ, ಬೂದು, ಮೆರೂನ್ ಹಾಗೂ ಕಂದು ಹಳದಿ ಬಣ್ಣಗಳಿಂದ ಡ್ರೆಸ್ ಸಿದ್ಧಪಡಿಸಲಾಗುತ್ತಿದ್ದು ಇವು ಕಡಿಮೆ ಭಾರದ ಕಾಟನ್ನಿಂದ ತಯಾರಾಗುತ್ತವೆ. ಮೃದುವಾಗಿರುವ ಈ ಬಟ್ಟೆಗಳು ಚರ್ಮಕ್ಕೆ ಆರಾಮದಾಯಕ ಅನುಭವ ನೀಡುತ್ತವೆ ಎಂಬುದು `ಟ್ರಾನ್ಸ್ಲೇಟ್~ ಹೇಳಿಕೆ.

`ಈಗೀಗ ವಸ್ತ್ರವಿನ್ಯಾಸ ಸಂಪೂರ್ಣ ಯಾಂತ್ರೀಕರಣಗೊಂಡಿದೆ. ಆದರೆ ನಾವು ತಯಾರಿಸುವ ವಸ್ತುಗಳು ಕೈಯಿಂದಲೇ ಮಾಡಿದಂಥವು. ಕೈಯಿಂದಲೇ ವಿಧವಿಧವಾದ ಚಿತ್ರವನ್ನು ವಿನ್ಯಾಸಗೊಳಿಸುವ ಈ ಇಕ್ಕತ್ ಮಾದರಿಗೆ ಆಧುನಿಕ ರೂಪ ನೀಡಿ ಸಾರ್ವಜನಿಕರಲ್ಲಿ ಒಲವು ಮೂಡುವಂತೆ ಮಾಡುವುದು ನಮ್ಮ ಉದ್ದೇಶ~ ಎನ್ನುತ್ತಾರೆ `ಟ್ರಾನ್ಸ್ಲೇಟ್~ ಸಂಸ್ಥಾಪಕಿ ವಿನೀತಾ.

ಬೆಂಗಳೂರಿಗರಾದ ಚಂದ್ರಶೇಖರ್ ಹಾಗೂ ರವಿ ಕಿರಣ್ ಕೂಡ `ಟ್ರಾನ್ಸ್ಲೇಟ್~ ಬಳಗದ ಮುಖ್ಯ ಸಹಭಾಗಿಗಳು ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ.

`ಫ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿರುವ ನಾವೆಲ್ಲ ಮೊದಲಿನಿಂದ ಸ್ನೇಹಿತರು. ಇಕ್ಕತ್ನಂಥ ಕೈಮಗ್ಗ ಮಾದರಿಯನ್ನು ಬೆಳೆಸುವ ಬಗ್ಗೆ ನಮ್ಮಲ್ಲೇ ಪ್ರಸ್ತಾಪವಾಯಿತು. ಸಾಂಪ್ರದಾಯಿಕತೆಯನ್ನೂ ಉಳಿಸಿಕೊಂಡು ಆಧುನಿಕತೆಯ ರೂಪಕೊಡಬೇಕೆಂದು ನಿರ್ಧರಿಸಿದೆವು. ವಿನೀತಾ ಹಾಗೂ ವಿಕಾಸ್ ಈ ಯೋಜನೆಯ ರೂವಾರಿಗಳು. ಆಂಧ್ರದ ನರಗುಂದ ತಾಲೂಕಿನ ಪೋಚಂಪಲ್ಲಿಯಲ್ಲಿ ಈ ಬಟ್ಟೆಗಳು ತಯಾರಾಗುತ್ತವೆ~ ಎನ್ನುತ್ತಾರೆ `ಟ್ರಾನ್ಸ್ಲೇಟ್~ನಲ್ಲಿ ಡಿಸೈನ್ ಕನ್ಸಲ್ಟೆಂಟ್ ಆಗಿರುವ ಚಂದ್ರಶೇಖರ್.

ಸುಮಾರು 800 ರೂಪಾಯಿಯಿಂದ 12 ಸಾವಿರ ರೂಪಾಯಿ ಬೆಲೆ ಬಾಳುವ ವಸ್ತ್ರಗಳೂ `ಟ್ರಾನ್ಸ್ಲೇಟ್~ನಲ್ಲಿ ಲಭ್ಯ.

ಅಂದಹಾಗೆ ಬೆಂಗಳೂರಿಗರಿಗೆ ಖುಷಿಯ ಸಂಗತಿಯೆಂದರೆ ಇದೇ 2ರಂದು ಬಸವ ಅಂಬರದಲ್ಲಿ `ಟ್ರಾನ್ಸ್ಲೇಟ್~ ತಾನು ತಯಾರಿಸಿದ ವಸ್ತ್ರ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಸ್ಥಳ: ಬಸವ ಅಂಬರ, 93, ಕನಕಪುರ ರಸ್ತೆ, ನ್ಯೂ ಜನರೇಶನ್ ಸ್ಕೂಲ್ ಹತ್ತಿರ, ಬಸವನಗುಡಿ.

ಹೆಚ್ಚಿನ ಮಾಹಿತಿಗಾಗಿ: 26561040, 65461856.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.