ಬೆಂಗಳೂರು: ಪದ್ಮನಾಭನಗರ ದೇವೇಗೌಡ ಪೆಟ್ರೋಲ್ ಬಂಕ್ ಪಕ್ಕದ (ಕಿತ್ತೂರು ರಾಣಿ ಚೆನ್ನಮ್ಮ ವೃತ್ತ) ಹೊರ ವರ್ತುಲ ರಸ್ತೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಕೊನೆಗೂ ಗುರುವಾರ ಆರಂಭವಾಗಿದೆ.

ಕಾಮಗಾರಿಯ ಮೊದಲ ಹೆಜ್ಜೆಯಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಸ್ಥಳಾವಕಾಶ ಮಾಡಿಕೊಳ್ಳಲು ಮರ ಕಡಿಯುವ ಪ್ರಕ್ರಿಯೆ ಗುರುವಾರವಷ್ಟೇ ಶುರುವಾಗಿದೆ. ಮಣ್ಣಿನ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದ್ದು, ವರದಿ ಬಿಬಿಎಂಪಿ ಎಂಜಿನಿಯರಿಂಗ್ (ಯೋಜನೆಗಳು) ವಿಭಾಗದ ಕೈಸೇರಿದೆ.

ಮೇಲ್ಸೇತುವೆ ನಿರ್ಮಾಣಕ್ಕೆ ಅನುವು ಮಾಡಿಕೊಡಲು ಜಲಮಂಡಳಿ ಒಳಚರಂಡಿ ಮಾರ್ಗವೊಂದನ್ನು ಸ್ಥಳಾಂತರ ಮಾಡಬೇಕಿದ್ದು, ಆ ಕಾಮಗಾರಿಯೂ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಈ ಉದ್ದೇಶಕ್ಕಾಗಿ ಜಲಮಂಡಳಿ ₨ 1.35 ಕೋಟಿ ಮೊತ್ತವನ್ನು ಬಿಬಿಎಂಪಿ ಖಾತೆಗೆ ಜಮೆ ಮಾಡಿದೆ. ಈ ಪ್ರದೇಶದ ಬೆಸ್ಕಾಂ ಮಾರ್ಗವನ್ನು ಸಹ ಸ್ಥಳಾಂತರ ಮಾಡಬೇಕಿದ್ದು, ₨ 1.28 ಕೋಟಿ ಮೊತ್ತವನ್ನೂ ಈಗಾಗಲೇ ಬಿಬಿಎಂಪಿಗೆ ಹಸ್ತಾಂತರ ಮಾಡಿದೆ.

ಎಂ. ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್್ಸ ಸಂಸ್ಥೆ ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, 18 ತಿಂಗಳಲ್ಲಿ ಕೆಲಸ ಮುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿದೆ. ಮೇಲ್ಸೇತುವೆ ಸಿದ್ಧವಾದ ಮೇಲೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಶೇ 65ರಷ್ಟು ಸಂಚಾರದ ಹೊರೆ ಕಡಿಮೆ ಆಗಲಿದೆ ಎಂಬ ಲೆಕ್ಕಾಚಾರ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ.

‘ಮೇಲ್ಸೇತುವೆ ನಿರ್ಮಾಣಕ್ಕೆ ಒಟ್ಟಾರೆ 2,688 ಚದರ ಮೀಟರ್ ಭೂಸ್ವಾಧೀನದ ಅಗತ್ಯವಿದ್ದು, ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಪೆಟ್ರೋಲ್ ಬಂಕ್ ಬಳಿಯ ಪುಟ್ಟ ನಿವೇಶನದ ವಿವಾದ ಮಾತ್ರ ಬಾಕಿ ಇದ್ದು, ಅದೂ ಶೀಘ್ರವೇ ಇತ್ಯರ್ಥವಾಗಲಿದೆ’ ಎಂದು ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತ ಎಂಜಿನಿಯರ್ಗಳು ವಿವರಿಸುತ್ತಾರೆ.

ಮೈಸೂರು ರಸ್ತೆಯಿಂದ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ವರ್ತುಲ ರಸ್ತೆಯನ್ನು ಸರಕು ಸಾಗಾಟದ ಭಾರೀ ವಾಹನಗಳು ಹೆಚ್ಚಾಗಿ ಬಳಕೆ ಮಾಡುತ್ತವೆ. ಸಂಚಾರ ದಟ್ಟಣೆ ಅವಧಿಯಲ್ಲಿ ಗಂಟೆಗೆ ಹತ್ತು ಸಾವಿರಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಚಲಿಸುತ್ತವೆ.

‘ಪದ್ಮನಾಭನಗರ ಮತ್ತು ಉತ್ತರಹಳ್ಳಿ ಸುತ್ತಲಿನ ಪ್ರದೇಶಗಳಿಗೆ ತೆರಳುವ ವಾಹನಗಳು ಮೇಲ್ಸೇತುವೆ ಕೆಳಗೆ ಸಂಚರಿಸಲಿದ್ದು, ಮಿಕ್ಕ ವಾಹನಗಳು ಚೆನ್ನಮ್ಮ ವೃತ್ತವನ್ನು ಸೇತುವೆ ಮೇಲೆಯೇ ದಾಟಿಕೊಂಡು ಹೋಗಲಿವೆ. ಇದರಿಂದ ಕೆಳರಸ್ತೆ ಮೇಲಿನ ಸಂಚಾರ ಒತ್ತಡ ಕಡಿಮೆ ಆಗಲಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಐದು ವರ್ಷಗಳ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2009ರಲ್ಲಿ ದೊಡ್ಡ ಸಮಾರಂಭ ಏರ್ಪಡಿಸಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಫಲಕ ಅನಾವರಣ ಮಾಡಿದ್ದನ್ನು ಬಿಟ್ಟರೆ ಅಲ್ಲಿಂದ ಯಾವ ಕೆಲಸವೂ ಮುಂದೆ ಸಾಗಿರಲಿಲ್ಲ.
ಯೋಜನೆ ಅನುಷ್ಠಾನಕ್ಕೆ 200ಕ್ಕೂ ಅಧಿಕ ಮರಗಳನ್ನು ಕತ್ತರಿಸಬೇಕಾಗಿದೆ. ಮೊದಲ ಹಂತದಲ್ಲಿ 15 ಅಶೋಕ ಮರಗಳನ್ನು ತೆಗೆಯಲಾಗುತ್ತಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಒಂದಿಷ್ಟು ಖುಷಿ–ಒಂದಿಷ್ಟು ಆತಂಕ:
ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದರಿಂದ ಈ ಭಾಗದ ಜನರಿಗೆ ಖುಷಿ ಮತ್ತು ಆತಂಕ ಒಟ್ಟೊಟ್ಟಿಗೆ ಆಗಿವೆ. ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎನ್ನುವ ಖುಷಿ ಒಂದೆಡೆಯಾದರೆ, ಕಾಮಗಾರಿ ನಡೆಯುವಾಗ ಈಗಿನ ಸಂಚಾರ ವ್ಯವಸ್ಥೆ ಇನ್ನಷ್ಟು ಗಂಭೀರ ಸ್ವರೂಪ ತಾಳಲಿದೆ ಎನ್ನುವ ಆತಂಕ ಇನ್ನೊಂದೆಡೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತವನ್ನು ನಿತ್ಯವೂ ಬಳಸುವ ಉತ್ತರಹಳ್ಳಿ ನಿವಾಸಿ ಡಾ. ಎನ್.ಸಾಂಬಮೂರ್ತಿ, ‘ಮೇಲ್ಸೇತುವೆ ಆಗುವುದು ಅತ್ಯಗತ್ಯ. ಆದರೆ, ಅಲ್ಲಿಯವರೆಗೆ ಸಂಚಾರ ಅವ್ಯವಸ್ಥೆಯನ್ನು ತಾಳಿಕೊಳ್ಳುವುದು ತುಂಬಾ ಕಷ್ಟ’ ಎಂದು ಆತಂಕ ಹೊರಹಾಕುತ್ತಾರೆ.
‘ಬಿಬಿಎಂಪಿ ಕೈಗೊಂಡ ಯಾವ ಯೋಜನೆಗಳೂ ಕಾಲಮಿತಿಯಲ್ಲಿ ಮುಗಿಯುವುದಿಲ್ಲ. ಮಲ್ಲೇಶ್ವರದ ಸಿ.ಎನ್.ಆರ್. ರಾವ್ ವೃತ್ತದ ಕೆಳಸೇತುವೆ ನಿರ್ಮಾಣ ಇದಕ್ಕೊಂದು ಜ್ವಲಂತ ಉದಾಹರಣೆ. ಹಾಗೇನಾದರೂ ಈ ಕಾಮಗಾರಿಯೂ ವಿಳಂಬವಾಗುತ್ತ ಹೋದರೆ ನಮ್ಮ ಸ್ಥಿತಿ ದೇವರಿಗೇ ಪ್ರೀತಿ’ ಎಂದು ಹೇಳುತ್ತಾರೆ.

‘ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ವೇಳೆಗೆ ನಮ್ಮ ಗೋಳು ಶುರುವಾಗಲಿದೆ. ನಮಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕಾರಣ ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ನಿಗದಿತ ಅವಧಿಯೊಳಗೆ ಕೆಲಸ ಮುಗಿಸಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆಯಾಗಿದೆ’ ಎಂದು ಪದ್ಮನಾಭನಗರದ ಎಚ್. ರಾಮಚಂದ್ರ ತಿಳಿಸುತ್ತಾರೆ.

ದ್ವಿಮುಖ ಸಂಚಾರ–ಚತುಷ್ಪಥ ರಸ್ತೆ
‘ಯೋಜನೆಗೆ ₨ 35.8 ಕೋಟಿ ವೆಚ್ಚವಾಗಲಿದೆ. 352 ಮೀಟರ್ ಉದ್ದ ಹಾಗೂ 17 ಮೀಟರ್ ಅಗಲದ ಈ ಮೇಲ್ಸೇತುವೆ ಚತುಷ್ಪಥಗಳನ್ನು ಹೊಂದಿರಲಿದ್ದು, ದ್ವಿಮುಖ ಸಂಚಾರದ (ತಲಾ ಎಂಟು ಮೀಟರ್ ಅಗಲ) ಸೌಲಭ್ಯವನ್ನು ಸಹ ಒದಗಿಸಲಿದೆ’ ಎಂದು ವಿವರಿಸುತ್ತಾರೆ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆಗಳು) ನರಸಿಂಹ ಶಾಸ್ತ್ರಿ.

ಗಂಟೆಗೆ 10,237 ವಾಹನಗಳು!
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬೆಳಗಿನ ದಟ್ಟಣೆ ಅವಧಿಯಲ್ಲಿ ಗಂಟೆಗೆ ಸರಾಸರಿ 10,237 ವಾಹನಗಳು ಚಲಿಸುತ್ತವೆ. ಸಂಜೆ 6ರಿಂದ 7ರ ಅವಧಿಯಲ್ಲಿ ಸರಾಸರಿ 9,099 ವಾಹನಗಳು ಓಡಾಡುತ್ತವೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಇವುಗಳಲ್ಲಿ ಶೇ 35ರಷ್ಟು ವಾಹನಗಳು ಮಾತ್ರ ಪದ್ಮನಾಭನಗರ ಇಲ್ಲವೆ ಉತ್ತರಹಳ್ಳಿ ಕಡೆಗೆ ಚಲಿಸುತ್ತವೆ. ಮಿಕ್ಕ ವಾಹನಗಳು ವರ್ತುಲ ರಸ್ತೆಯಲ್ಲೇ ಮುಂದುವರಿಯುತ್ತವೆ ಎಂಬುದು ಸಂಚಾರ ಒತ್ತಡದ ಅಧ್ಯಯನದಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.