ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಕೊಯಮತ್ತೂರಿಗೆ ಐರಾವತ

Published:
Updated:

ಬೆಂಗಳೂರು: ಇದೇ 12ರಿಂದ ಬೆಂಗಳೂರು - ಕೊಯಮತ್ತೂರು ನಡುವೆ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತೊಂದು ವೋಲ್ವೊ (ಐರಾವತ) ಬಸ್ ಸಂಚಾರ ಆರಂಭಿಸಲಿದೆ.ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಬಸ್ ಹೊಸೂರು, ಸೇಲಂ, ಅವಿನಾಶಿ ಮಾರ್ಗವಾಗಿ ಸಾಗಿ ಸಂಜೆ 7.30ಕ್ಕೆ ಕೊಯಮತ್ತೂರು ತಲುಪಲಿದೆ. ಕೊಯಮತ್ತೂರಿನಿಂದ ಬೆಳಿಗ್ಗೆ 9 ಗಂಟೆಗೆ ಹೊರಡುವ ಬಸ್ ಸಂಜೆ 4.30ಕ್ಕೆ ಬೆಂಗಳೂರು ತಲುಪಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.  ಈ ಬಸ್‌ಗೆ 30 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗೆ 7760990562, 7760990561, 080 - 2287 0099 ದೂರವಾಣಿಗಳಿಗೆ ಕರೆ ಮಾಡಬಹುದು. ನಿಗಮದ ಆರು ವೋಲ್ವೊ ಬಸ್‌ಗಳು ಬೆಂಗಳೂರು - ಕೊಯಮತ್ತೂರು ನಡುವೆ ಈಗಾಗಲೇ ಸಂಚರಿಸುತ್ತಿವೆ.

 

Post Comments (+)