ಬೆಂಗಳೂರು: ಅತ್ತ ಹೈಕೋರ್ಟ್ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಸಿಕ್ಕಾಪಟ್ಟೆ ಬೈಗುಳ ತಿಂದರೂ, ಇತ್ತ ನಗರದ ಬೀದಿಗಳಲ್ಲಿ ಕೊಳೆಯುತ್ತಾ ಬಿದ್ದಿರುವ ಕಸ ಮಾತ್ರ ಸ್ಥಳ ಬಿಟ್ಟು ಕದಲಲಿಲ್ಲ.

ಕೋರಮಂಗಲದ ಹೊಸೂರು ರಸ್ತೆ ಪಕ್ಕದಲ್ಲೇ ಕಸ ರಾಶಿ, ರಾಶಿಯಾಗಿ ಬಿದ್ದಿದ್ದ ದೃಶ್ಯ ಶುಕ್ರವಾರ ಕಂಡು ಬಂದಿತು. ಕೆ.ಆರ್. ಮಾರುಕಟ್ಟೆಯಲ್ಲಿ ತ್ಯಾಜ್ಯ ಕಳೆದ ಹಲವು ದಿನಗಳಿಂದ ವಿಲೇವಾರಿಯಾಗದೆ ಉಳಿದ ಕಾರಣ, ಅದೆಲ್ಲ ಕೊಳೆತುಹೋಗಿದ್ದು, ಮಳೆಯ ನೀರಿನೊಂದಿಗೆ ಬಸಿದು ರಸ್ತೆಗೆ ಬಂದಿದೆ. ಗಬ್ಬು ನಾರುತ್ತಿದ್ದ ವಾತಾವರಣದಲ್ಲೇ ವ್ಯಾಪಾರಿಗಳು ತರಕಾರಿ ಮತ್ತು ಹಣ್ಣು-ಹೂವು ಮಾರುತ್ತಿದ್ದರು. ನಾಗರಿಕರು ಗತ್ಯಂತರವಿಲ್ಲದೆ ಅಂತಹ ವಾತಾವರಣದಲ್ಲೇ ತರಕಾರಿ ಖರೀದಿಯಲ್ಲಿ ತೊಡಗಿದ್ದರು.
ಸುತ್ತಲೂ ಬಿದ್ದಿದ್ದ ಕಸದ ರಾಶಿಯಲ್ಲಿ ಓಡಾಡಲು ಜನ ಪ್ರಯಾಸ ಪಡಬೇಕಾಯಿತು.

ಕಸ ಹಾಕಲು ಜಾಗ ಸಿಗದೆ ವಾಹನ ನಿಲುಗಡೆ ಸ್ಥಳದಲ್ಲೂ ವ್ಯಾಪಾರಿಗಳು ತ್ಯಾಜ್ಯ ತಂದು ಸುರಿಯುತ್ತಿದ್ದರು. ಶುಕ್ರವಾರ ಮಳೆಯ ಪ್ರಮಾಣ ಕ್ಷೀಣಿಸಿದ್ದು ಬಿಬಿಎಂಪಿ ಅಧಿಕಾರಿಗಳನ್ನು ಒಂದಿಷ್ಟು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತು. ಆದರೆ, ಕಸದ ರಾಶಿಯನ್ನು ಸಂಪೂರ್ಣವಾಗಿ ಹೊರಹಾಕುವ ಯತ್ನ ಕೈಗೂಡಲಿಲ್ಲ. ವಿಲೇವಾರಿ ಘಟಕಗಳಲ್ಲಿ ಮಳೆಯಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಕನಿಷ್ಠ ಮೂರು ದಿನಗಳಾದರೂ ಬೇಕು ಎಂದು ಹೇಳಲಾಗಿದೆ.

ಬಿಬಿಎಂಪಿ ಎಂಜಿನಿಯರ್ಗಳು, ಪರಿಸರ ಅಧಿಕಾರಿಗಳು ಸೇರಿದಂತೆ ಎಲ್ಲ ಪ್ರಮುಖ ಸಿಬ್ಬಂದಿಯನ್ನು ತ್ಯಾಜ್ಯ ವಿಲೇವಾರಿ ಉಸ್ತುವಾರಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಮಧ್ಯೆ ಎಲ್ಲ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಆಯುಕ್ತರ ಸಭೆ ನಡೆಸಿದ ನಗರಾಭಿವೃದ್ಧಿ ಇಲಾಖೆ ಸಚಿವ ಎಸ್.ಸುರೇಶಕುಮಾರ್ ಸಹ ಸ್ವಚ್ಛತೆ ಮೇಲೆ ನಿಗಾ ವಹಿಸುವಂತೆ ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡಿದ್ದು, ಅಧಿಕಾರಿಗಳು ಮತ್ತಷ್ಟು ಒತ್ತಡಕ್ಕೆ ಸಿಲುಕುವಂತೆ ಮಾಡಿದೆ.

ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲು ಬಿಬಿಎಂಪಿ ನಿರ್ಧರಿಸಿದ ಪರಿಣಾಮ ಹಾಲಿ ಗುತ್ತಿಗೆದಾರರಿಂದ ಕಸ ಸಾಗಾಟಕ್ಕೆ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂಬ ದೂರುಗಳೂ ಕೇಳಿಬಂದಿವೆ. ಸರ್ಕಾರದ ಅನುಮತಿಯೂ ಸಿಕ್ಕು, ಹೊಸ ಗುತ್ತಿಗೆದಾರರು ನ. 15ರೊಳಗೆ ಕಸ ಸಾಗಾಟದ ಹೊಣೆ ವಹಿಸಿಕೊಳ್ಳುವುದು ಆಗಲಿಕ್ಕಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಕುಡಿಯುವ ನೀರು ಪೂರೈಕೆ ಪೈಪು ಅಳವಡಿಕೆ ಮತ್ತು ಚರಂಡಿ ನಿರ್ಮಾಣಕ್ಕೆ ಲಕ್ಷ್ಮಿದೇವಿನಗರದಲ್ಲಿ ರಸ್ತೆಯನ್ನು ಅಗಿಯಲಾಗಿದ್ದು, ಅದರಲ್ಲಿ ಮಳೆ ನೀರು ಸಂಗ್ರಹವಾಗಿದೆ. ತ್ಯಾಜ್ಯವನ್ನೂ ಅಲ್ಲಿಯೇ ಸುರಿದಿದ್ದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಆರೋಗ್ಯ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.

ದಂಡ ವಸೂಲಿ:  ಬಿಬಿಎಂಪಿ ಆರೋಗ್ಯಾಧಿಕಾರಿಗಳು (ದಕ್ಷಿಣ), ಬಸವನಗುಡಿ ಹಾಗೂ ಪದ್ಮನಾಭನಗರ ವಲಯದ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಶುಕ್ರವಾರ ವಾರ್ಡ್ ನಂ. 165ರಲ್ಲಿ ಉದ್ದಿಮೆಗಳ ತಪಾಸಣೆ ನಡೆಸಿದರು. ಕೆಲವು ಉದ್ದಿಮೆದಾರರು ಪಾದಚಾರಿ ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹಿಸಿಟ್ಟಿದ್ದು ಕಂಡುಬಂದಿತು. ಮತ್ತು ನಿರ್ಮಾಣ ಹಂತದ ಕಟ್ಟಡ ಪರಿಶೀಲಿಸಲಾಗಿ ತೆರೆದ ಸಂಪಿನಲ್ಲಿ ನೀರು ಸಂಗ್ರಹವಾಗಿದ್ದು, ಲಾರ್ವಗಳು ಕಂಡುಬಂದವು.

ಕಟ್ಟಡ ಮಾಲೀಕರಾದ ಆನಂದ ದಯಾಳ್ಅವರಿಗೆ ರೂ 500 ದಂಡ ಮತ್ತು ದೇವರಾಜು ಅವರಿಗೆ ರೂ 5,000 ಆಡಳಿತಾತ್ಮಕ ವೆಚ್ಚ ವಿಧಿಸಲಾಯಿತು. ತ್ಯಾಜ್ಯ ತೆರವುಗೊಳಿಸಿ, ಲಾರ್ವಾ ನಿರ್ಮೂಲನೆ ಮಾಡಲಾಯಿತು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.