ಗುರುವಾರ , ಮೇ 26, 2022
30 °C

ಕೋಟ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟ ನೋಟ

ಪ್ರಾಚೀನ ವೈಭವ ಹೊತ್ತ ಊರು ಈ ಕೋಟ. ಹೆಸರು ಕೇಳಿದ ತಕ್ಷಣ ಶಿವರಾಮ ಕಾರಂತರ ದಕ್ಷಿಣ ಕನ್ನಡ ಜಿಲ್ಲೆಯ `ಕೋಟ~ ನೆನಪಾಗುತ್ತದೆ. ಆದರೆ ಈ ಕೋಟಾ ರಾಜಸ್ತಾನದ ಜಿಲ್ಲಾ ಕೇಂದ್ರ. ಜೈಪುರದಿಂದ 240 ಕಿ.ಮೀ. ದೂರ ಇದೆ. ಪುರಾತನ ಊರಾದ ಕೋಟದಲ್ಲಿ ಅರಮನೆಗಳು, ಕೋಟೆಗಳು, ಮಹಲುಗಳು, ದೇವಾಲಯಗಳು, ವಸ್ತು ಸಂಗ್ರಹಾಲಯಗಳಿವೆ. ಈ ನಗರವೀಗ ರಾಜಸ್ತಾನದ ಪ್ರಮುಖ ವ್ಯಾಪಾರಿ ತಾಣವಾಗಿ ಬದಲಾಗಿದೆ.`ಕೋಟ ಸೀರೆ~, `ಕೋಟ ಕಲ್ಲು~ ಜನಪ್ರಿಯ. 12ನೇ ಶತಮಾನದಲ್ಲಿ ನಿರ್ಮಾಣವಾದ ಈ ಪಟ್ಟಣವನ್ನು ಆಳಿದ ದೊರೆ ರಾವ್ ದೇವಾ. ಆತನೇ ಇಲ್ಲಿರುವ ಅರಮನೆ ಮತ್ತು ದೇವಾಲಯಗಳನ್ನು ನಿರ್ಮಿಸಿದ ಅರಸ. ಈ ಊರಿನಲ್ಲಿ ಹರಿಯುವ ಚಂಬಲ್ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಅದನ್ನು ನೋಡಲು ಬರುವ ಪ್ರವಾಸಿಗರು ಇಲ್ಲಿರುವ ಹೈಡ್ರೋ ಎಲೆಕ್ಟ್ರಿಕ್ ಘಟಕ ಮತ್ತು ಅಣುಶಕ್ತಿ ಘಟಕವನ್ನು ನೋಡಬಹುದು.ರಾಜ್‌ಮಹಲ್, ಬಾದಲ್ ಮಹಲ್, ಅಖಾ-ಕ-ಮಹಲ್, ಝನನ್ ಮಹಲ್‌ಗಳ ಗೋಡೆಗಳ ಮೇಲೆ ಗಾಜನ್ನು ಅಳವಡಿಸಿ ಅದರ ಮೇಲೆ ಚಿತ್ರಕಲೆ ಮೂಡಿಸಲಾಗಿದೆ. ಈ ಗೋಡೆ ಚಿತ್ತಾರಗಳು ಮತ್ತು ಮೇಲ್ಛಾವಣಿ ಅಂದಕ್ಕೆ ಮಾರು ಹೋಗದಿರಲು ಸಾಧ್ಯವಿಲ್ಲ.ಬ್ರಿಜ್ ರಾಜ್‌ಭವನ್ ಅರಮನೆ, ಜಾಗ್ವರ್ ಮಂದಿರ, ಬ್ರಿಜ್ ವಿಲಾಸ ಅರಮನೆ ಹಾಗೂ ದ್ವೀಪದ ಅರಮನೆ ವೀಕ್ಷಿಸಿ ಮಹಾರಾಜ ಮಾಧೋಸಿಂಗ್ ಮ್ಯೂಸಿಯಂ, ಶಸ್ತ್ರಾಗಾರ, ಸರ್ಕಾರಿ ವಸ್ತು ಸಂಗ್ರಹಾಲಯವನ್ನು ನೋಡಬಹುದು. ಜೊತೆಗೆ ಗೋದಾವರಿ ಧಾಮ ಹೆಸರಿನ ಹನುಮಂತನ ದೇವಾಲಯ, ಬದೋಲಿ ದೇವಾಲಯಗಳೂ ಸೇರಿದಂತೆ ಆಗಮಗಢ ಸಾಹೇಬ್ ಗುರುದ್ವಾರಾ ಕೂಡ ಇಲ್ಲಿದೆ. ಹಾಗೆಯೇ ದರಾ ರಾಷ್ಟ್ರೀಯ ಉದ್ಯಾನವನ, ಚಂಬಲ್ ಉದ್ಯಾನವನ ಕೂಡ ಹತ್ತಿರದಲ್ಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.