ಭಾನುವಾರ, ಮೇ 9, 2021
19 °C

ಕೋಡಿಹಳ್ಳ ಸೇತುವೆ ಶಿಥಿಲ: ಅಪಾಯಕ್ಕೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಪಟ್ಟಣದ ಹೊರವಲಯದ ತುಮಕೂರು ರಸ್ತೆಯಲ್ಲಿರುವ ದೊಡ್ಡಕೆರೆ ಕೋಡಿ ಹಳ್ಳದ  ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿಯಾಗಿ ಶಿಥಿಲವಾಗಿ ತಿಂಗಳಾದರೂ ಈವರೆಗೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ರಾಜ್ಯ ಹೆದ್ದಾರಿ ಹಾದು ಹೋಗಿರುವ ದೊಡ್ಡಕೆರೆಯ ಕೋಡಿಹಳ್ಳಕ್ಕೆ ಹಿಂದೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡು ಸಂಚಾರಕ್ಕೆ ತೊಂದರೆಯಾಗಿತ್ತು.1987ರಲ್ಲಿ ಶಾಸಕ ವೈ.ಕೆ.ರಾಮಯ್ಯ ಅವಧಿಯಲ್ಲಿ ಹೊಸ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.ಕಳೆದ ಮಾರ್ಚ್‌ನಲ್ಲಿ ಸಿಮೆಂಟ್ ಲಾರಿಯೊಂದು ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಉರುಳಿ ಬಿದ್ದಿತ್ತು. ದುರಸ್ತಿಗಾಗಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಡ್ಡಿನೆಟ್ಟು ಕೈತೊಳೆದು ಕೊಂಡಿದ್ದಾರೆ. ಕಡ್ಡಿಗೆ ಕೆಂಪು ಟೇಪ್ ಸುತ್ತಿರುವುದನ್ನು ಬಿಟ್ಟರೇ ಬೇರೆ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ಕೊತ್ತಗೆರೆ ಗ್ರಾಮಸ್ಥರು ದೂರಿದ್ದಾರೆ.ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಶಿಥಿಲಗೊಂಡ ಸೇತುವೆ ತಡೆಗೋಡೆಯು ತಿರುವಿನಲ್ಲಿದ್ದು ಅಪಘಾತವಾಗುವ ಸಂಭವ ಹೆಚ್ಚಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರಾದ ಶಿವಕುಮಾರ್, ಮರಿಯಪ್ಪ, ಹೊಸಹಳ್ಳಿ ಚಂದ್ರ, ಪ್ರಸಾದ್, ಕರಿಗಿರಿಯಪ್ಪ, ಶ್ರೀನಿವಾಸ್ ಆಗ್ರಹಿಸಿದ್ದಾರೆ.ಬರ: ಸಚಿವರಿಗೆ ಮುತ್ತಿಗೆ

ಮದ್ದೂರು: ತಾಲ್ಲೂಕಿನ ಮಲ್ಲನಕುಪ್ಟೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಬುಧವಾರ ಸಂಜೆ ಆಗಮಿಸಿದ ಸಚಿವರ ದಂಡು ಗ್ರಾಮಸ್ಥರ ಆಕ್ರೋಶವನ್ನು ಎದುರಿಸಬೇಕಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಆರ್. ಆಶೋಕ್ ಅವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.`ಊರಿನಲ್ಲಿ ಜಾನುವಾರುಗಳಿಗೆ ಮೇವು, ನೀರು ಇಲ್ಲ. ನೀರಿನ ತೀವ್ರ ಕೊರತೆ ಇದೆ.ಆದರೆ ನೀವು ಕೆಲವೇ ನಿಮಿಷಗಳ ಭೇಟಿಗೆ ಬಂದು ಕಾಟಾಚಾರದ ಪರಿಶೀಲನೆ ಮಾಡುತ್ತಿರುವುದು ಏಕೆ?~ ಎಂದು ಆಕ್ರೋಶವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.