ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆ! ಈ ಅಮಾನುಷ ಕೃತ್ಯ ನಡೆಸಿದ್ದು ಮತ್ಯಾರೂ ಅಲ್ಲ. ಸಿನಿಮಾ ಪ್ರಪಂಚದ `ಹೀರೋ~! ಆದರೆ ನಿಜ ಜೀವನದಲ್ಲಿ ಖಳನಾಯಕ!

ಇಂಥ ಘಟನೆ ಹೊಸತೂ ಅಲ್ಲ, ಅಪರೂಪವೂ ಅಲ್ಲ. ನಮಗೆ ತಿಳಿದಿರುವಂತೆಯೇ ಇದು ವಿಶ್ವಾದ್ಯಂತ ಸಮಸ್ಯೆ. ಮನೆಗೆಲಸಕ್ಕೆ ಬರುವ ಯಾವ ಹೆಂಗಸನ್ನೂ ಗಂಡ ಹೊಡೆಯದೆ ಇರುವ ಉದಾಹರಣೆ ನನ್ನ ಜೀವನದಲ್ಲೇ ಕಂಡಿಲ್ಲ. `ವಿದ್ಯಾವಂತ~ ಹಾಗೂ `ಸುಸಂಸ್ಕೃತ~ರೆನಿಸಿಕೊಂಡವರಲ್ಲೂ ಇಂತಹ ಉದಾಹರಣೆಗಳು ಇಲ್ಲದಿಲ್ಲ. ಆಕೆ ಗಟ್ಟಿಗಿತ್ತಿ. ಬೆಂಗಳೂರಿನ, ಮೇಲ್ಮಧ್ಯಮ ವರ್ಗದ ಕುಟುಂಬ ಅವರದು.

ಹೆಂಡತಿಗೆ ಹೊಡೆಯುವುದಷ್ಟೇ ಕೌಟುಂಬಿಕ ಹಿಂಸೆಯಲ್ಲ. ಸಂಗಾತಿಯ ನಿಂದನೆ, ತವರಿನವರ ಒಡನಾಟಕ್ಕೆ ಅವಕಾಶ ನೀಡದಿರುವುದೂ ಕೌಟುಂಬಿಕ ಹಿಂಸೆಯೇ. ಈ ಬಗೆಯ ಭಾವನಾತ್ಮಕ ಹಾಗೂ ಸಾಮಾಜಿಕ ದೌರ್ಜನ್ಯವೂ ಕೌಟುಂಬಿಕ ಕ್ರೌರ್ಯದ ವ್ಯಾಪ್ತಿಗೆ ಸೇರುತ್ತದೆ. ಇಂತಹ ವ್ಯಕ್ತಿಗಳು ಇತರರೊಡನೆ ಚೆನ್ನಾಗಿಯೇ ಇರುತ್ತಾರೆ.

ಆದರೆ ಸಂಬಂಧಗಳ ಸಮಸ್ಯೆಗಳ ಬಗ್ಗೆ ಸುಳಿವೂ ಬಿಟ್ಟುಕೊಡುವುದಿಲ್ಲ. ಇಂತಹ ಅನೇಕ ಸಂಕಷ್ಟಗಳು ಹೊರಬರುವುದಿಲ್ಲ.

ಆದರೆ ಇತ್ತೀಚಿನ ಘಟನೆಯಲ್ಲಿನ ಈ ಹೀರೋ, ಪತ್ನಿಗೆ ನೀಡಿದ ಚಿತ್ರಹಿಂಸೆಯ ವಿವರ ಕೇಳಿದರೆ ಮೈ ಝುಂ ಎನ್ನುತ್ತದೆ. ಎಷ್ಟೋ ವರ್ಷಗಳಿಂದ ದೌರ್ಜನ್ಯವನ್ನು ಆಕೆ ಮೌನವಾಗಿ ಸಹಿಸಿಕೊಂಡು ಬಂದಿದ್ದಳು. ಇದಕ್ಕೆ ಆಕೆ ನೀಡಿರುವ ಕಾರಣ, ಆತನ `ಇಮೇಜ್~ ಹಾಳಾಗಬಾರದೆಂದು! ದೌರ್ಜನ್ಯ ಮಿತಿಮೀರಿದಾಗಷ್ಟೇ ಆಕೆ ದೂರು ನೀಡಿದ್ದು. ಅದೂ ಸಹ, ಮುಂದೆ ಇನ್ನೆಷ್ಟರ ಮಟ್ಟಕ್ಕೆ ಹೋಗಬಹುದೋ ಎಂಬುದನ್ನು ಕಲ್ಪಿಸಿಕೊಂಡು ಹೆದರಿ ಈ ನಿರ್ಧಾರ ಕೈಗೊಂಡದ್ದು.

ಆದರೆ, ಹಿರಿಯ ನಟರೆನಿಸಿಕೊಂಡ ಅಂಬರೀಶ್ ಮತ್ತಿತರರು ಪತಿ ಪತ್ನಿಯರ ನಡುವಣ ಸಂಧಾನಕ್ಕೆ ಪ್ರಯತ್ನಿಸಿದ್ದು ಎಷ್ಟು ಸರಿ? ಇವರ ಪೈಕಿ ಒಬ್ಬರಾಗಲಿ ಆತನ ವರ್ತನೆಯನ್ನು ಖಂಡಿಸಿದ್ದಾರೆಯೇ? ಗಂಡ ಹೊಡೆಯಲಿ, ಬಡಿಯಲಿ, ಕಚ್ಚಲಿ, ಸುಡಲಿ, ಗುಂಡೇ ಹಾರಿಸಲಿ, ಅವನೊಡನೆ ಸ್ನೇಹದಿಂದಿರು, ಗುಲಾಮಳಾಗಿರು ಎಂದು ತಾನೇ ಇದರ ಅರ್ಥ?

`ಬಚ್ಚಲಲ್ಲಿ ಬಿದ್ದು ಈ ರೀತಿ ಪೆಟ್ಟಾಯಿತು~ ಎಂದು ಆಕೆ ಹೇಳಿಕೆ ಕೊಟ್ಟಾಗಿದೆ ಎಂಬ ಸುದ್ದಿ ಬಂದಿದೆ. ಬಚ್ಚಲ ತುಂಬಾ ಉರಿಯುವ ಸಿಗರೇಟು ಬಿದ್ದಿತ್ತೆ, ಮೈಯೆಲ್ಲಾ ಸುಡಲು? ಹೀಗೆ ಹೇಳಿದ ಈ ವಿದ್ಯಾವಂತ ಮಹಿಳೆಗೂ, ಗಂಡನಿಂದ ಕಾಲಲ್ಲಿ ಒದೆಸಿಕೊಂಡು ಸೊಂಟಕ್ಕೆ ಪೆಟ್ಟಾಗಿ ಒಂದು ವಾರ ಮೇಲೇಳಲೂ ಆಗದೆ, `ನೀರು ಹಿಡಿಯಲು ಹೋದಾಗ ಜಾರಿ ಬಿದ್ದೆ~ ಎಂದು ಸುಳ್ಳು ಹೇಳುವ ನಮ್ಮ ಮನೆಯ ಅನಕ್ಷರಸ್ತ ಕೆಲಸದಾಕೆಗೂ ಏನು ವ್ಯತ್ಯಾಸ? ಹೀರೋ ಪತ್ನಿಗಾದರೂ ಮಹಿಳಾ ಸಂಘಟನಾಕಾರರ ಬೆಂಬಲ ಆಗಲೇ ವ್ಯಕ್ತವಾಗಿದೆ. ಇವಳಿಗೆ ಅದೂ ಇಲ್ಲ. ಗಂಡನಿಗೆ ತಿಳಿದರೆ ಇನ್ನೂ ನಾಲ್ಕು ಒದೆಗಳು ಲಭ್ಯವಾಗುವವಷ್ಟೇ.

ಇನ್ನು, ಮೂರನೆಯ ವ್ಯಕ್ತಿಯಾದ ನಟಿಯೊಬ್ಬಳಿಗೆ ನಿಷೇಧದ ಶಿಕ್ಷೆ! ಕುರುಡುತನದ ಪರಮಾವಧಿ! ಕಾರಣ, ಆಕೆ ಹೆಣ್ಣು ಎಂಬುದಷ್ಟೇ? ಒಂದು ವೇಳೆ ಈಕೆ ಇವರಿಬ್ಬರ ಜೀವನದಲ್ಲಿ ಮಧ್ಯ ಪ್ರವೇಶ ಮಾಡಿದ್ದೆ ನಿಜವಾದರೆ, ಅದಕ್ಕೆ ಉತ್ತೇಜನ ನೀಡದೆ ಆಕೆಯನ್ನು ದೂರವಿಡಬೇಕಾದುದು ಪ್ರಾಮಾಣಿಕ ಪತಿಯೊಬ್ಬನ ಕರ್ತವ್ಯ ತಾನೇ? ಆದರೆ ಅವಳು ಹೆಣ್ಣೆಂಬ ಕಾರಣದಿಂದಲೇ ತಾನೇ ಈ ಕ್ರಮ ಕೈಗೊಂಡಿರುವುದು? `ಅವರ ಸಂಸಾರಕ್ಕೆ ಆಕೆ ಹುಳಿ ಹಿಂಡಿದ್ದರಿಂದ~ ಆತ ಜೈಲಿಗೆ ಹೋಗಬೇಕಾಯಿತು ಎಂಬ ಆರೋಪ. ಹೆಂಡತಿಯ ಮೇಲೆ ಹಲ್ಲೆ ಮಾಡಿದ ವಿಷಯ ಎಲ್ಲಿ ಹೋಯಿತು?
ಈ ಘಟನೆ `ದೊಡ್ಡವರ~ ಕುಟುಂಬಕ್ಕೆ ಸಂಬಂಧಿಸಿದ್ದು. ಆದ್ದರಿಂದಲೇ ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಟಿವಿ ಮಾಧ್ಯಮಗಳಿಗೆ ಮಸಾಲೆಭರಿತ ಸುದ್ದಿ ದೊರೆತು ವಿಷಯ ಬಟ್ಟಬಯಲಾಯಿತು. ವಿಚಾರಣೆ ಪ್ರಾರಂಭವಾಯಿತು. ಆದರೆ ಪೊಲೀಸರಿಗೆ ದೂರು ಕೊಟ್ಟದ್ದು ತಿಳಿದರೆ ಗಂಡ ಮತ್ತೆ ಹೊಡೆಯುತ್ತಾನೆ ಎಂದು ಹೆದರಿ ಚಿತ್ರಹಿಂಸೆ ಅನುಭವಿಸುವ ಅಸಹಾಯಕ ಮಹಿಳೆಯರ ಎಷ್ಟು ಕೋಟಿ ಇದ್ದಾರೋ. ಅಲ್ಲದೆ ದೂರು ನೀಡಲು ಹೋದರೆ ಅಲ್ಲಿ ಅವಳ ಸುರಕ್ಷತೆಯ ಬಗ್ಗೆ ಏನು ಖಾತರಿ? ದೂರು ಸ್ವೀಕರಿಸಿ ಕ್ರಮ ಕೈಗೊಂಡರೆ ಎಷ್ಟು ಸಂಖ್ಯೆ ಪುರುಷರು ಕಂಬಿ ಎಣಿಸುತ್ತಾರೋ, ಎಷ್ಟು ಮಹಿಳೆಯರು ನಿರಾಳವಾಗಿ ಸ್ವತಂತ್ರ ಜೀವನ ನಡೆಸಬಲ್ಲರೋ.

1946 ರಲ್ಲಿ ನಮ್ಮ ತಂದೆ ಮದುವೆಯಾದಾಗ ಮನೆ ಕೆಲಸದ ಆಳೊಬ್ಬ, `ಬುದ್ಧಿ ಉಪ್ಯೋಗ ಇಲ್ಲ. ಎಂಡ್ತಿನ್ ಒಡ್ಯಾಕಿಲ್ಲ~ ಎಂದಿದ್ದನ್ನು ಅವರು ಈಗಲೂ ನೆನೆಸಿಕೊಳ್ಳುತ್ತಾರೆ. ಪುರುಷನೊಬ್ಬನ ಪೌರುಷಕ್ಕೆ ಇದೊಂದು ಮಾನದಂಡ. 21 ನೆಯ ಶತಮಾನದಲ್ಲೂ ಪರಿಸ್ಥಿತಿ ಏನೂ ಬದಲಾಗಿಲ್ಲ. ಪ್ರಪಂಚ ಹೀಗೆಯೇ ನಡೆದುಕೊಂಡು ಬಂದಿದೆ, ಹೀಗೆಯೇ ಮುಂದುವರಿದುಕೊಂಡು ಹೋಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿ ಆತಂಕ ಉಂಟಾಗುತ್ತದೆ.

(ಈ ಲೇಖನ ಬರೆಯುತ್ತಿದ್ದಂತೆಯೇ, ನಮ್ಮ ಕೆಲಸದಾಕೆಯು ಕಣ್ಣೀರಿಡುತ್ತಲೇ ಒಳಬಂದು, ತನ್ನ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ 2000 ರೂಪಾಯಿ ಸಾಲ ಮಾಡಬೇಕಾಗಿ ಬಂದದ್ದನ್ನು ನೆಪ ಮಾಡಿಕೊಂಡು ಆಕೆಯ ಗಂಡ ಆಕೆಯ ಕಪಾಳಕ್ಕೆ ಹೊಡೆದ ಕಾರಣ ಕಿವಿ ನೋಯುತ್ತಿದೆಯೆಂದು ಗೋಳಾಡಿದಳು. ಎಂತಹ ವಿಪರ್ಯಾಸ!)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.