ಒಂದು ವಿಶ್ವವಿದ್ಯಾಲಯದ ಕೆಲಸ ಪದವಿ ನೀಡುವುದು. ಅಭ್ಯರ್ಥಿಯ ಕಲಿಕೆ ಗುಣಮಟ್ಟ ನಿರ್ಧರಿಸಿ ರ್ಯಾಂಕ್ ನೀಡುವ ಕೆಲಸವೂ ವಿವಿಯದ್ದೇ. ಶೈಕ್ಷಣಿಕ ಪದವಿ ಪಡೆದ ನಂತರ ಮಾಡುವ ಉದ್ಯೋಗಕ್ಕೆ ಕೌಶಲ ಈ ತಂತ್ರಜ್ಞಾನ ಯುಗಕ್ಕೆ ಬೇಕೇ ಬೇಕು.

ಯಾವುದೇ ಕೆಲಸಕ್ಕೆ ಅರ್ಜಿ ಹಾಕಿ. ಅಲ್ಲಿ ಕೌಶಲವೇ ಮುಂದೆ ನಿಂತು ಕೆಲಸ ಮಾಡುತ್ತದೆ. ಅರ್ಜಿ ಹಾಕುವಾಗಿನ ಸಂದರ್ಭದಿಂದ ಹಿಡಿದು ಕೆಲಸ ಮುಗಿಸಿ ಕಚೇರಿಯ ಮೆಟ್ಟಿಲು ಇಳಿಯುವ ಸಂದರ್ಭದಲ್ಲೂ ಕೌಶಲ ನಮ್ಮನ್ನು ಉನ್ನತಿಗೇರಿಸಬಲ್ಲದು. ಇದು ವಿಶ್ವವಿದ್ಯಾಲಯದಲ್ಲಿ ಸಿಗುವುದು ಅಥವಾ ಹುಡುಕುವುದು ಕಷ್ಟ. ಇದಕ್ಕಾಗಿಯೇ ಒಂದಿಷ್ಟು ಸಂಸ್ಥೆಗಳಿವೆ. ಇಂತಹ ಸಂಸ್ಥೆಯೊಂದು ರಾಜ್ಯ ಮುಕ್ತ ವಿವಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ದೂರದ ಊರಿನಲ್ಲಿ ಕುಳಿತು ಮುಕ್ತ ವಿವಿಯ ಪದವಿ ಪಡೆಯುವ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಈಗ ಕೌಶಲ ಅಭಿವೃದ್ಧಿಗೆ ತರಬೇತಿ ಪಡೆಯಬಹುದು. ಆ ಸಂಸ್ಥೆಯ ಹೆಸರು ಐ-ನರ್ಚರ್ ಎಜುಕೇಷನ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್.ಐ-ನರ್ಚರ್ ಕೆಲಸ ಏನು? ವಿಶ್ವವಿದ್ಯಾಲಯಗಳು ಮಾನ್ಯ ಮಾಡುವ ಪದವಿ ಹಾಗೂ ವಿದ್ಯಾರ್ಥಿಗಳ ಕೌಶಲದ ಮಧ್ಯೆ ಇರುವ ಅಂತರವನ್ನು ದೂರ ಮಾಡುವ ಇಲ್ಲವೇ ನಿವಾರಿಸುವ ನಿಟ್ಟಿನಲ್ಲಿ ಐ-ನರ್ಚರ್ ಕೆಲಸ ಮಾಡಲಿದೆ. ಭವಿಷ್ಯದ ಅಗತ್ಯಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಧ್ಯೇಯ ಇದರದು.

ಯಾವ ವಿಭಾಗ: ಅನಿಮೇಷನ್, ಸೃಜನಾತ್ಮಕ ವಿಜ್ಞಾನ (ಕ್ರಿಯೇಟಿವ್ ಸೈನ್ಸ್), ಮೊಬೈಲ್ ಅಪ್ಲಿಕೇಷನ್, ಹಣಕಾಸು ಸೇವೆ, ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್, ಐಟಿ ಇನ್ಫಾರ್ಮೇಷನ್ ಸ್ಟೋರೇಜ್ ಮ್ಯಾನೇಜ್ಮೆಂಟ್, ಎಂಬೆಡೆಡ್ ಸಿಸ್ಟಮ್ಸ್ ಸೇರಿದಂತೆ 14 ಕೋರ್ಸ್ಗಳನ್ನು ಒದಗಿಸಲು ಈ ಒಪ್ಪಂದ ನೆರವಾಗಲಿದೆ.

ಮನರಂಜನಾ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ಅನಿಮೇಷನ್ ಸಾಧಿಸಿದೆ. ಹಾಲಿವುಡ್ ಚಿತ್ರಗಳು, ವೀಡಿಯೋ ಗೇಮ್ಸ್ಗಳಲ್ಲಿ ದೊಡ್ಡ ಬಜೆಟ್ ಹೊಂದಿದೆ. ಇಲ್ಲಿ ಸೃಷ್ಟಿಯಾಗಲಿರುವ ಉದ್ಯೋಗಕ್ಕೆ ತರಬೇತಿ ನೀಡುವುದು ಇದರ ಕೆಲಸ. ಇದರಲ್ಲಿ ಬಿಎಸ್ಸಿ, ಎಂಎಸ್ಸಿ ಮಟ್ಟದ ಪದವಿ ನೀಡಲಿದೆ.

ಮೊಬೈಲ್ ತಂತ್ರಜ್ಞಾನ ಪ್ರಸ್ತುತ ಶೇ100ರಷ್ಟು ಬೆಳವಣಿಗೆ ಕಂಡಿದ್ದು, ಪ್ರತಿ ವರ್ಷ ಮೂರು ಬಿಲಿಯನ್ನಷ್ಟು ಬಂಡವಾಳ ಹೂಡಿಕೆ ಕಂಡಿದೆ. ಈ ಕ್ಷೇತ್ರ ಸಾಕಷ್ಟು ಅನುಭವಿ ತಜ್ಞರ ಕೊರತೆ ಎದುರಿಸುತ್ತಿದ್ದು, ಐ-ನರ್ಚರ್ ವಿದ್ಯಾರ್ಥಿಗಳಿಗೆ ಮೊಬೈಲ್ ತಂತ್ರಜ್ಞಾನದ ಆಳವಾದ ಅಧ್ಯಯನದ ಮೂಲಕ ವಿದ್ಯಾರ್ಥಿಗಳನ್ನು ತಯಾರು ಮಾಡಲಿದೆ.

ಹಣಕಾಸು ಸೇವಾ ಕ್ಷೇತ್ರ ಪ್ರಸ್ತುತ ಕ್ಷಿಪ್ರ ಬೆಳವಣಿಗೆ ಕಂಡಿದ್ದು, ಬ್ಯಾಂಕಿಂಗ್ ಕ್ಷೇತ್ರಕ್ಕೆ 2013ರ ವೇಳೆಗೆ 6ಲಕ್ಷ ಅನುಭವಿ ತಜ್ಞರು ಬೇಕಾಗುತ್ತಾರೆ. ಈ ನಿಟ್ಟಿನಲ್ಲಿ ಐ-ನರ್ಚರ್ ಬಿಎಫ್ಎಸ್, ಎಂಎಫ್ಎಸ್ ಹಾಗೂ ಎಂಬಿಎ ಪದವಿ ನೀಡುತ್ತದೆ.ಇದಲ್ಲದೇ, ಐಟಿ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ನಲ್ಲಿ ಬಿ.ಎಸ್ಸಿ, ಎಂ.ಟೆಕ್, ಎಂಬಿಎ ಹಾಗೂ ಎಂಸ್ಸಿ ಪದವಿ, ಕ್ರಿಯೇಟಿವ್ ಸೈನ್ಸ್ ಮುದ್ರಣ - ವಿದ್ಯುನ್ಮಾನ ಮಾಧ್ಯಮ ಹಾಗೂ ಇಂಟರ್ನೆಟ್ ಕ್ರಿಯೇಟಿವ್ ಸೈನ್ಸ್, ಮಾರ್ಕೆಟಿಂಗ್, ಜಾಹೀರಾತು ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಅನುಗುಣವಾಗಿ ಬಿ.ಎಸ್ಸಿ, ಎಂ.ಎಸ್ಸಿ ಹಾಗೂ ಎಂಬಿಎ ಪದವಿ ತರಗತಿ ನಡೆಸಲಿದೆ. ಇದಕ್ಕೆ ವಿವಿ ಪ್ರಮಾಣ ಪತ್ರ ನೀಡಲಿದೆ. ಬರೀ ತರಬೇತಿ ಮಾತ್ರವಲ್ಲ. ಆಯಾ ಕ್ಷೇತ್ರದ ತಜ್ಞರಿಂದ ವಿಶೇಷ ತರಬೇತಿಯೂ ವಿದ್ಯಾರ್ಥಿಗಳಿಗೆ ಈ ಒಪ್ಪಂದ ಅವಕಾಶ ಕಲ್ಪಿಸಲಿದೆ.

ಇದರೊಂದಿಗೆ ಐಟಿ ಎಂಬೆಡೆಡ್ ಸಿಸ್ಟಮ್ನಲ್ಲಿ ಎಂ.ಎಸ್ಸಿ, ಎಂಟೆಕ್ ಹಾಗೂ ಎಂಬಿಎ ಪದವಿ, ಐಟಿ ಇನ್ಫರ್ಮೇಷನ್ ಸ್ಟೋರೇಜ್ ಮ್ಯಾನೇಜ್ಮೆಂಟ್ನಲ್ಲಿ ಐ-ನರ್ಚರ್ ಸಂಸ್ಥೆ ಎಂಟೆಕ್, ಎಂಎಸ್ಸಿ, ಎಂಬಿಎ ಪದವಿ ನೀಡುವ ಕೆಲಸ ಮಾಡಲಿದೆ.ಮೈಸೂರಿನಲ್ಲಿ ಈಚೆಗೆ ಮುಕ್ತ ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಐ-ನರ್ಚರ್ನ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಅಜಿಲಾ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡು ಯೋಜನೆ ಸಾಕಾರಕ್ಕೆ ಶ್ರೀಕಾರ ಬರೆದರು.

ಭವಿಷ್ಯದ ಯಶಸ್ಸಿಗೆ ಸಹಕಾರಿ
‘ಪ್ರಾಯೋಗಿಕ ಕೌಶಲಗಳ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಜಗತ್ತಿನಲ್ಲಿ ಯಶಸ್ವಿಯಾಗಲು ನೆರವಾಗುವುದೇ ಮುಖ್ಯ ಗುರಿ. ನಮ್ಮಲ್ಲಿ ಎಲ್ಲಾ ಕೋರ್ಸ್ಗಳು ಹೊಸದಾಗಿ ತಲೆ ಎತ್ತುತ್ತಿರುವ ವೃತ್ತಿ ಮತ್ತು ಉದ್ಯೋಗ ರಂಗಗಳ ಅಗತ್ಯಗಳನ್ನು ಮನಗಂಡು ನಡೆಯುತ್ತಿವೆ.ಇದನ್ನು ಮುಕ್ತ ವಿವಿಗೂ ವಿಸ್ತರಣೆ ಮಾಡಿರುವುದು ಸಂತೋಷದ ವಿಚಾರ’
ಅಶ್ವಿನ್ ಅಜಿಲಾ.
ಐ-ನರ್ಚರ್ ವ್ಯವಸ್ಥಾಪಕ ನಿರ್ದೇಶಕ

‘ಅಂಚೆ ತೆರಪಿನ ಶಿಕ್ಷಣ, ನಿರಂತರ ಕೋರ್ಸ್ ಮತ್ತು ನಿರಂತರ ಶಿಕ್ಷಣ ನೀಡುತ್ತಿರುವ ಮುಕ್ತ ವಿವಿ ಎಲ್ಲರಿಗೂ, ‘ಎಲ್ಲೆಡೆಯೂ ಉನ್ನತ ಶಿಕ್ಷಣ’ ಎಂಬ ಧ್ಯೇಯವಾಕ್ಯ ಹೊಂದಿದ್ದು, ಐ-ನರ್ಚರ್ ಅಲ್ಲದೇ 80ಕ್ಕೂ ಹೆಚ್ಚು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ’
ಪ್ರೊ.ಕೆ.ಎಸ್. ರಂಗಪ್ಪ
ರಾಜ್ಯ ಮುಕ್ತ ವಿಶ್ವವಿದ್ಯಾಯದ ಕುಲಪತಿ

ಯಾವುದೇ ಕೆಲಸಕ್ಕೆ ಅರ್ಜಿ ಹಾಕಿ. ಅಲ್ಲಿ ಕೌಶಲವೇ ಮುಖ್ಯವಾಗುತ್ತದೆ.
ಇದುವಿಶ್ವವಿದ್ಯಾಲಯದಲ್ಲಿ ಸಿಗುವುದು ಕಷ್ಟ. ಇದಕ್ಕಾಗಿಯೇ ಒಂದಿಷ್ಟು ಸಂಸ್ಥೆಗಳಿವೆ. ಇಂತಹ ಸಂಸ್ಥೆಯೊಂದು ರಾಜ್ಯ ಮುಕ್ತ ವಿವಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.