ಗುರುವಾರ , ಮೇ 13, 2021
24 °C

ಕ್ಯಾಂಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಗಾಸಸ್ ತರಬೇತಿ

ನಿರ್ವಹಣೆ ಅಥವಾ ಮ್ಯಾನೇಜ್‌ಮೆಂಟ್ ಕ್ಷೇತ್ರಕ್ಕೆ ಈಗ ತುಂಬ ಬೇಡಿಕೆ, ಮಹತ್ವ. ಅದಕ್ಕಾಗಿಯೇ 30ಕ್ಕಿಂತ ಮೇಲ್ಪಟ್ಟ ವಯಸ್ಸಿನ ಮ್ಯಾನೇಜ್‌ಮೆಂಟ್ ಪರಿಣಿತರಿಗೆ ಪೆಗಾಸಸ್ ಇನ್‌ಸ್ಟಿಟ್ಯೂಟ್ ಫಾರ್ ಎಕ್ಸಲೆನ್ಸ್ `ಸರ್ಟಿಫಿಕೇಶನ್ ಕೋರ್ಸ್~ ನಡೆಸಲಿದೆ.ಹಣಕಾಸು, ಮಾರುಕಟ್ಟೆ, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಸೇವೆ ಮುಂತಾದ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪರಿಣಿತರಿಗೆ ವೃತ್ತಿ ಜೀವನದ ಸವಾಲು ಎದುರಿಸುವ ಬಗೆಯನ್ನು ಇಲ್ಲಿ ಕಲಿಸಲಾಗುತ್ತದೆ. ಇದರಿಂದ ಸೂಕ್ತ ನಿರ್ಧಾರ ಕೈಗೊಳ್ಳಲು ಅವರಿಗೆ ಸಹಾಯವಾಗುತ್ತದೆ ಎನ್ನುತ್ತಾರೆ ಕಾರ್ಯಕ್ರಮದ ಮುಖ್ಯಸ್ಥ ವಾಸು.ಇದರಲ್ಲಿ ವಿವಿಧ ಸಿದ್ಧಾಂತ, ಸೂತ್ರ, ಕೇಸ್ ಸ್ಟಡಿಗಳ ಅಧ್ಯಯನ, ಮೈಂಡ್ ಮ್ಯಾಪಿಂಗ್, ಎನ್‌ಎಲ್‌ಪಿ, ಸೈಕೊಡ್ರಾಮಾ, ಆಲೋಚನೆ ಮುಂತಾದ ಕಾರ್ಯಕ್ರಮ ಸೇರ್ಪಡೆ ಮಾಡಲಾಗಿದೆ. ಗುಣಮಟ್ಟ ಕಾಪಾಡಲು ಪ್ರತಿ ತಂಡದಲ್ಲಿ 15 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಎಂದು ಅವರು ಹೇಳುತ್ತಾರೆ.ಮೊದಲ ತಂಡದ ತರಗತಿ ಜಕ್ಕೂರು ಬಳಿಯ ಶ್ರೀರಾಮಪುರ ಗ್ರಾಮದಲ್ಲಿನ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಏ. 29ರಿಂದ ಆರಂಭವಾಗಲಿದೆ. ಮಾಹಿತಿಗೆ: 080 2362 3484, 094433 29811.ಡಿಜಿಟಲ್ ನಕ್ಷೆ ಕೋರ್ಸ್

ಬೆಂಗಳೂರಿನ ರಾಜಮಹಲ್ ವಿಲಾಸ್ ಬಡಾವಣೆಯಲ್ಲಿ ಇರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‌ಮೆಂಟ್ಸ್ (ಐಐಎಚ್‌ಎಸ್) ವಿವಿಧ ಕ್ಷೇತ್ರಗಳ ವೃತ್ತಿನಿರತರು ಮತ್ತು ವಿದ್ಯಾರ್ಥಿಗಳಿಗಾಗಿ  `ಡಿಜಿಟಲ್ ನಕ್ಷೆ~ ಕುರಿತ (ವರ್ಕಿಂಗ್ ವಿತ್ ಡಿಜಿಟಲ್ ಮ್ಯೋಪ್ಸ್) ಮೂರು ದಿನಗಳ ತರಬೇತಿ ಆಯೋಜಿಸಿದೆ. ಇದು ಬೆಂಗಳೂರಿನಲ್ಲಿ ಮೇ 11ರಂದು ಆರಂಭವಾಗಲಿದೆ.ಡಿಜಿಟಲ್ ಮ್ಯೋಪ್‌ಗಳ ಬಳಕೆಯ ಮೂಲಕ ಹೆಚ್ಚಿನ ಪರಿಣತಿ, ಮುಕ್ತವಾಗಿ ಲಭ್ಯವಿರುವ ಅನೇಕ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಅಪ್ಲಿಕೇಶನ್‌ಗಳ ಸಹಾಯದೊಂದಿಗೆ ಡಿಜಿಟಲ್ ನಕ್ಷೆಗಳ ಬಳಕೆಯ ಸ್ಪಷ್ಟ ಒಳನೋಟ ಮತ್ತು ಪ್ರತ್ಯಕ್ಷ ಅನುಭವ ಒದಗಿಸಲಾಗುತ್ತದೆ.

 

ಓಪನ್‌ಸ್ಟ್ರೀಟ್ ಮ್ಯೋಪ್, ಗೂಗಲ್ ಮ್ಯೋಪ್‌ಗಳಂತಹ ಜನಪ್ರಿಯ ವೆಬ್-ಆಧಾರಿತ ಜಿಎಸ್‌ಐ ಅಪ್ಲಿಕೇಶನ್‌ಗಳ ಮೇಲೆ ಮಾಶ್-ಅಪ್‌ಗಳನ್ನು ಬಳಸುವ ಮತ್ತು ಅಭಿವೃದ್ಧಿಪಡಿಸುವ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಡಾ. ಎಚ್.ಎಸ್.ಸುಧೀರ್ ಇದನ್ನು ನಡೆಸಿಕೊಡುತ್ತಾರೆ. ನೋಂದಣಿಗೆ ಮೇ 4 ಕೊನೆಯ ದಿನ.

ಮಾಹಿತಿಗೆ: http://www.iihs.co.in/programmes/pwp/gis/gis-may-2012 ಅಥವಾ 97402 20875.ವೆಲ್ಡಿಂಗ್ ಕಲಿಸಲೊಂದು ಕೇಂದ್ರ


ಬೆಂಗಳೂರು ಮತ್ತು ಧಾರವಾಡ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ವೆಲ್ಡಿಂಗ್ ತರಬೇತಿ ಕೇಂದ್ರಗಳನ್ನು ತೆರೆಯಲು ಕೌಶಲ್ಯ ಅಭಿವದ್ಧಿ ಸಂಸ್ಥೆಯಾದ ಲಾರಸ್ ಎಜುಟೆಕ್ ಮತ್ತು ಎಡಿಒಆರ್ (ಅಡೋರ್) ವೆಲ್ಡಿಂಗ್ ತಂತ್ರಜ್ಞಾನ ಸಂಸ್ಥೆ ಒಪ್ಪಂದಕ್ಕೆ ಸಹಿ ಮಾಡಿವೆ.ವೆಲ್ಡಿಂಗ್ ಉತ್ಪನ್ನಗಳಲ್ಲಿ ಮಂಚೂಣಿಯಲ್ಲಿರುವ ಅಡೋರ್, ಮೊದಲು ಅಡ್ವಾಣಿ ಒರ್ಲಿಕನ್ ಲಿಮಿಟೆಡ್ ಎಂದು ಹೆಸರಾಗಿತ್ತು. ಉಭಯ ಸಂಸ್ಥೆಗಳ ನಡುವಣ ಒಪ್ಪಂದದಿಂದಾಗಿ ಸ್ಥಾಪನೆಯಾಗುವ ಈ ಕೇಂದ್ರಗಳ ಉದ್ದೇಶ, ಶೋಷಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿ ಅವರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವುದು.`ವೆಲ್ಡಿಂಗ್ ಉದ್ಯಮದಲ್ಲಿ ಮಂಚೂಣಿಯಲ್ಲಿರುವ ಅಡೋರ್, ದೇಶದ ಕೈಗಾರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅದನ್ನು ಬಳಸಿಕೊಂಡು ಸಮಾಜದ ಕೆಳಸ್ತರದಲ್ಲಿರುವ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ನಾವು ಒತ್ತು ನೀಡುತ್ತಬಂದಿದ್ದೇವೆ~ ಎಂದು ಲಾರಸ್ ಎಜುಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರಾವ್ ಚೀಡೆಲ್ಲಾ ಹೇಳುತ್ತಾರೆ. ಅಡೋರ್‌ನ ನಿರ್ದೇಶಕ ದೀಪ್ ಲಾಲ್ವಾನಿ ಅವರು ಹೇಳುವಂತೆ, ಮೊದಲ ವರ್ಷ ಅಡೋರ್ ಮೂರು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.