ಮಂಗಳವಾರ, ಮೇ 18, 2021
31 °C

ಕ್ಯಾಮರನ್ ವೈಟ್ ಅಬ್ಬರ; ಸಂಗಾ ಪಡೆಗೆ ಎರಡು ಪಾಯಿಂಟ್ಸ್! :ಚಾರ್ಜರ್ಸ್‌ಗೆ ಗೆಲುವಿನ ಸಿಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಕ್ಯಾಮರನ್ ವೈಟ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಕ್ಕನ್ ಚಾರ್ಜರ್ಸ್ ತಂಡವು ಪುಣೆ ವಾರಿಯರ್ಸ್ ವಿರುದ್ಧ 18 ರನ್‌ಗಳಿಂದ ಗೆದ್ದು, ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಐದನೇ ಅವತರಣಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎರಡು ಪಾಯಿಂಟುಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಗುರುವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚಾರ್ಜರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 177 ರನ್ ಪೇರಿಸಿತು. 46 ಎಸೆತಗಳಲ್ಲಿ 78 ರನ್ (6 ಬೌಂ, 5 ಸಿಕ್ಸರ್) ಗಳಿಸಿದ ವೈಟ್ ಅವರ ಅಬ್ಬರದ ಬ್ಯಾಟಿಂಗ್ ತಂಡದ ಉತ್ತಮ ಮೊತ್ತಕ್ಕೆ ಕಾರಣ.ಈ ಗುರಿಯನ್ನು ಬೆನ್ನಟ್ಟಿರುವ ಸೌರವ್ ಗಂಗೂಲಿ ನೇತೃತ್ವದ ಪುಣೆ ವಾರಿಯರ್ಸ್ ತನ್ನ ಪಾಲಿನ 20 ಓವರುಗಳಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಭಾರಿ ಕಷ್ಟಪಟ್ಟು ಗಳಿಸಿದ್ದು 159 ರನ್ ಮಾತ್ರ.ಚಾರ್ಜರ್ಸ್ ತಂಡದವರು ಈ ಪಂದ್ಯದಲ್ಲಿ ರನ್ ಗಳಿಸಲು ಪರದಾಡುವಂಥ ಸ್ಥಿತಿ ಎದುರಾಗಲಿಲ್ಲ.  ಪಾರ್ಥಿವ್ ಪಟೇಲ್ (18 ಎಸೆತಗಳಲ್ಲಿ 24) ಮತ್ತು ಶಿಖರ್ ಧವನ್ (16) ಮೊದಲ ವಿಕೆಟ್‌ಗೆ 4 ಓವರ್‌ಗಳಲ್ಲಿ 39 ರನ್ ಸೇರಿಸಿದರು. ನಾಯಕ ಸಂಗಕ್ಕಾರ ಔಟಾದಾಗ ತಂಡದ ಒಟ್ಟು ಮೊತ್ತ 83.ಆದರೆ ವೈಟ್ ಮತ್ತು ಜೆನ್ ಪಾಲ್ ಡುಮಿನಿ ನಾಲ್ಕನೇ ವಿಕೆಟ್‌ಗೆ 75 ರನ್ ಸೇರಿಸಿದ ಕಾರಣ ಚಾರ್ಜರ್ಸ್ ಸವಾಲಿನ ಮೊತ್ತ ಪೇರಿಸಿತು. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಲಯ ಕಂಡುಕೊಂಡ ವೈಟ್, ಭರ್ಜರಿ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು.ಡುಮಿನಿ ಮತ್ತು ಇಶಾಂಕ್ ಕೊನೆಯಲ್ಲಿ ರನ್ ಗತಿ ಹೆಚ್ಚಿಸಲು ತಕ್ಕ ಪ್ರಯತ್ನವನ್ನೇ ಮಾಡಿದರು.

 
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.