ಕ್ಯಾಮೆರಾ ಕಣ್ಣಲ್ಲಿ ರಾಜ್
ಲೇ: ಭವಾನಿ ಲಕ್ಷ್ಮೀನಾರಾಯಣ, ನಿರೂಪಣೆ: ಶಶಿಧರ ಚಿತ್ರದುರ್ಗ, ಪು: 128 ; ಬೆ: ರೂ. 160, ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ ಎಮ್ಮಿಗನೂರ, ಬಳ್ಳಾರಿ– 583113

ಚಿಕ್ಕಬಳ್ಳಾಪುರದ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ತಮ್ಮ ‘ಭವಾನಿ’ ಸ್ಟುಡಿಯೊದಿಂದ, ಸಿನಿಮಾ ಸ್ಥಿರಚಿತ್ರಗಳಿಂದ ಪ್ರಸಿದ್ಧರು. ಎರಡೂವರೆ ದಶಕಗಳ ಕಾಲ ಅವರು ತೆಗೆದ ಸಿನಿಮಾ ಸಂಬಂಧಿ ಛಾಯಾಚಿತ್ರಗಳು ‘ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಸುಧಾ’ ಹಾಗೂ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಚಿತ್ರಗಳನ್ನು ತೆಗೆಯುತ್ತ ಕನ್ನಡ ನಟ ರಾಜ್ಕುಮಾರ್ ಅವರ ನಿಕಟ ಒಡನಾಟವನ್ನು ಇಟ್ಟುಕೊಂಡಿದ್ದ ಲಕ್ಷ್ಮೀನಾರಾಯಣ, ರಾಜ್ ಹಾಗೂ ಅವರ ಕುಟುಂಬದ ಸಾವಿರಾರು ಚಿತ್ರಗಳನ್ನು ತೆಗೆದಿದ್ದಾರೆ. ಅವರ ರಾಜ್ ಜೊತೆಗಿನ ಚಿತ್ರಯಾತ್ರೆಯನ್ನು ಪತ್ರಕರ್ತ ಶಶಿಧರ ಚಿತ್ರದುರ್ಗ ಇಲ್ಲಿ ನಿರೂಪಿಸಿದ್ದಾರೆ. ಅದಕ್ಕೂ ಮುಖ್ಯವಾಗಿ ಲಕ್ಷ್ಮೀನಾರಾಯಣ ಅವರ ಚಿತ್ರಗಳೇ ರಾಜ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಸಿನಿಮಾರಂಗದ ಕಥೆಯನ್ನು ಹೇಳುತ್ತವೆ.

ಲಕ್ಷ್ಮೀನಾರಾಯಣ ತೆಗೆದಿರುವುದು ಬಹುಪಾಲು ಕಪ್ಪು ಬಿಳುಪಿನ ಚಿತ್ರಗಳೇ. ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ತೆಗೆದ ಚಿತ್ರಗಳು ಇವಾದ್ದರಿಂದ ಸಿನಿಮಾ ಸ್ಟುಡಿಯೊ ಹಾಗೂ ಹೊರಾಂಗಣ ಸ್ಥಳಗಳು ಇಲ್ಲಿ ಮೂಡಿವೆ. ಮತ್ತು ಇಲ್ಲಿನ ಬಹುಪಾಲು ನಿರೂಪಣೆ ರಾಜ್ ಸಿನಿಮಾಗಳ ಚಿತ್ರೀಕರಣಕ್ಕೆ ಸಂಬಂಧಿಸಿದ್ದೇ ಆಗಿದೆ. ನೂರಾರು ಚಿತ್ರ ಗಳಿಂದ ಹಾಗೂ ಛಾಯಾಗ್ರಾಹಕ ಲಕ್ಷ್ಮೀನಾರಾಯಣ ಅವರ ನೆನಪನ್ನು ನಿರೂಪಿಸಿ ದಾಖಲಿಸುವುದರ ಮೂಲಕ ಶಶಿಧರ ಚಿತ್ರದುರ್ಗ ಕನ್ನಡ ಚಿತ್ರರಂಗದ ಇತಿಹಾಸಕ್ಕೆ ಅಪೂರ್ವ ನೆನಪಿನ ಛಾಯಾಸಂಪುಟವೊಂದನ್ನು ಜೋಡಿಸಿದ್ದಾರೆ.

ಬೀದಿ ಬೆಳಕಿನ ಕಂದೀಲು
ಲೇ: ಬಸವರಾಜ ಹೂಗಾರ, ಪು: 80; ಬೆ: ರೂ. 60, ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್ ಹಾಸ್ಟೆಲ್, ಗದಗ– 582101
ಕವಿ ಬಸವರಾಜ ಹೂಗಾರರು ತಮ್ಮ ಕೆಲವು ಚಿಂತನಪರ ಬರಹಗಳನ್ನು ಈ ಸಂಕಲನದಲ್ಲಿ ಒಟ್ಟಾಗಿ ಕೊಟ್ಟಿದ್ದಾರೆ. ದೀರ್ಘವಾಗಿ ಭಾಷಣಗಳ ರೀತಿಯ ಬರಹಗಳನ್ನು ಕೊಡದೆ ಸಂಗ್ರಹವಾಗಿ ತಮ್ಮ ಯೋಚನೆಗಳನ್ನು ದಾಖಲಿಸಿರುವುದು ಅವರ ಬರಹಗಳ ವೈಶಿಷ್ಟ್ಯ ಹಾಗೂ ಲಕ್ಷಣವಾಗಿದೆ. ಸಮಕಾಲೀನ ಆಗುಹೋಗುಗಳೇ ಈ ಬರಹಗಳ ವಸ್ತು, ವಿಷಯಗಳಾಗಿವೆ. ದಿನನಿತ್ಯ ನಮ್ಮನ್ನು ಬಿಡದೆ ಕಾಡುವ, ಎಲ್ಲಿ ಹೋದರೂ ತಾಕುವ ಸಂಗತಿಗಳು ಈ ಲೇಖನಗಳ ಕೇಂದ್ರದಲ್ಲಿವೆ. ಅದನ್ನು ಅರಿಯಲು ಮಾಡಿದ ಪ್ರಯತ್ನ ಈ ಸಂಕಲನ.

ಇಲ್ಲಿ ಶಿಕ್ಷಣ, ಕೃಷಿಯಿಂದ ಹಿಡಿದು, ಜಾತಿಪದ್ಧತಿ, ಹಳ್ಳಿ ನಗರ, ಉತ್ತರ ಕರ್ನಾಟಕದ ಜನರು ಗುಳೆ ಹೋಗುವುದು – ಹೀಗೆ ಅನೇಕ ವಿಷಯಗಳು ದಾಖಲಾಗಿವೆ. ಮನುಷ್ಯನ ಭ್ರಮೆಗಳನ್ನು ಸೀಳಿ ಸತ್ಯ ಏನು ಎಂಬುದನ್ನು ತೋರಲು ಈ ಬರಹಗಳು ಪ್ರಯತ್ನಿಸುತ್ತವೆ. ಇಲ್ಲಿನ ‘ಕನಸು ಕದಿಯುವ ಕ್ರಮ ಮತ್ತು ಆಕೆ’ ಎಂಬ ಲೇಖನ ಒಂದು ಕಥೆಯ ರೀತಿಯಲ್ಲಿ ಲೇಖಕ ಕಂಡುಕೊಂಡ ಸತ್ಯವನ್ನು ಮಂಡಿಸಿದೆ.

ಈ ಬಗೆಯ ಕನಸು–ವಾಸ್ತವದ ನಡುವೆ ತುಯ್ಯುವ ಅವರ ಬರಹ ಲೇಖಕರು ನಾಳೆ ಬರೆಯಲು ಯತ್ನಿಸುತ್ತಿರುವ ಬರಹವೊಂದರ ಪ್ರತಿನಿಧಿಯಂತಿದೆ. ಇಲ್ಲಿನ ಅನೇಕ ಬರಹಗಳು (ಉದಾ: ಬಾಹುಬಲಿ ಮತ್ತು ಡೋಲಿ) ಅವರ ಸತ್ಯದ ಹುಡುಕಾಟದ ಫಲವಾಗಿಯೇ ಮೂಡಿವೆ. ಅವರು ಕೇಳಿಕೊಳ್ಳುವ ಪ್ರಶ್ನೆಗಳು, ಕಾಣಿಸುವ ನೋಟಗಳು ನಾವೂ ಕೇಳಬಹುದಾದ ಪ್ರಶ್ನೆಗಳಾಗಿವೆ, ಒಳಗೊಳ್ಳಬಹುದಾದ ಒಳನೋಟಗಳಾಗಿವೆ.

ನಿರ್ಭಯ
ಭಗತ್ ಸಿಂಗ್ನ ಜೀವನ ಮತ್ತು ಹೋರಾಟ
ಲೇ: ಕುಲದೀಪ್ ನಯ್ಯರ್, ಕನ್ನಡಕ್ಕೆ: ಎಸ್. ದಿವಾಕರ್, ಪು: 210 ; ಬೆ: ರೂ. 150, ಪ್ರ: ವಸಂತ ಪ್ರಕಾಶನ, ನಂ. 360, 10ನೇ ‘ಬಿ’ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು– 560011

ಪತ್ರಕರ್ತ ಕುಲದೀಪ್ ನಯ್ಯರ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ನ ಜೀವನ ಚರಿತ್ರೆಯನ್ನು ಬಹುಕಾಲ ಸಂಶೋಧನೆ ನಡೆಸಿ, ಅಪೂರ್ವ ಮಾಹಿತಿಗಳೊಂದಿಗೆ ಬರೆದಿದ್ದಾರೆ. ಪ್ರಸ್ತುತ ಪುಸ್ತಕವನ್ನು ಅವನ ಅಧಿಕೃತ ಜೀವನ ಚರಿತ್ರೆ ಎನ್ನಬಹುದು. ಇದನ್ನು ಎಸ್. ದಿವಾಕರ್ ಕನ್ನಡಕ್ಕೆ ಅನುವಾದಿಸಿದ್ದು, ಈ ಕಥನ ‘ಮಯೂರ’ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರ ಗಮನ ಸೆಳೆದಿತ್ತು.

ಭಾರತದ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಕಾರಿಗಳ, ಹೋರಾಟಗಾರರ ಪಾಲಿಗೆ ನಾಯಕನಾಗಿದ್ದ ಭಗತ್ ಸಿಂಗ್ ಹಿಂಸೆಯಿಂದಲೇ ಬ್ರಿಟಿಷರನ್ನು ದೇಶದಿಂದ ತೊಲಗಿಸಬೇಕು ಎಂಬ ನಿಲುವಿನವನು. ಸ್ವಾತಂತ್ರ್ಯ ಹೋರಾಟದಲ್ಲಿ ಈಗಲೂ ರೋಮಾಂಚನಗೊಳಿಸುವ ಹೆಸರು ಭಗತ್ ಸಿಂಗ್ನದು. ಅದಕ್ಕೆ ಆತ ತನ್ನ 23 ವರ್ಷಗಳ ಸೀಮಿತ ಜೀವಿತಾವಧಿಯಲ್ಲಿ, ನೇಣುಗಂಬಕ್ಕೆ ಏರಿಸುವ ಮುನ್ನ ಬ್ರಿಟಿಷರಲ್ಲಿ ಹುಟ್ಟಿಸಿದ ನಡುಕ ಸಾಮಾನ್ಯವಾದುದೇನಲ್ಲ.

ಇಂಥ ಕ್ರಾಂತಿಕಾರಿ ಹೋರಾಟಗಾರನ ಬಗ್ಗೆ ಹಲವು ಮೂಲಕಗಳಿಂದ ದಾಖಲೆಗಳನ್ನು ಕಲೆಹಾಕಿ ಬರೆದಿರುವ ನಯ್ಯರ್, ಭಗತ್ಸಿಂಗ್ ಜೀವನ ಸಾಧನೆಯ ಅತ್ಯಂತ ಸಮೀಪದ ಚಿತ್ರಣವನ್ನು ಇಲ್ಲಿ ಕೊಟ್ಟಿದ್ದಾರೆ. ಎಸ್. ದಿವಾಕರ್ ಅವರ ಸರಳ, ಸುಲಲಿತ ಅನುವಾದದಲ್ಲಿ ಅದೀಗ ಕನ್ನಡಿಗರ ಕೈಗೆ ಸಿಗುವಂತಾಗಿದೆ. ಭಗತ್ನ ಈ ಜೀವನಚಿತ್ರವನ್ನು ಓದಿದರೆ ಆ ಅಸಾಮಾನ್ಯ ವ್ಯಕ್ತಿತ್ವದ ಬಗ್ಗೆ ಪ್ರೀತಿ, ಗೌರವ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.