ಬೆಂಗಳೂರು: ಹದಿನೈದು ವರ್ಷಗಳ ಬಳಿಕ ರಣಜಿ ಚಾಂಪಿಯನ್ ಆಗಿ ರುವ ಕರ್ನಾಟಕ ತಂಡದ ಆಟಗಾರ ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸನ್ಮಾನಿಸಿದರು. ಈಗಾಗಲೇ ಅವರು ತಂಡಕ್ಕೆ ₨ 1 ಕೋಟಿ ಬಹುಮಾನ ಪ್ರಕಟಿಸಿದ್ದರು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾದಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ನಾಯಕ ಆರ್. ವಿನಯ್ ಕುಮಾರ್ ಸೇರಿದಂತೆ ಎಲ್ಲಾ ಆಟಗಾರರು ಹಾಗೂ ಸಹಾ ಯಕ ಸಿಬ್ಬಂದಿ ಪಾಲ್ಗೊಂಡಿದ್ದರು. ಜೊತೆಗೆ ಕೆಎಸ್ಸಿಎ ಅಧ್ಯಕ್ಷ ಪಿ.ಆರ್.ಅಶೋಕಾನಂದ, ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಖಜಾಂಚಿ ದಯಾನಂದ ಪೈ ಇದ್ದರು.

ಸಿಎಂಗೆ ಧನ್ಯವಾದ ಹೇಳಿದ ನಾಯಕ ವಿನಯ್, ಸಾಧಕ ಆಟಗಾ ರರಿಗೆ ಬಿಡಿಎ ವತಿಯಿಂದ ನಿವೇಶನ ನೀಡುವಂತೆ ಮನವಿ ಮಾಡಿದರು. ಬ್ರಿಜೇಶ್ ಪಟೇಲ್ ಅವರು ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಪಂದ್ಯ ಗಳ ಆಯೋಜನೆ ವೇಳೆ ವಿಧಿಸುವ ಮನರಂಜನಾ ತೆರಿಗೆಯನ್ನು ಕಡಿಮೆ ಮಾಡುವಂತೆ ಸಿಎಂ ಬಳಿ ಕೋರಿದರು. ಈ ಎರಡೂ ಮನವಿಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.