ಮಂಗಳವಾರ, ಮೇ 17, 2022
27 °C

ಕ್ರಿಕೆಟ್: ಅಲ್ಪ ಮೊತ್ತಕ್ಕೆ ಕುಸಿದ ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುದಾಬಿ (ಎಎಫ್‌ಪಿ): ಜುನೈದ್ ಖಾನ್ (38ಕ್ಕೆ5) ಅವರ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ನಲುಗಿನ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದಾರೆ.ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಪಾಕಿಸ್ತಾನ ತಂಡ ಲಂಕಾವನ್ನು ಕೇವಲ 197 ರನ್‌ಗೆ ಕಟ್ಟಿ ಹಾಕಿತು. ಮಧ್ಯಮ ಕ್ರಮಾಂಕದ ಎಂಜಿಲೊ ಮ್ಯಾಥ್ಯೂಸ್ (ಔಟಾಗದೆ 52; 99ಎಸೆತ, 4ಬೌಂ,1ಸಿಕ್ಸರ್) ಗಳಿಸಿ ಲಂಕಾ ತಂಡಕ್ಕೆ ನೆರವಾದರು. ಇಲ್ಲವಾದರೆ  150ರ ಗಡಿ ಮುಟ್ಟುವುದು ಕಷ್ಟವಾಗುತ್ತಿತ್ತು.ಸಂಕ್ಷಿಪ್ತ ಸ್ಕೋರು:  ಶ್ರೀಲಂಕಾ 74.1 ಓವರ್‌ಗಳಲ್ಲಿ 197 (ತರಂಗ ಪರಣವಿತನ 37, ಮಾಹೇಲ ಜಯವರ್ಧನೆ 28, ತಿಲಕರತ್ನೆ ದಿಲ್ಯಾನ್ 19, ಎಂಜಿಲೊ ಮ್ಯಾಥ್ಯೂಸ್ ಔಟಾಗದೆ 52; ಉಮರ್ ಗುಲ್ 37ಕ್ಕೆ2, ಜುನೈದ್ ಖಾನ್ 38ಕ್ಕೆ5, ಸಯೀದ್ ಅಜ್ಮಲ್ 56ಕ್ಕೆ2). ಪಾಕಿಸ್ತಾನ 8 ಒವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28. (ಮೊಹಮ್ಮದ್ ಹಫೀಜ್ ಬ್ಯಾಟಿಂಗ್ 17, ತೌಫೀಕ್ ಉಮರ್ ಬ್ಯಾಟಿಂಗ್ 8).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.