ಭಾನುವಾರ, ಮಾರ್ಚ್ 26, 2023
23 °C

ಕ್ರಿಕೆಟ್: ಆಸ್ಟ್ರೇಲಿಯಾದ ಸಾಧಾರಣ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್ (ಎಎಫ್‌ಪಿ): ತಲಾ ಮೂರು ವಿಕೆಟ್ ಕೆಡವಿದ ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರಿಸ್ ಟ್ರೆಮ್ಲೆಟ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡದವರು ಇಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ   ‘ಆಷ್ಯಸ್’ ಸರಣಿಯ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 268 ರನ್‌ಗಳ ಸಾಧಾರಣ ಮೊತ್ತಕ್ಕೆ ಕುಸಿದರು.ಕಾಂಗರೂಗಳ ನಾಡಿನವರು ಮುಂದಿಟ್ಟ ಮೊದಲ ಇನಿಂಗ್ಸ್‌ನ ಸಾಧಾರಣ ಮೊತ್ತವನ್ನು ಚುಕ್ತಾ ಮಾಡಿ, ಬೇಗ ಇನಿಂಗ್ಸ್ ಮುನ್ನಡೆ ಪಡೆಯುವ ಉತ್ಸಾಹದಲ್ಲಿದೆ ಇಂಗ್ಲೆಂಡ್. ಗುರುವಾರ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ನವರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆಯೇ 29 ರನ್ ಕಲೆಹಾಕಿದರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 70.3 ಓವರುಗಳಲ್ಲಿ 268 (ಮೈಕ್ ಹಸ್ಸಿ 61, ಬ್ರಾಡ್ ಹಡ್ಡೀನ್ 53, ಮಿಷೆಲ್ ಜಾನ್ಸನ್ 62; ಜೇಮ್ಸ್ ಆ್ಯಂಡರ್ಸನ್ 61ಕ್ಕೆ3, ಕ್ರಿಸ್ ಟ್ರೆಮ್ಲೆಟ್ 63ಕ್ಕೆ3); ಇಂಗ್ಲೆಂಡ್: ಮೊದಲ ಇನಿಂಗ್ಸ್ 12 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 29 (ಆ್ಯಂಡ್ರ್ಯೂ ಸ್ಟ್ರಾಸ್ 12, ಆಲಿಸ್ಟರ್ ಕುಕ್ 12).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.