ಮೀರ್ಪುರ: ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಪಂದ್ಯ ಎಂಬಕ್ಕೆ ಕಾರಣಕ್ಕೆ ಪಾಕಿಸ್ತಾನದಲ್ಲಿ ಭಾನುವಾರವಿಡೀ ವಿದ್ಯುತ್ ಕಡಿತ ಮಾಡದಂತೆ ಸೂಚಿಸಲಾಗಿತ್ತು. ಆದರೆ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ `ಪ್ರಕಾಶಮಾನವಾಗಿ~ ಹೊಳೆದಿದ್ದು ವಿರಾಟ್ ಕೊಹ್ಲಿ!

ವಿರಾಟ್ (183; 148 ಎ, 22 ಬೌಂ. 1ಸಿ.) ಘರ್ಜಿಸಿದ ರೀತಿಗೆ ಪಾಕ್ ಸೋಲಿನ ಹೊಳೆಯಲ್ಲಿ ಕೊಚ್ಚಿ ಹೋಯಿತು. ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋತಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕೆಂದು ಕಾಯ್ದಿದ್ದ ಈ ತಂಡದವರು ಮತ್ತೊಂದು ಆಘಾತಕ್ಕೆ ಒಳಗಾಗಬೇಕಾಯಿತು.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಈ ಪಂದ್ಯದಲ್ಲಿ ಪಾಕ್ ಎದುರು ಭಾರತ ಆರು ವಿಕೆಟ್ಗಳ ಜಯಭೇರಿ ಮೊಳಗಿಸಿತು. ಮಿಸ್ಬಾ ಉಲ್ ಹಕ್ ಬಳಗ ನೀಡಿದ 330 ರನ್ಗಳ ಗುರಿಯನ್ನು ದೋನಿ ಪಡೆ 47.5 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ತಲುಪಿತು.

ಇದು ಭಾರತ ಮಟ್ಟಿಗೆ ದಾಖಲೆ ಕೂಡ. ಏಕೆಂದರೆ 2002ರಲ್ಲಿ ನಾಟ್ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನೀಡಿದ್ದ 226 ರನ್ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದ್ದು ಇದುವರೆಗಿನ ದಾಖಲೆ ಆಗಿತ್ತು. 1998ರಲ್ಲಿ ಕೂಡ ಪಾಕ್ ನೀಡಿದ್ದ 317 ರನ್ಗಳ ಗುರಿಯನ್ನು ಭಾರತ ಯಶಸ್ವಿಯಾಗಿ ದಾಟಿತ್ತು.

ಅತಿ ಹೆಚ್ಚು ರನ್ಗಳ ಬೆನ್ನಟ್ಟಿ ಗೆಲುವು ಸಾಧಿಸಿದ ವಿಶ್ವದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿದೆ. 2005-06ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಆಸ್ಟ್ರೇಲಿಯಾ ನೀಡಿದ್ದ 437 ರನ್ಗಳ ಗುರಿ ಬೆನ್ನಟ್ಟಿ ಯಶಸ್ವಿಯಾಗಿತ್ತು.

ಸಾಂಪ್ರದಾಯಿಕ ಎದುರಾಳಿಗಳು ಎಂಬ ಕಾರಣ ಭಾರತ-ಪಾಕ್ ನಡುವಿನ ಈ ಪಂದ್ಯ ತುಂಬಾ ಕುತೂಹಲ ಕೆರಳಿಸಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ಕೊಹ್ಲಿ ಆಡಿದ ರೀತಿ ಪಾಕ್ ಪಾಲಿಗೆ ಮುಳ್ಳಾಗಿ ಪರಿಣಮಿಸಿತು. ಸಚಿನ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗ ಕೊಹ್ಲಿ ಒಂದು ವರ್ಷದ ಮಗು! ಆದರೆ ಸಚಿನ್ ಅವರನ್ನು ಮೀರಿಸುವ ಇನಿಂಗ್ಸ್ ಕಟ್ಟಿದರು.

ಸಚಿನ್ ಜೊತೆ ಎರಡನೇ ವಿಕೆಟ್ಗೆ 133 ರನ್ ಹಾಗೂ ರೋಹಿತ್ ಶರ್ಮ ಜೊತೆ ಮೂರನೇ ವಿಕೆಟ್ಗೆ 172 ರನ್ ಸೇರಿಸಿದ ವಿರಾಟ್ ತಮ್ಮ 11ನೇ ಶತಕ ಗಳಿಸಿದರು. ಈ ಮೂಲಕ ಪಾಕ್ ಗೆಲುವಿನ ಕನಸು ಕಮರಿ ಹೋಯಿತು.

18 ದಿನಗಳ ಹಿಂದೆಯಷ್ಟೇ ಭಾರತ ತಂಡ ಆಸ್ಟ್ರೇಲಿಯಾದ ಹೋಬರ್ಟ್ನಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 321 ರನ್ಗಳ ಗುರಿಯನ್ನು ಕೇವಲ 36.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತ್ತು. ಈ ಪಂದ್ಯದಲ್ಲಿ ವಿರಾಟ್ 86 ಎಸೆತಗಳಲ್ಲಿ ಅಜೇಯ 133 ರನ್ ಗಳಿಸಿದ್ದರು.

ಪಾಕ್ ಎದುರಿನ ಈ ಜಯದ ಮೂಲಕ ಭಾರತ ತಂಡ ಈ ಟೂರ್ನಿಯ ಫೈನಲ್ನಲ್ಲಿ ಆಡುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಎಂದಿನಂತೆ ಮತ್ತೊಂದು ತಂಡದ ಫಲಿತಾಂಶದ ಮೇಲೆ ದೋನಿ ಬಳಗದ ಭವಿಷ್ಯ ಅವಲಂಬಿತವಾಗಿದೆ.

ಏಕೆಂದರೆ ಮಂಗಳವಾರ ನಡೆಯಲಿರುವ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದರೆ ಭಾರತದ ಆಸೆ ನುಚ್ಚುನೂರಾಗಲಿದೆ. ಕಾರಣನ ಲೀಗ್ ಹಂತದ ಮುಖಾಮುಖಿಯಲ್ಲಿ ಬಾಂಗ್ಲಾ ಎದುರು ಭಾರತ ಸೋಲು ಕಂಡಿತ್ತು. ಪಾಕ್ ತಂಡ ಈಗಾಗಲೇ ಫೈನಲ್ ಪ್ರವೇಶಿಸಿದೆ.

ಈ ಪಂದ್ಯದಲ್ಲಿ ಪಾಕ್ ನೀಡಿದ್ದ ಬೃಹತ್ ಗುರಿ ಎದುರು ಭಾರತ ಮೊದಲ ಓವರ್ನ ಎರಡನೇ ಎಸೆತದಲ್ಲಿ ಗೌತಮ್ ಗಂಭೀರ್ ವಿಕೆಟ್ ಕಳೆದುಕೊಂಡಿತು. ಆಗ ಜೊತೆಗೂಡಿದ ಸಚಿನ್ ಹಾಗೂ ಕೊಹ್ಲಿ ಪೈಪೋಟಿಯ ಮೇಲೆ ರನ್ ಗಳಿಸ ತೊಡಗಿದರು. ಅದರಲ್ಲೂ ಐಜಾಜ್ ಚೀಮಾ ಎಸೆತದಲ್ಲಿ ಸಚಿನ್ ಅಪ್ಪರ್ ಕಟ್ ಮೂಲಕ ಸಿಕ್ಸರ್ ಎತ್ತಿದ್ದು ಅಮೋಘ ಕ್ಷಣ. ಸಚಿನ್ ಔಟಾದ ಬಳಿಕ ಬಂದ ರೋಹಿತ್ ಕೂಡ ಗುಡುಗಿದರು. ಕೊನೆಯಲ್ಲಿ ಬೌಂಡರಿ ಮೂಲಕ ನಾಯಕ ದೋನಿ ಭಾರತದ ಗೆಲುವನ್ನು ಖಚಿತಪಡಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಪಾಕ್ ಅತ್ಯುತ್ತಮ ಪ್ರದರ್ಶನವನ್ನೇ ತೋರಿತು. ಏಕೆಂದರೆ ಈ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಮೊಹಮ್ಮದ್ ಹಫೀಜ್ (105) ಹಾಗೂ ನಸೀರ್ ಜೆಮ್ಷೆಡ್ (112) ಮೊದಲ ವಿಕೆಟ್ಗೆ 224 ರನ್ ಸೇರಿಸಿದರು. ನಂತರ ಯೂನಿಸ್ ಖಾನ್ (52; 34 ಎಸೆತ, 6 ಬೌಂ.) ಸ್ಕೋರ್ ಹೆಚ್ಚಿಸಿದರು. ಈ ಕಾರಣ ಪಾಕ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಲು ಸಾಧ್ಯವಾಯಿತು.

ಸ್ಕೋರ್ ವಿವರ:

ಪಾಕಿಸ್ತಾನ 50 ಓವರ್ಗಳಲ್ಲಿ 6 ವಿಕೆಟ್ಗೆ 329
ಮೊಹಮ್ಮದ್ ಹಫೀಜ್ ಎಲ್ಬಿಡಬ್ಲ್ಯು ಬಿ ದಿಂಡಾ 105
ನಾಸೀರ್ ಜಮ್ಶೇದ್ ಸಿ ಇರ್ಫಾನ್ ಪಠಾಣ್ ಬಿ ಅಶ್ವಿನ್ 112
ಉಮರ್ ಅಕ್ಮಲ್ ಸಿ ಗೌತಮ್ ಗಂಭೀರ್ ಬಿ ಪ್ರವೀಣ್ 28
ಯೂನಿಸ್ ಖಾನ್ ಸಿ ಸುರೇಶ್ ರೈನಾ ಬಿ ಪ್ರವೀಣ್ 52
ಶಾಹಿದ್ ಅಫ್ರಿದಿ ಸಿ ವಿರಾಟ್ ಕೊಹ್ಲಿ ಬಿ ಇರ್ಫಾನ್ ಪಠಾಣ್ 09
ಹಮ್ಮಾದ್ ಅಜಾಮ್ ಸಿ ವಿರಾಟ್ ಕೊಹ್ಲಿ ಬಿ ದಿಂಡಾ 04
ಮಿಸ್ಬಾ ಉಲ್ ಹಕ್ ಔಟಾಗದೇ 04
ಉಮರ್ ಗುಲ್ ಔಟಾಗದೇ 00
ಇತರೆ: ಬೈ-1, ಲೆಗ್ ಬೈ-3, ವೈಡ್-10, ನೋ ಬಾಲ್ 1 15
ವಿಕೆಟ್ ಪತನ: 1-224 (ಜಮ್ಶೇದ್; 35.5), 2-225 (ಹಫೀಜ್; 36.2), 3-273 (ಅಕ್ಮಲ್; 42.5), 4-313 (ಅಫ್ರಿದಿ; 47.4), 5-323 (ಯೂನಿಸ್; 47.4), 6-326 (ಅಜಾಮ್; 49.3).
ಬೌಲಿಂಗ್ ವಿವರ: ಪ್ರವೀಣ್ ಕುಮಾರ್ 10-0-77-2, ಇರ್ಫಾನ್ ಪಠಾಣ್ 10-0-69-1, ಅಶೋಕ್ ದಿಂಡಾ 8-0-47-2, ಸುರೇಶ್ ರೈನಾ 2.2-0-15-0, ರೋಹಿತ್ ಶರ್ಮ 3-0-19-0, ಯೂಸುಫ್ ಪಠಾಣ್ 5-0-30-0, ಆರ್. ಅಶ್ವಿನ್ 10-0-56-1, ಸಚಿನ್ ತೆಂಡೂಲ್ಕರ್ 1.4-0-12-0.

ಭಾರತ 47.5 ಓವರ್ಗಳಲ್ಲಿ 4 ವಿಕೆಟ್ಗೆ 330
ಗೌತಮ್ ಗಂಭೀರ್ ಎಲ್ಬಿಡಬ್ಲ್ಯು ಬಿ ಹಫೀಜ್ 00
ಸಚಿನ್ ತೆಂಡೂಲ್ಕರ್ ಸಿ ಯೂಸುಫ್ ಖಾನ್ ಬಿ ಅಜ್ಮಲ್ 52
ವಿರಾಟ್ ಕೊಹ್ಲಿ ಸಿ ಮೊಹಮ್ಮದ್ ಹಫೀಜ್ ಬಿ ಗುಲ್ 183
ರೋಹಿತ್ ಶರ್ಮ ಸಿ ಶಾಹೀದ್ ಅಫ್ರಿದಿ ಬಿ ಗುಲ್ 68
ಸುರೇಶ್ ರೈನಾ ಔಟಾಗದೇ 12
ಮಹೇಂದ್ರ ಸಿಂಗ್ ದೋನಿ ಔಟಾಗದೇ 04
ಇತರೆ: ಬೈ-5, ಲೆಗ್ ಬೈ-1, ವೈಡ್-4, ನೋ ಬಾಲ್-1 11
ವಿಕೆಟ್ ಪತನ: 1-0 (ಗಂಭೀರ್; 0.2), 2-133 (ಸಚಿನ್; 19.3), 3-305 (ರೋಹಿತ್; 45.5), 4-318 (ಕೊಹ್ಲಿ; 47.1).
ಬೌಲಿಂಗ್ ವಿವರ: ಮೊಹಮ್ಮದ್ ಹಫೀಜ್ 9-0-42-1, ಉಮರ್ ಗುಲ್ 8.5-0-65-2, ಐಜಾಜ್ ಚೀಮಾ 8-0-60-0, ಸಯೀದ್ ಅಜ್ಮಲ್ 9-0-49-1, ಶಾಹಿದ್ ಅಫ್ರಿದಿ 9-0-58-0, ವಹಾಬ್ ರಿಯಾಜ್ 4-0-50-0.
ಫಲಿತಾಂಶ: ಭಾರತಕ್ಕೆ 6 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.