`ಕ್ರೀಡೆ ಎಂದರೆ ಹಾಗೇ ಮನಸ್ಸಿನೊಳಗಿನ ಆಸೆ, ಆಕಾಂಕ್ಷೆಗಳೆಲ್ಲ ಸಾಧನೆಯ ರೂಪ ಪಡೆದು ಗುರಿ ಮುಟ್ಟುವ ತನಕ ನಿಲ್ಲದೇ ಸಾಧಕನ ಕೈಯಲ್ಲಿ ಪಳಗುವಂಥ್ದ್ದದು. ಅದೊಂದು ಉತ್ಸಾಹ, ಸ್ಫೂರ್ತಿ.

ಪ್ರತಿಕ್ಷಣವೂ ಏನಾದರೂ ಮಾಡಬೇಕು ಎಂದು ತುಡಿಯುವ ಮನಸ್ಸು ಕ್ರೀಡಾಪಟುವದು. ಸೋಲು ಗೆಲುವನ್ನು ನಾವು ತೆಗೆದುಕೊಂಡಷ್ಟು ಸಲೀಸಾಗಿ ಬೇರೆ ಯಾರೂ ತೆಗೆದುಕೊಳ್ಳಲಾರರು. ಕೇವಲ ಶಿಕ್ಷಣ ಮಾತ್ರ ಮುಖ್ಯವಲ್ಲ. ಅದರ ಜೊತೆಗೆ ಕ್ರೀಡೆಯೂ ಮಕ್ಕಳಿಗೆ ಮುಖ್ಯ~ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಅಂಥೋನಿ. ಕ್ರೀಡೆಗಾಗಿ ಬದುಕನ್ನು ಸವೆಸಿ ಅದರಲ್ಲಿ ಸಿಗುವ ಖುಷಿಯೊಂದಿಗೆ ಉಳಿದ ಬದುಕನ್ನು ಸಾಗಿಸುವ ಭರವಸೆಯ ಮಿಂಚು ಅವರ ಕಣ್ಣಲ್ಲಿತ್ತು.

ಕ್ರೀಡೆ ಎಂದರೆ ಮೂಗು ಮುರಿಯುವ ಮಂದಿಯೆ ಹೆಚ್ಚು. ಆದರೆ, ಇವರ ಕುಟುಂಬ ಎಲ್ಲದರಕ್ಕಿಂತ ವಿಶೇಷ. ಇಲ್ಲಿ ಪ್ರತಿಯೊಬ್ಬರೂ ಕ್ರೀಡಾಪಟುಗಳೇ. ಹೆಸರು ಎಸ್.ಎಲ್.ಅಂಥೋನಿ. ವಯಸ್ಸು ಐವತ್ತೊಂಬತ್ತು ದಾಟಿದರೂ ಬತ್ತದ ಉತ್ಸಾಹದ ಚಿಲುಮೆ. ಫುಟ್ಬಾಲ್, ಹಾಕಿ, ಅಥ್ಲೀಟ್ ಮತ್ತು ಕ್ರಿಕೆಟ್ ಆಟಗಾರ. ಜೊತೆಗೆ ಫುಟ್ಬಾಲ್ ಕೋಚ್, ಲಾಂಗ್ ಜಂಪ್, 100 ಮೀಟರ್ ಓಟ ಮತ್ತು ರಿಲೇಯಲ್ಲಿ ಹಲವು ಪದಕಗಳನ್ನು ತನ್ನೊಡಲಿಗೆ ಹಾಕಿಕೊಂಡಿರುವ ಪ್ರತಿಭಾವಂತ.

ಇವರ ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ದೇಶದಲ್ಲಿ ನಡೆದಿರುವ ಹಲವು `ಟ್ರ್ಯಾಕ್ ಅಂಡ್ ಫೀಲ್ಡ್~ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರು 500ಕ್ಕಿಂತ ಹೆಚ್ಚು ಪದಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹೀಗೆ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡು ಇದೇ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿಕೊಂಡವರು.

ಇದು ಕೇವಲ ಒಬ್ಬ ಕ್ರೀಡಾಪಟುವಿನ ಪರಿಚಯವಲ್ಲ. ಅವರ ಕುಟುಂಬದಲ್ಲಿ ಕ್ರೀಡೆ ಮತ್ತು ಹಾಡುಗಾರಿಕೆ ರಕ್ತಗತವಾಗಿ ಬಂದು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.
ಇವರ ಸಾಹಸಗಾಥೆಗಳು ಕೇವಲ ಕ್ರೀಡಾ ಲೋಕಕ್ಕೆ ಮಾತ್ರ ಸೀಮಿತವಾಗಿಲ್ಲ, ಗಾಯನದಲ್ಲೂ ಇವರು ಗಿನ್ನಿಸ್ ದಾಖಲೆ ಮಾಡಿದ್ದಾರೆ. 40 ಗಂಟೆಗಳ ಕಾಲ `ಕೊಂಕಣಿ ನಿರಂತರಿ~ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಅವರ ಪತ್ನಿ ವೀರಾ ಕೂಡ ಇದರಲ್ಲಿ ಹಾಡಿದ್ದಾರೆ. ಇದು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.ಇವರ ಮಕ್ಕಳು ತಂದೆಯ ಹಾದಿಯನ್ನೇ ಹಿಡಿದವರು. ಮಗ ಅನೂಪ್ ತಂದೆಯ ಗರಡಿಯಲ್ಲೇ ಪಳಗಿದವರು. ಅಪ್ಪನೇ ಇವರಿಗೆ ಫುಟ್ಬಾಲ್ ಮತ್ತು ಹಾಕಿ ಕೋಚ್. ವಿಶೇಷ ಅಂದರೆ ಒಂದೇ ತಂಡಕ್ಕೆ ಜೊತೆಯಾಗಿ ತಂದೆ ಮಕ್ಕಳಿಬ್ಬರೂ ಫುಟ್ಬಾಲ್ ಆಡಿದವರು. ಮತ್ತೆ ಹಲವು ಸಲ ಮುಖಾಮುಖಿಯಾಗಿ ಹಾಕಿ ಆಡಿದವರು.

ಸ್ಪರ್ಧೆಯ ಸಮಯ ನಮ್ಮಿಬ್ಬರ ಮಧ್ಯೆ ಕೇವಲ ಆಟಗಾರರ ಹಣಾಹಣಿ ಇದ್ದಿತೆ ವಿನಃ ಸಂಬಂಧ ಯಾವತ್ತೂ ಅಡ್ಡ ಬಂದಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅನೂಪ್ ಅಂತರರಾಷ್ಟ್ರೀಯ ಹಾಕಿಪಟು, ಭಾರತ ತಂಡವನ್ನು ಪ್ರತಿನಿಧಿಸಿದವರು. ಫ್ರಾನ್ಸ್ ಕ್ಲಬ್ಗೆ ಆಡಿರುವ ಇವರು ಸದ್ಯ ಹಾಕಿ ವಿಶ್ವ ಸರಣಿಯಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿದ್ದಾರೆ.
ಇವರ ಇಬ್ಬರೂ ಹೆಣ್ಣು ಮಕ್ಕಳಾದ ಶಿಲ್ಪಾ, ಸ್ಮಿತಾಗೂ ಅಪ್ಪನ ಸಹಕಾರ ಸಿಕ್ಕಿದೆ. ಸ್ಮಿತಾ ರಾಜ್ಯಮಟ್ಟದಲ್ಲಿ ಹಾಕಿ ಆಡಿದ್ದಷ್ಟೇ ಅಲ್ಲ, ದೀಪಿಕಾ ಪಡುಕೋಣೆ ಜೊತೆ ಮಾಡೆಲಿಂಗ್ ಕ್ಷೇತ್ರದಲ್ಲೂ ಕಾಣಿಸಿಕೊಂಡವರು. ಮಿಸ್ ಬೆಂಗಳೂರು ಅರ್ಥ್ ಪ್ರಶಸ್ತಿಗೆ ಭಾಜನರಾಗಿರುವ ಇವರು ಸದ್ಯ ಗಗನಸಖಿ. ಶಿಲ್ಪಾ ಸಹ ಫುಟ್ಬಾಲ್ ಕ್ರೀಡಾಪಟು.

ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತು ನನ್ನ ಪಾಲಿಗೂ ಸತ್ಯವಾಗಿದೆ, ಪತ್ನಿ ವೀರಾ ನನ್ನೆಲ್ಲಾ ಸಾಧನೆಗೆ ಸ್ಫೂರ್ತಿ ಎಂದು ಹೇಳುತ್ತಾರೆ ಅಂಥೋನಿ.

ಸದ್ಯ ಮೈಕೋದ ಬಾಷ್ನಲ್ಲಿ ಕೆಲಸ ಮಾಡುವ ಇವರು, ಅಲ್ಲಿಯೂ ಸಹ ಕೋಚಿಂಗ್ ಮುಂದುವರೆಸಿದ್ದಾರೆ. ತಮ್ಮದೇ ಆದ ರಾಬಿನ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿಯಾಗಿರುವ ಇವರು ಹಲವು ಗ್ರಾಮೀಣ ಹಾಗೂ ಬಡ ಕ್ರೀಡಾಪಟುಗಳಿಗೆ ತರಬೇತಿ ಕೊಡುವ ಕೆಲಸ ನಿರ್ವಹಿಸುತ್ತಿದ್ದಾರೆ.

ಇವರ ಕಣ್ಣಲ್ಲಿರುವ ಆತ್ಮವಿಶ್ವಾಸ, ಕಟ್ಟು ಮಸ್ತಾದ ದೇಹ, ಪ್ರತಿನಿತ್ಯ ಅವರು ಮಾಡುವ ಸಾಮಾಜಿಕ ಕಾರ್ಯಗಳು, ಅವರ ಸೃಜನಶೀಲತೆ ಯುವಜನತೆಯನ್ನು ನಾಚಿಸುತ್ತದೆ. ಸದಾ ಹೊಸತನಕ್ಕೆ ತುಡಿಯುವ ಮನಸ್ಸು ಇವರದ್ದು.

ಅಂಥೋನಿ ತಮ್ಮ ಮನಸ್ಸಲ್ಲಿ ಕ್ರೀಡೆಯ ಕನಸು ಬಿತ್ತಿದ ಗೆಳೆಯ ಎನ್.ಸೋಮ ಅವರನ್ನು ಮರೆಯದೇ ನೆನೆಯುತ್ತಾರೆ. ಸಾಧಕನಿಗೆ ದಣಿವಿಲ್ಲ ಎಂಬಂತೆ ಇನ್ನೂ ಏನಾದರೂ ಮಾಡಬೇಕು ಎಂಬ ಕನಸನ್ನು ಕಣ್ಣಲ್ಲಿ ಕಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.