ಬೆಂಗಳೂರು: ದೇಶದಲ್ಲಿ ಕ್ರೀಡೆಗಳನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಭಿಪ್ರಾಯಪಟ್ಟರು.

‘ಟ್ರೇಡ್ ವಿಷನ್ ಇಂಡಿಯಾ’ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಹೌಸಾಟ್’ ಸಂಗೀತ ಸಿ.ಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಬೇಕಾದರೆ ವೃತ್ತಿಯನ್ನು ಕೈಬಿಡಬೇಕಾಗುತ್ತದೆ. ದೇಶದಲ್ಲಿ ಇಂದಿಗೂ ಎರಡನೇ ದರ್ಜೆಯಲ್ಲಿ ಉಳಿದಿರುವ ಕ್ರೀಡೆಯನ್ನು ಹವ್ಯಾಸವಾಗಿ ಮಾತ್ರ ಸ್ವೀಕರಿಸಲು ಸಾಧ್ಯ. ಕ್ರೀಡೆಗೆ ಪೂರಕ ವಾತಾವರಣ ಇಲ್ಲದಿರುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ಭಾರತ ತೃತೀಯ ದರ್ಜೆಯ ರಾಷ್ಟ್ರವಾಗಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮಾಜಿ ಕ್ರಿಕೆಟಿಗ ಕೆ.ಎಸ್.ವಿಶ್ವನಾಥ್, ಚಿಂತಕ ಡಾ.ಗುರುರಾಜ ಕರ್ಜಗಿ ಕಾರ್ಯಕ್ರಮದ ಆಯೋಜಕರಾದ ಸತ್ಯೇಶ್.ಎನ್.ಬೆಳ್ಳೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.