ಗುರುವಾರ , ಜೂನ್ 17, 2021
29 °C

ಕ್ರೀಡೆ ಉತ್ತಮ ಆರೋಗ್ಯಕ್ಕೆ ನಾಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿ ನಿರೋಗಿಯಾಗಬಲ್ಲ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಂ.ಸತೀಶ ಅಭಿಪ್ರಾಯ ಪಟ್ಟರು. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಕಾಲೇಜುವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಬೀದರ್ ವಲಯ ಮಟ್ಟದ ವಾಲಿಬಾಲ್ ಸ್ಪರ್ಧೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.  ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಪಠ್ಯ ಶಿಕ್ಷಣದ ಜತೆಯಲ್ಲಿ ಕ್ರೀಡೆ, ಚಿತ್ರಕಲೆ, ಸಂಗೀತ ಸಾಹಿತ್ಯ ಮೊದಲಾದ ಕಲೆಗಳನ್ನು ಆಸಕ್ತಿಯಿಂದ ಕಲಿತು ಸ್ಪರ್ಧೆಗಳಲ್ಲಿ ಭಾಗವಹಿಸುವ ಪರಿಪಾಠ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಮಾತನಾಡಿ, ಕ್ರೀಡೆಯಲ್ಲಿ ಹಲವು ತಂಡಗಳು ಭಾಗವಹಿಸಿದರೂ ಗೆಲುವು ಮಾತ್ರ ಒಬ್ಬರಿಗೆ ಎಂಬ ವಿಷಯ ಎಲ್ಲರಿಗೂ ತಿಳಿದದ್ದೆ. ಗೆದ್ದ ವ್ಯಕ್ತಿ ಇಷ್ಟಕ್ಕೆ ಎಲ್ಲವನ್ನು ಸಾಧಿಸಿದೆ ಎಂದು ಅಹಂಕಾರ ಪಡಬಾರದು ಎಂದು ಹೇಳಿದರು. ಎನ್ನೆಸ್ಸೆಸ್ ಶಿಬಿರಾಧಿಕಾರಿ ಡಾ.ವಿದ್ಯಾ ಪಾಟೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಯಕುಮಾರ ಹುಮನಾಬಾದ್ ಸರ್ಕಾರಿ ಪದವಿ ಕಾಲೇಜು ಪಠ್ಯ ವಿಷಯ ಮಾತ್ರ ಅಲ್ಲ, ಕ್ಷೇತ್ರಗಳಲ್ಲಿಯೂ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾದರಿ ಮಾಡುವ ಉ್ದ್ದದೇಶ ಹೊಂದಿದ್ದು, ಪಾಲಕರು, ಸಾರ್ವಜನಿಕರು ಸಹಕರಿಸಿದಲ್ಲಿ ಖಂಡಿತ ಯಶಸ್ಸು ಕಾಣುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಆರ್.ಎಚ್,ಘಾಳೆ, ಊರ್ವಶಿ, ಡಾ.ಸಂಜೀವಕುಮಾರ ಮೊದಲಾದವರು ಇದ್ದರು. ಬೀದರ್ ಮತ್ತು ಹುಮನಾಬಾದ್‌ನ ಎರಡು ತಂಡಗಳು, ಭಾಲ್ಕಿ, ಮನ್ನಳ್ಳಿಗಳ ತಲಾ ಒಂದು ತಂಡದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಾ.ನಾಗಪ್ಪ ಗೋಗಿ ಸ್ವಾಗತಿಸಿ, ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.