ಬುಧವಾರ, ಮೇ 12, 2021
26 °C

ಕ್ರೀಡೆ ಚುಟುಕು ಗುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್: ಭಾರತಕ್ಕೆ ಜಯ

ನವದೆಹಲಿ (ಪಿಟಿಐ):
ಸಸ್ಮಿತಾ ಮಲಿಕ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ಭಾರತ ಮಹಿಳಾ ತಂಡದವರು ಪ್ರದರ್ಶನ ಫುಟ್‌ಬಾಲ್ ಪಂದ್ಯದಲ್ಲಿ ಬಹರೇನ್ ವಿರುದ್ಧ ಜಯ ಪಡೆದರು.ಮನಾಮದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಗೆಲುವು ಸಾಧಿಸಿತು. ತಂಡದ ನಾಯಕಿ ಸಸ್ಮಿತಾ ಮೂರು ಹಾಗೂ 35ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಬಹರೇನ್ 36ನೇ ನಿಮಿಷದಲ್ಲಿ ಗೋಲು ಗಳಿಸಿ ಮರುಹೋರಾಟದ ಸೂಚನೆ ನೀಡಿತಾದರೂ ಭಾರತ ಅದಕ್ಕೆ ಅವಕಾಶ ನೀಡಲಿಲ್ಲ.

ಉಭಯ ತಂಡಗಳ ನಡುವಿನ ಇನ್ನೆರಡು ಪಂದ್ಯಗಳು ಸೆ. 20 ಹಾಗೂ 23 ರಂದು ನಡೆಯಲಿವೆ.

ಬೆಂಗಳೂರಿಗೆ ಆಗಮಿಸಲಿರುವ ಲೂಯಿಸ್ ಹ್ಯಾಮಿಲ್ಟನ್

ಬೆಂಗಳೂರು (ಐಎಎನ್‌ಎಸ್):
ಫಾರ್ಮುಲಾ ಒನ್ ಚಾಲಕ ಇಂಗ್ಲೆಂಡ್‌ನ ಲೂಯಿಸ್ ಹ್ಯಾಮಿಲ್ಟನ್ ಸೆಪ್ಟೆಂಬರ್ 27 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.`ಹ್ಯಾಮಿಲ್ಟನ್ ಸೆ. 27 ರಂದು ಬೆಂಗಳೂರು- ಮೈಸೂರು ರಸ್ತೆಯಲ್ಲಿ (ನೈಸ್ ರಸ್ತೆ) ತಮ್ಮ ಮೆಕ್‌ಲಾರೆನ್ ಮರ್ಸಿಡಿಸ್ ಕಾರಿನಲ್ಲಿ ಪ್ರದರ್ಶನ ನೀಡಲಿದ್ದಾರೆ~ ಎಂದು ಮೆಕ್‌ಲಾರೆನ್ ತಂಡದ ಪ್ರಾಯೋಜಕರು ತಿಳಿಸಿದ್ದಾರೆ.

ಹ್ಯಾಮಿಲ್ಟನ್ 2008ರ ಬಳಿಕ ಮೂರು ಸಲ ಭಾರತಕ್ಕೆ ಆಗಮಿಸಿದ್ದಾರೆ. 2008 ರಲ್ಲಿ ಮುಂಬೈಗೆ ಭೇಟಿ ನೀಡಿದ್ದ ಅವರು 2009 ರಲ್ಲಿ ಕೋಲ್ಕತ್ತ ಹಾಗೂ ಕಳೆದ ವರ್ಷ ಚೆನ್ನೈಗೆ ಭೇಟಿ ನೀಡಿದ್ದರು.ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಬೆಂಗಳೂರು: ಕರ್ನಾಟಕ ಎಂಜಿನಿಯರ್ಸ್‌ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3ರ ವರೆಗೆ ಕಮಲಾನಗರ 8ನೇ ಮುಖ್ಯ ರಸ್ತೆ ಎಂಜಿನಿಯರ್ಸ್‌ ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದೆ.ಪ್ರವೇಶ ಪತ್ರ ಮತ್ತು ವಿವರಗಳಿಗೆ ಕೆ. ರಾಮಸ್ವಾಮಿ, ಮುಖ್ಯ ರೆಫರಿ (ದೂರವಾಣಿ ಸಂಖ್ಯೆ: 080-26634933/ಮೊಬೈಲ್ ನಂಬರ್: 9483960782)   ಅಥವಾ ನಂದಕುಮಾರ್, ಟೂರ್ನಿ ವ್ಯವಸ್ಥಾಪಕ ಕಾರ್ಯದರ್ಶಿ (ಮೊಬೈಲ್ ನಂಬರ್: 9980054200/9482534110) ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.