ಮಂಗಳೂರು: ಸಮೀಪದ ಬಾಳ ಪ್ರದೇಶದಲ್ಲಿರುವ ಎಂಆರ್ಪಿಎಲ್ನ ಮೂರನೇ ಹಂತದ ಘಟಕದಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಶನಿವಾರ ರಾತ್ರಿ ಕ್ರೇನ್ ಮಗುಚಿ ಬಿದ್ದು ಮೇಲ್ವಿಚಾರಕ ದಾವಣಗೆರೆಯ ಸಯ್ಯದ್ ಅಲಿ (23) ಗಂಭೀರವಾಗಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು.

ಕ್ರೇನ್ ಆಪರೇಟರ್ ಉಪೇಂದ್ರ ಯಾದವ್ (22) ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಯ್ಯದ್ ಅಲಿ ಪ್ರಸ್ತುತ ಮೂಲ್ಕಿಯಲ್ಲಿ ವಾಸವಿದ್ದರು.

ಮೂರನೇ ಹಂತದ ಘಟಕದಲ್ಲಿ ನಿತ್ಯಾನಂದ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದು, ಸಯ್ಯದ್ ಆಲಿ ಸೂಪರ್ವೈಸರ್ ಹಾಗೂ ಕೃಷ್ಣಕಾಂತ್ ಸೈಟ್ ಸೂಪರ್ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ 8.15ಕ್ಕೆ ಲಾರಿಯಿಂದ ಕಬ್ಬಿಣ ಸಲಾಕೆಗಳ ಬಂಡಲ್ಗಳನ್ನು ಕ್ರೇನ್ ಮೂಲಕ ಕೆಳಗಿಳಿಸತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿತು.

ಕ್ರೇನ್ ಆಪರೇಟರ್ ಉಪೇಂದ್ರ ಯಾದವ್ ಯಾವುದೇ ಮುಂಜಾಗ್ರತೆ ವಹಿಸದೆ ಥಟ್ಟನೆ ಕ್ರೇನ್ ಚಲಾಯಿಸದ ಪರಿಣಾಮ ಬಲ ಮಗ್ಗುಲಿಗೆ ಪಲ್ಟಿ ಹೊಡೆಯಿತು. ಪರಿಣಾಮ ಸಯ್ಯದ್ ಅಲಿ ಹಾಗೂ ಉಪೇಂದ್ರ ಯಾದವ್ ಗಂಭೀರವಾಗಿ ಗಾಯಗೊಂಡರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಸಯ್ಯದ್ ಭಾನುವಾರ ನಸುಕಿನ 2 ಗಂಟೆಗೆ ಕೊನೆಯುಸಿರೆಳೆದರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.