ಸೋಮವಾರ, ಏಪ್ರಿಲ್ 19, 2021
28 °C

ಕ್ಷೇಮ ಸಮಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣು, ದಂತ ಶಿಬಿರ

ರಾಜಾಜಿನಗರದ ಕರ್ನಾಟಕ ಸೆಕ್ಯುಲರ್ ಅಂಡ್ ಸೋಷಿಯಲ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಕಣ್ಣಿನ ಮತ್ತು ದಂತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

ಸ್ಥಳ: ಶ್ರೀ ಅಕ್ಕಮಹಾದೇವಿ ಸೇವಾ ಸಮಾಜ ಸಾಮೂಹಿಕ ಭವನ, 3ನೇ ಮುಖ್ಯರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್ 2ನೇ ಹಂತ.ಹೃದಯ ಕಾಳಜಿಯ ಜಾಲ

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ 324 ಡಿ 6 ಜಿಲ್ಲಾ ಘಟಕದ 5ನೇ ವಾರ್ಷಿಕ ಸಮಾವೇಶ ಶನಿವಾರ ಸಂಜೆ 6 ಮತ್ತು ಭಾನುವಾರ ಬೆಳಿಗ್ಗೆ 9ಕ್ಕೆ ವಿಜಯನಗರ ಬಂಟರ ಸಂಘದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ಸಹಯೋಗದಲ್ಲಿ  ‘ಹೃದಯದ ಆರೈಕೆ’ ಕುರಿತಂತೆ  ‘ದಶಲಕ್ಷ ಜನತೆಗೆ ಹೃದಯ ಕಾಳಜಿ’ ಎಂಬ ಈ ಕಾರ್ಯಕ್ರಮ ಆರಂಭಿಸುತ್ತಿದೆ. ಈ ಮೂಲಕ ಸುಮಾರು 200 ಗ್ರಾಮೀಣ ಪ್ರದೇಶಗಳಲ್ಲಿ ಹೃದ್ರೋಗ ಕೇಂದ್ರಗಳು ಆರಂಭವಾಗಲಿವೆ. ಕಂಪ್ಯೂಟರ್, ಕಾರ್ಡಿಯೋಗ್ರಾಮ್, ಬ್ರಾಡ್‌ಬ್ಯಾಂಡ್ ಸಂಪರ್ಕದ ಮುಖಾಂತರ ಈ ಗ್ರಾಮಗಳು ಹೃದಯ ಕಾಳಜಿಯ ಜಾಲದಲ್ಲಿ ಸಂಪರ್ಕದಲ್ಲಿರುತ್ತವೆ.ಆಯುರ್ ಮೇಳ

ನೂರಾರು ಬ್ರಾಂಡ್‌ಗಳ ಆಯುರ್ವೇದ ಔಷಧದ ರಿಟೇಲ್ ಮಳಿಗೆ ‘ಆಯುರ್ ಶಾಪ್’, ವಾರ್ಷಿಕೋತ್ಸವದ ಅಂಗವಾಗಿ ‘ಆಯುರ್ವೇದ ಜಾಗೃತಿ ಮೇಳ’ವನ್ನು ನಡೆಸುತ್ತಿದೆ. ಇಲ್ಲಿ ಸಂದಿ ನೋವು, ಋತುಚಕ್ರ, ಸ್ತ್ರೀ ಸಂಬಂಧಿ ಸಮಸ್ಯೆಗಳ ಕುರಿತು ಉಚಿತ ಕಾರ್ಯಾಗಾರ, ರಕ್ತದಾನ ಶಿಬಿರ, ಮಕ್ಕಳಿಗೆ ಉಚಿತ ಸ್ವರ್ಣಪ್ರಾಶನ, ಫೇಶಿಯಲ್, ನಾಡಿ  ಪರೀಕ್ಷೆ ಗಳಂತಹ ಚಟುವಟಿಕೆಗಳಿರುತ್ತವೆ. ಮೇಳ ಏ.30ರವರೆಗೆ ಮಾತ್ರ. ಮಾಹಿತಿಗೆ: 98451 83887. ಸ್ಥಳ: ಜೆ.ಪಿ. ನಗರ, ರಾಗಿಗುಡ್ಡ ದೇವಸ್ಥಾನದ ಬಳಿ.ಆರೋಗ್ಯ ಶಿಬಿರ

ಆರ್‌ಎಂವಿ 2ನೇ ಹಂತದ ವೇದವಾರಿದಿ ಪ್ರತಿಷ್ಠಾನ ಮತ್ತು ಧನ್ವಂತರಿ ಕ್ಲಿನಿಕ್ ಜಂಟಿ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಡಾ. ರೇಷ್ಮಾ ಆಚಾರ್ಯ ಮತ್ತು ಇತರ ತಜ್ಞ ವೈದ್ಯರು ನಡೆಸಿಕೊಡಲಿದ್ದಾರೆ. ಪಾಲಿಕೆ ಸದಸ್ಯ ಡಿ. ವೆಂಕಟೇಶ್, ನ್ಯಾಯವಾದಿ ಪಡುಬಿದ್ರಿ ರಾಘವೇಂದ್ರರಾವ್, ಪತ್ರಕರ್ತ ಮುಳ್ಳಹಳ್ಳಿ ಸೂರಿ, ವೈದ್ರಾದ ಡಾ. ಬಿ.ವಿ. ಆಚಾರ್ಯ ಮತ್ತು ಅನ್ನಪೂರ್ಣ ಭಟ್, ಸಾಹಿತಿ ಬಾ. ರಾಮಚಂದ್ರ ಉಪಾಧ್ಯಾಯ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಥಳ: ನಂ 53, 2ನೇ ಮೇನ್, ವೆಂಕಟಾಚಾರಿ ನಗರ. ಮಾಹಿತಿಗೆ: 98802 83635.

ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಸಂಶೋಧನಾ ವಿಭಾಗವು ಶನಿವಾರ ಬೆಳಿಗ್ಗೆ 9ರಿಂದ 5 ಗಂಟೆಯ ವರೆಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಜಾಗೃತಿ ಶಿಬಿರ ನಡೆಸಲಿದೆ.ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ, ಅಧಿಕ ಕೊಬ್ಬಿನಾಂಶ, ಮಂಡಿ ನೋವು ಮತ್ತು ಇತರ ದೀರ್ಘಕಾಲಿಕ ರೋಗಗಳಿಗೆ ನುರಿತ ವೈದ್ಯರಿಂದ ಪ್ರಕೃತಿ ಚಿಕಿತ್ಸೆ, ಯೋಗ ಮತ್ತು ಪಥ್ಯಗಳ ಸಲಹೆ, ಉಚಿತ ತಪಾಸಣೆ ಇರುತ್ತದೆ. ಅರ್ಹ ರೋಗಿಗಳಿಗೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಸಂಶೋಧನಾ ವಿಭಾಗದಲ್ಲಿ ಅಥವಾ ಜಿಂದಾಲ್ ಧರ್ಮಾರ್ಥ ಆಸ್ಪತ್ರೆಯಲ್ಲಿ 21 ರಿಂದ 30 ದಿನಗಳ ಉಚಿತ ಚಿಕಿತ್ಸೆ ದೊರೆಯಲಿದೆ.

ಸ್ಥಳ: ಜಿಂದಾಲ್ ಧರ್ಮಾರ್ಥ ಆಸ್ಪತ್ರೆ, ರಾಜಾಜಿನಗರ. ಮಾಹಿತಿಗೆ: 2371 7777, 2332 4935.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.