ಮಂಗಳವಾರ, ಏಪ್ರಿಲ್ 20, 2021
25 °C

ಖಾನಾಪುರದಲ್ಲಿ ವರುಣನ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ದಟ್ಟ ಅರಣ್ಯಪ್ರದೇಶ ಹೊಂದಿರುವ ಖಾನಾಪುರದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಂತೆ ಖಾನಾಪುರ, ಲೋಂಡಾ, ಗುಂಜಿ, ನಂದಗಡ, ಬೀಡಿ, ಕಕ್ಕೇರಿ, ಪಾರಿಶ್ವಾಡ ಹಾಗೂ ಇಟಗಿ ಭಾಗಗಳಲ್ಲಿ ಸತತವಾಗಿ ಉತ್ತಮ ರೀತಿಯಲ್ಲಿ ಮಳೆ ಸುರಿದ ವರದಿಯಾಗಿದೆ.ಜೀವನದಿಯಾದ ಮಹದಾಯಿ ಹಾಗೂ ಮಲಪ್ರಭಾ ನದಿ ಪಾತ್ರದ ಪ್ರದೇಶಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಎರಡೂ ನದಿಗಳಿಗೆ ನೀರಿನ ಪ್ರಮಾಣ ಹೆಚ್ಚಾಗಿ ಉಕ್ಕಿ ಹರಿದು ಬರುತ್ತಿದೆ. ಬತ್ತಿಹೋಗುತ್ತಿರುವ ಮಲಪ್ರಭೆಯ ಸೊಬಗನ್ನು ಹೆಚ್ಚಿಸಲು ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.ಜು.3ರವರೆಗೆ ಖಾನಾಪುರ 16.8 ಮೀ.ಮೀ, ಅಸೋಗಾ 31.8 ಮೀ.ಮೀ, ಗವ್ವಾಳಿ 44.4 ಮೀ.ಮೀ, ಲೋಂಡಾ 48.4ಮೀ.ಮೀ, ಬೀಡಿ 25.2 ಮೀ.ಮೀ, ನಾಗರಗಾಳಿ 26.1 ಮೀ.ಮೀ, ಜಾಂಬೋಟಿ 25.6 ಮೀ.ಮೀ, ಆಮಗಾಂವ 49.7ಮೀ.ಮೀ ಪ್ರಮಾಣದ ಮಳೆ ಸುರಿದ ವರದಿಯಾಗಿದೆ. ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಯಾವುದೇ ಹಾನಿ ಯಾದ ಬಗ್ಗೆ ವರದಿಯಾಗಿಲ್ಲ. ಜನ ಜೀವನ ಅಸ್ತವ್ಯಸ್ಥವಾಗಿರುತ್ತದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.ಬಿಡುವು ನೀಡಿದ ಮಳೆ

ಬೆಳಗಾವಿ: ನಗರದಲ್ಲಿ ಬುಧವಾರ ಆಗಾಗ ತುಂತುರು ಮಳೆ ಸುರಿದಿದ್ದು ಬಿಟ್ಟರೆ ದಿನವಿಡೀ ಮಳೆ ಬಿಡುವು ನೀಡಿತ್ತು.

ನಗರದಲ್ಲಿ ಮಂಗಳವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿತ್ತು. ರಾತ್ರಿಯಿಂದ ಬೆಳಗಿನವರೆಗೂ ಉತ್ತಮ ವಾಗಿ ಸುರಿದ ಮಳೆಯು ಮುಂಜಾನೆ ಯಾಗುತ್ತಿದ್ದಂತೆ ತೀವ್ರತೆ ಕಳೆದು ಕೊಂಡಿತು. ಬೆಳಿಗ್ಗೆ ಆಗಾಗ ತುಂತುರು ಮಳೆ ಸುರಿದಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ಮಳೆ ಸುರಿಯಲಿಲ್ಲ. ದಿನವಿಡೀ ಮೋಡ ಕವಿತ ವಾತಾವರಣ ನಿರ್ಮಾಣವಾಗಿತ್ತು.ಮಂಗಳವಾರದಿಂದ ಬುಧವಾರ ಬೆಳಿಗ್ಗೆ ವರೆಗೆ ಜಿಲ್ಲೆಯಲ್ಲಿ ಒಟ್ಟು ಸರಾಸರಿ 639 ಮಿ.ಮೀ. ಮಳೆ ಯಾಗಿದೆ. ಖಾನಾಪುರ ತಾಲ್ಲೂಕಿ ನಲ್ಲಿ 246.9 ಮಿ.ಮೀ, ಬೆಳಗಾವಿಯಲ್ಲಿ 202.3 ಮಿ.ಮೀ., ಬೈಲಹೊಂಗಲದಲ್ಲಿ 92.4 ಮಿ.ಮೀ. ಮಳೆ ಸುರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.