ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಖಾರದ ಪುಡಿ ಎರಚಿ 2.45 ಲಕ್ಷ ದರೋಡೆ

Published:
Updated:

ಬೆಂಗಳೂರು: ಮೀನು ವ್ಯಾಪಾರಿಯ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು 2.45 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಹಲಸೂರು ಕೆರೆ ಸಮೀಪ ಭಾನುವಾರ ರಾತ್ರಿ ನಡೆದಿದೆ. ತಮಿಳುನಾಡು ಮೂಲದ ಮಸ್ತಾನ್ ದರೋಡೆಗೊಳಗಾದವರು.ವ್ಯವಹಾರದ ನಿಮಿತ್ತ ಶಿವಾಜಿನಗರಕ್ಕೆ ಬಂದಿದ್ದ ಅವರು ಅಲ್ಲಿನ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿಕೊಂಡು ಆಟೊದಲ್ಲಿ ಹಲಸೂರಿಗೆ ಹೋಗುತ್ತಿದ್ದರು.ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರು ಹೋಗುತ್ತಿದ್ದ ಆಟೊ ಅಡ್ಡಗಟ್ಟಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಹಣವಿದ್ದ ಕೈಚೀಲ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಹಲಸೂರು  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Post Comments (+)